ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದ್ದ ವೇಮನ್ ಮಹಾಯೋಗಿ: ಅಳ್ಳೋಳ್ಳಿ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಹಾಯೋಗಿ ವೇಮನ್ 15 ನೇ ಶತಮಾನದಲ್ಲಿ ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರ, ಕವಿ, ಸಮಾಜ ಚಿಂತಕರು, ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದರು ಎಂದು ಅಳ್ಳೋಳ್ಳಿ ಸಾವಿರ ದೇವರ ಮಠದ ಶ್ರೀ ಸಂಗಮನಾಥ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಅಳ್ಳೋಳ್ಳಿ ಗ್ರಾಮದಲ್ಲಿ ತಾಲೂಕು ರೆಡ್ಡಿ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ್ ವಚನಕಾರರು, ಮಹಾಯೋಗಿಯಾಗಿದ್ದಾರೆ ಎಂದು ಬಣ್ಣಿಸಿದರು.
ಹೇಮರೆಡ್ಡಿ ಮಲ್ಲಮ್ಮ ಸಮಾಜದ ತಾಲೂಕ ಅಧ್ಯಕ್ಷ ಗುರುಗೌಡ ಇಟಗಿ, ಗೌರವಾಧ್ಯಕ್ಷ ದೇವುಗೌಡ ಬಳವಡಗಿ, ಉಪಾಧ್ಯಕ್ಷ ಯಂಕಾರೆಡ್ಡಿ ಯರಗಲ್, ಖಜಾಂಚಿ ಶ್ರೀಶೈಲ ರೆಡ್ಡಿ ಭಂಕಲಗಿ, ಕಾರ್ಯದರ್ಶಿ ಅಣ್ಣಾರಾಯ ವಿ.ಇವಣಿ, ರೆಡ್ಡಿ ಸಮಾಜ ಹಾಗೂ ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಹಿರಿಯ ಮುಖಂಡರಾದ ಲಿಂಗಾರೆಡ್ಡಿ ಬಾಬುರೆಡ್ಡಿ ನಾಲವಾರ, ಜಗಣ್ಣಗೌಡ ರಾಮತೀರ್ಥ, ಶರಣಗೌಡ ಭೀಮನಳ್ಳಿ, ವೀರಣ್ಣಗೌಡ ಪರಸರೆಡ್ಡಿ, ಡಾ. ಶ್ರೀನಿವಾಸ ರೆಡ್ಡಿ, ಸಿದ್ದಣ್ಣಗೌಡ ಮಾಲಿ ಪಾಟೀಲ, ಸೋಮಶೇಖರ ಪಾಟೀಲ ಬೆಳಗುಂಪಾ, ಉಮಾರೆಡ್ಡಿ ಭಾಸರೆಡ್ಡಿ ನಾಲವಾರ, ಜಗನ್ನಾಥ ರೆಡ್ಡಿ ಪೊಲೀಸ್ ಪಾಟೀಲ, ಶಿವಲಿಂಗಪ್ಪ ವಾಡೇದ್, ರವೀಂದ್ರ ರೆಡ್ಡಿ ಭಂಕಲಗಿ ಸೋಮನಾಥ ರೆಡ್ಡಿ ಮುಶೆನಿ, ಅಯ್ಯಣ್ಣ ರೆಡ್ಡಿ ಅಳ್ಳೋಳ್ಳಿ, ಸೋಮಶೇಖರಗೌಡ ಬೆಳಗುಂಪಾ, ಅಣ್ಣಾರಾವ್ ಬಾಳಿ, ಶಾಂತಕುಮಾರ್ ಹತ್ತಿ, ಮಲ್ಲಿಕಾರ್ಜುನ ರೆಡ್ಡಿ ಇಜಾರ್, ಬಸವರಾಜ ಮಾಲಿ ಪಾಟೀಲ, ನಾಗರೆಡ್ಡಿ ಗೋಪಸೇನ್, ಮಹಾಂತೇಶ್ ಪಾಟೀಲ ಬಾಗಲಕೋಟ, ಶಿವರೆಡ್ಡಿ ಪಾಲಪ್, ಅಶೋಕರೆಡ್ಡಿ ಅಲ್ಲೂರ, ಸತ್ಯನಾರಾಯಣ ರೆಡ್ಡಿ, ಮುನಿಂದ್ರರೆಡ್ಡಿ ಭಂಕಲಗಿ, ರವೀಂದ್ರ ರೆಡ್ಡಿ ಅನ್ನಪುರ, ಮೋಹನ್ ರೆಡ್ಡಿ ಭಂಕಲಗಿ, ರಾಗುನಾಥ ರೆಡ್ಡಿ ಯರಗಲ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.