Oplus_0

ಶ್ರೀ ಸಿಮೆಂಟ್ ಕಂಪೆನಿಯಿಂದ ಡೋಣಗಾಂವ ಗ್ರಾಮಕ್ಕೆ ಅನ್ಯಾಯ ಮುಖಂಡರ ಆಕ್ರೋಶ, ಬಂದ್ ಮಾಡಿದ ರಸ್ತೆ ತೆರವುಗೊಳಿಸಲು ಆಗ್ರಹ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮಕ್ಕೆ ಶ್ರೀ ಸಿಮೆಂಟ್ ಕಂಪೆನಿಯಿಂದ ತೀವ್ರ ಅನ್ಯಾಯ ಆಗುತ್ತಿದ್ದು ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಮಲ್ಲಿಕಾರ್ಜುನ ಹೊನ್ನಪೂರ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ಸಿಮೆಂಟ್ ಕಂಪೆನಿಯ ವ್ಯಾಪ್ತಿಯಲ್ಲಿ ಬರುವ ಡೋಣಗಾಂವ ಗ್ರಾಮ ಪಂಚಾಯಿತಿಗೆ ಸದರಿ ಕಂಪೆನಿಯಿಂದ ತೆರಿಗೆ ಹಣ ಪಾವತಿಸಿಲ್ಲ ಹಾಗೂ ಸಿಎಸ್ಆರ್ ಅಡಿ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡಿಲ್ಲ ಹಾಗೂ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ ಹೀಗಾಗಿ ಕಂಪೆನಿಯಿಂದ ನಮ್ಮ ಗ್ರಾಮಕ್ಕೆ ಯಾವುದೇ ಲಾಭವಾಗಿಲ್ಲ ಎಂದು ಆರೋಪಿಸಿದರು.

ಡೋಣಗಾಂವ ಗ್ರಾಮದಿಂದ ಕೋಡ್ಲಾ ಗ್ರಾಮಕ್ಕೆ ಸಂಪರ್ಕಿಸಬೇಕಾದ ಹಳೆಯ ರಸ್ತೆಯಲ್ಲಿ ಗಣಿಗಾರಿಕೆ ನಡೆಸುವ ಸಲುವಾಗಿ ರಸ್ತೆ ಬಂದ್ ಮಾಡಿದ್ದಾರೆ ಇದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ ಹೀಗಾಗಿ ಕೂಡಲೇ ಬಂದ್ ಮಾಡಿದ ರಸ್ತೆ  ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಇಲ್ಲದಿದ್ದರೆ ಗ್ರಾಮಸ್ಥರನ್ನು ಸೇರಿಸಿ ಕಂಪೆನಿ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಡೋಣಗಾಂವ ಗ್ರಾಮದಲ್ಲಿ ಶ್ರೀ ಸಿಮೆಂಟ್ ಕಂಪೆನಿ ಕೋಡ್ಲಾ ದಿಂದ ಸೂಮಾರು 2 ಕಿ.ಮೀ ದೂರದಲ್ಲಿ, ಸದರಿ ಸಿಮೆಂಟ್ ಕಂಪನಿಯವರು ನಡೆಸುತ್ತಿರುವ ಮೈನಿಂಗ್ (ಗಣಿಗಾರಿಕೆ) ಮತ್ತು ಧೂಳಿನಿಂದ ರೈತರ ಹೊಲಗಳ ಮೇಲೆ ಹಾಗೂ ಜನ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಅಲ್ಲದೇ ಕುಡಿಯುವ ನೀರಿನಲ್ಲಿ ದುರ್ವಾಸನೆ ಬೀರುತ್ತಿದೆ ಎಂದು ಹೇಳಿದರು.

ಸೇಡಂ ತಾಲೂಕಿನ ಕೋಡ್ಲಾ ಶ್ರೀ ಸಿಮೆಂಟ್ ಕಂಪೆನಿಯಿಂದ ಡೋಣಗಾಂವ ಗ್ರಾಮದ ರೈತರ ಜಮೀನಿನ ಬೆಳೆಗಳಿಗೆ ಆಗುತ್ತಿರುವ ಹಾನಿಯನ್ನು ಮತ್ತು ನಷ್ಟವನ್ನು ಭರಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ಸಹಾಯಕ ಕೃಷಿ ನಿರ್ದೇಶಕರು ಜಂಟಿ ಕೃಷಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಿದರು.

ಗ್ಯಾರಂಟಿ ಯೋಜನೆ ಸಮಿತಿ ಜಿಲ್ಲಾ ಸದಸ್ಯ ಶರಣು ಡೋಣಗಾಂವ, ಗ್ರಾ.ಪಂ ಸದಸ್ಯ ಶಿವಶರಣ ಮೆಂಗಾ, ಮುಖಂಡ ಮಲ್ಲಿಕಾರ್ಜುನ ಹೊನ್ನಪೂರ, ಅವರು ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬೆಳೆದ ಎಲ್ಲಾ ಸುತ್ತಮುತ್ತಲ್ಲಿನ ಬೆಳೆಗಳ ಮೇಲೆ ಶ್ರೀ ಸಿಮೆಂಟ್ ಕಾರ್ಖಾನೆಯಿಂದ ಹಾರಿದ ಧೂಳು ಆವರಿಸಿರುತ್ತದೆ. ಸದರಿ ಧೂಳಿದಿಂದ ರೈತರು ಬೆಳೆದ ಬೆಳೆಗಳ ಇಳುವರಿ ಹಾಗೂ ಗುಣಮಟ್ಟ ಕೂಡ ಹಾಳಾಗುತ್ತಿದೆ, ಅಕ್ಕ ಪಕ್ಕ ದನಕರುಗಳ ಮೇಲೆ ರೋಗದ ಲಕ್ಷಣಗಳು ಕಂಡುಬಂದಿದೆ, ಬ್ಲಾಸ್ಟಿಂಗನಿಂದಾಗಿ ಸತತವಾಗಿ ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ಉಂಟಾಗಿದೆ ಮತ್ತು  ಬೆಳೆಗಳ ಮೇಲೆ ಪರಿಣಾಮ ಬೀರಿ ಇಳುವರಿ ಕುಂಠಿತವಾಗಿದೆ ಹಾಗೂ ಮಣ್ಣಿನ ಫಲವತ್ತತೆ ಕಳೆದುಕೊಳ್ಳುತ್ತಿರುವುದು ಮತ್ತು ಜನರು ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಟ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್ ಬನಾರ್, ಶರಣು ಪೂಜಾರಿ, ಮುಖಂಡರಾದ ಭೀಮಶಂಕರ್ ಕ್ಯಾಲಬಾ ರಾಜೋಳ್ಳಾ, ಭೀಮರಾಯ ಅಲ್ಲೂರಕರ್, ತಿಪ್ಪಣ್ಣ ಭಾಗೋಡಿ ಇದ್ದರು.

“ಎರಡನೇ ಕಲ್ಲು ಗಣಿಗಾರಿಕೆಯ ಕ್ರಷರ್ ಕಾಮಗಾರಿಯನ್ನು ಡೋಣಗಾಂವ ಗ್ರಾಮದಿಂದ ಕೋಡ್ಲಾ ಗ್ರಾಮಕ್ಕೆ ಅಡ್ಡಲಾಗಿ ನಿರ್ಮಿಸುತ್ತಿರುವ ಕಾಮಗಾರಿಯನ್ನು ಕೂಡಲೇ ತಡೆಹಿಡಿಯಬೇಕು ಇಲ್ಲವಾದಲ್ಲಿ ಕಲ್ಲು ಗಣಿಗಾರಿಕೆ ತಡೆಹಿಡಿದು ಹೋರಾಟ ಮಾಡಲಾಗುವುದು”.- ಮಲ್ಲಿಕಾರ್ಜುನ ಹೊನ್ನಪೂರ ಮುಖಂಡರು ಡೋಣಗಾಂವ.

Spread the love

Leave a Reply

Your email address will not be published. Required fields are marked *

error: Content is protected !!