ಕೋಲಿ ಸಮಾಜದ ತಾಲೂಕು ಯುವ ಅಧ್ಯಕ್ಷರ ಆಯ್ಕೆಯಲ್ಲಿ ನಿಯಮ ಉಲ್ಲಂಘನೆ ಬೇಕಾಬಿಟ್ಟಿ ಆಯ್ಕೆ ಯುವ ಮುಖಂಡರ ಆಕ್ರೋಶ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಯುವ ಕೋಲಿ ಸಮಾಜದ ಅಧ್ಯಕ್ಷರ ಆಯ್ಕೆಯನ್ನು ಸಮಾಜದ ಹಿರಿಯ ಮುಖಂಡರ ಸಮ್ಮುಖದಲ್ಲಿ ಸಭೆಯನ್ನು ಕರೆಯಲಾಗಿತ್ತು, ಸದರಿ ಸಭೆಯಲ್ಲಿ ತಾಲೂಕು ಯುವ ಅಧ್ಯಕ್ಷ ಸ್ಥಾನಕ್ಕೆ 30 ರಿಂದ 40 ವರ್ಷ ವಯಸ್ಸಿನವರಿಗೆ ನಿಗದಿ ಮಾಡಲಾಗಿತ್ತು. ಆದರೆ ಈ ನಿಯಮ ಉಲ್ಲಂಘಿಸುವ ಮೂಲಕ ಸದರಿ ವಯಸ್ಸಿನ ಮಿತಿಗೆ ಅನುಗುಣವಾಗಿ ಆಯ್ಕೆ ಮಾಡದೆ ತಮ್ಮ ಅನುಕೂಲಕ್ಕೆ ತಕ್ಕಂತೆ, ಬೇಕಾಬಿಟ್ಟಿಯಾಗಿ, ತಮಗೆ ಬೇಕಾದವರಿಗೆ ವಯಸ್ಸಿನ ಒಳಗಿನವರಿಗೆ ಆಯ್ಕೆ ಮಾಡಲಾಗಿದೆ ಎಂದು ಸಮಾಜದ ಯುವ ಮುಖಂಡರಾದ ರಾಜಶೇಖರ.ಬಿ.ಮೂಲಿಮನಿ ಹೊಸ್ಸುರ, ಶೇಖರ.ಎಸ್.ಬಡಿಗೇರ ಆಲೂರ, ಸಂಗಣ್ಣ ನಾಟೀಕಾರ ಯರಗಲ್, ರಮೇಶ್ ಬಲರಾಮ ಚೌಕ್, ಹಣಮಂತ ಬೇವಿನಗಿಡ ಭಂಕಲಗಾ ಅವರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಾಜದ ಹಿರಿಯ ಮುಖಂಡರು ಸಮಾಜ ಸಂಘಟಿಸುವ ಕೆಲಸ ಮಾಡದೇ ಸಮಾಜಘಾತುಕರಾಗಿದ್ದಾರೆ ಎಂದು ಕಿಡಿ ಕಾರಿದರು.
ಸುಮಾರು ವರ್ಷಗಳಿಂದ ಸಮಾಜಕ್ಕಾಗಿ ದುಡಿದವರಿಗೆ ಯಾವುದೇ ಮಾನ್ಯತೆ ನೀಡಿರುವುದಿಲ್ಲ. ಅಲ್ಲದೆ ನಮಗೆ ಸಮಾಜದ ಯಾವುದೇ ಸ್ಥಾನಕ್ಕೆ ಇಷ್ಟವಿಲ್ಲದಿದ್ದರೂ ಸಹಿತ ಒತ್ತಾಯಪೂರ್ವಕವಾಗಿ ಆಯ್ಕೆ ಮಾಡಿರುತ್ತಾರೆ ಇದಕ್ಕೆ ನಮ್ಮದು ಒಪ್ಪಿಗೆ ಇರುವುದಿಲ್ಲ. ಇದರಿಂದ ಸದರಿ ಆಯ್ಕೆಗೆ ನಮ್ಮ ಆಕ್ಷೇಪಣೆ ಇದೆ ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಶಿವಕುಮಾರ ಯಾಗಾಪೂರ ನೇತೃತ್ವದಲ್ಲಿ ನಾವುಗಳು ಯುವಜನಾಂಗವನ್ನು ಒಗ್ಗೂಡಿಸಿ ಸಮಾಜದ ಸಂಘಟನೆ ಮತ್ತಷ್ಟು ಬಲಿಷ್ಠಗೊಳಿಸುವ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.