Oplus_0

ಚಿತ್ತಾಪುರ ಗದ್ಜಲದ ನಡುವೆ ಅಂಬಿಗರ ಚೌಡಯ್ಯ ಜಯಂತಿ ಪೂರ್ವಭಾವಿ ಸಭೆ, ಜಯಂತಿ ಸಮಿತಿ ಅಧ್ಯಕ್ಷರಾಗಿ ಭೀಮಣ್ಣ ಸಾಲಿ, ಭೀಮಣ್ಣ ಸೀಬಾ ಆಯ್ಕೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಹಸೀಲ್ ಕಚೇರಿಯಲ್ಲಿ ತಾಲೂಕು ಕೋಲಿ ಸಮಾಜದ ಮುಖಂಡರ ಚಿರಾಟ, ಹಾರಾಟ ಮತ್ತು ಮಾತಿನ ಚಕಮಕಿ ಹಾಗೂ ಗದ್ದಲದ ನಡುವೆ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯ ಪೂರ್ವಭಾವಿ ಸಭೆ ನಡೆಯಿತು.

ಪಟ್ಟಣದ ತಹಸೀಲ್ ಕಚೇರಿಯಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯ ಪೂರ್ವಭಾವಿ ಸಭೆಯಲ್ಲಿ, ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಳ್ಳುವ ಜಯಂತಿ ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ಕೋಲಿ ಸಮಾಜದ ಅಧ್ಯಕ್ಷ ಶಿವುಕುಮಾರ ಯಾಗಾಪೂರ ಅವರ ಹೆಸರು ಹಾಕಬೇಕು ಅಂತ ಒಂದು ಗುಂಪು, ಕೋಲಿ ಸಮಾಜದ ಅಧ್ಯಕ್ಷ ನಿಂಗಣ್ಣ ಹೆಗಲೇರಿ ಅವರ ಹೆಸರು ಹಾಕಬೇಕು ಅಂತ ಇನ್ನೊಂದು ಗುಂಪು, ಈ ಎರಡು ಗುಂಪುಗಳ ಮುಖಂಡರು ಪಟ್ಟು ಹಿಡಿದಾಗ ಇಡೀ ಸಭೆ ರಣರಂಗವಾಯಿತು. ಎರಡು ಗುಂಪುಗಳ ಮುಖಂಡರ ನಡುವೆ ಮಾತಿನ ಸಂಘರ್ಷ ನಡೆಯಿತು.

ಸುದೀರ್ಘವಾಗಿ ಚರ್ಚೆ, ವಾದ ವಿವಾದಗಳು ನಡೆದು ಕೊನೆಗೆ ಇಬ್ಬರು ಅಧ್ಯಕ್ಷರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಬಾರದು ಮತ್ತು ವೇದಿಕೆಯ ಮೇಲೆ ಕೂಡಿಸಬಾರದು ಬದಲಾಗಿ ಜಯಂತಿ ಸಮಿತಿ ಅಧ್ಯಕ್ಷರಾಗಿ ಹಿರಿಯ ಮುಖಂಡರಾದ ಭೀಮಣ್ಣ ಸಾಲಿ ಮತ್ತು ಭೀಮಣ್ಣ ಸೀಬಾ ಅವರನ್ನು ಮಾಡಿ ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರು ಹಾಕಬೇಕು ಮತ್ತು ಅವರಿಬ್ಬರನ್ನು ಮಾತ್ರ ವೇದಿಕೆಯಲ್ಲಿ ಕೂಡಿಸಬೇಕು ಎಂಬ ನಿರ್ಣಯವಾಯಿತು. ನಂತರ ತಹಶೀಲ್ದಾರ್ ನಾಗಯ್ಯ ಹಿರೇಮಠ ಮುಖಂಡರ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿ ಎಲ್ಲರೂ ಸೇರಿ ಅಂಬಿಗರ ಚೌಡಯ್ಯ ಜಯಂತಿ ಬಹು ವಿಜೃಂಭಣೆಯಿಂದ ಆಚರಿಸೋಣ ಎಂದರು.

ಅಂದು ಬೆಳಿಗ್ಗೆ 9.30 ಕ್ಕೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಪೂಜೆ ಸಲ್ಲಿಸಿ 10 ಗಂಟೆಗೆ ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ನಡೆಯಲಿರುವ ಜಯಂತಿ ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ಸೂಚಿಸಿದರು. ನಂತರ ಮೆರವಣಿಗೆಗೆ ಚಾಲನೆ ನೀಡಲಾಗುವುದು ಎಂದರು. ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ, ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಫೋಟೋ ಪೂಜೆ ಮಾಡಬೇಕು ಎಂದು ಸೂಚನೆ ನೀಡಿದರು.

ಕೋಲಿ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಎಮ್ಮೆನೋರ್, ಹಣಮಂತ ಸಂಕನೂರ, ತಮ್ಮಣ್ಣ ಡಿಗ್ಗಿ, ಶರಣಪ್ಪ ನಾಟೀಕಾರ, ಗುಂಡು ಐನಾಪುರ, ಬಸವರಾಜ ಚಿನ್ನಮಳ್ಳಿ, ರಾಮಲಿಂಗ ಬಾನರ್, ಸುರೇಶ್ ಬೆನಕನಳ್ಳಿ, ದೇವಿಂದ್ರ ಅರಣಕಲ್, ಶಿವುಕುಮಾರ ಸುಣಗಾರ, ಕಾಶಪ್ಪ ಡೋಣಗಾಂವ, ಸಾಬಣ್ಣ ನಾಲವಾರ, ದಶರಥ ದೊಡ್ಡಮನಿ, ಸಂತೋಷ ಇವಣಿ, ಸಾಬಣ್ಣ ಡಿಗ್ಗಿ, ಸಾಬಣ್ಣ ಭರಾಟೆ, ಬಸಣ್ಣ ತಳವಾರ, ಮಲ್ಲಿಕಾರ್ಜುನ ಅಲ್ಲೂರಕರ್, ಮಲ್ಲಿನಾಥ ಸಂಗಾವಿ, ಮಹೇಶ್ ಸಾತನೂರು, ದೇವರಾಜ್ ತಳವಾರ, ಸಂತೋಷ ಮಳಬಾ, ಶರಣು ಅರಣಕಲ್, ಅರುಣ್ ಯಾಗಾಪೂರ, ಭೀಮಾಶಂಕರ ಹೋಳಿಕಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!