ಶಹಾಬಾದ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಗೌರವ ಅಭಿಯಾನದ ಪೂರ್ವಭಾವಿ ಸಭೆ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಬಿಜೆಪಿ ವತಿಯಿಂದ ಸಂವಿಧಾನದ ಗೌರವ ಅಭಿಯಾನ ಕಾರ್ಯಕ್ರಮ ಜ. 24 ರಂದು ಕಲಬುರ್ಗಿಯಲ್ಲಿ ಜರುಗುತ್ತಿರುವ ಪ್ರಯುಕ್ತ ಶಹಾಬಾದ ಮಂಡಲ ಬಿಜೆಪಿ ಕಚೇರಿಯಲ್ಲಿ ಸೋಮವಾರ ಪೂರ್ವಭಾವಿ ಸಭೆ ಜರುಗಿತು.
ಜಿಲ್ಲಾ ಪ್ರಭಾರಿ ಧರ್ಮಣ್ಣ ಇಟಗಿ ಮಾತನಾಡಿ, ಸಂವಿಧಾನ ರಚನೆಯಾಗಿ 75 ವರ್ಷವಾದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಈಗಾಗಲೇ ಸಂವಿಧಾನ ಗೌರವ ಅಭಿಯಾನವನ್ನು ಹಮ್ಮಿಕೊಂಡಿದೆ, ದೇಶದ ಎಲ್ಲಾ ರಾಜಕೀಯ ಪಕ್ಷಗಳ ವೋಟ್ ಬ್ಯಾಂಕ್ ಎಂದೇ ಪರಿಗಣಿತವಾಗಿರುವ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಸಮುದಾಯದ ಜನರಲ್ಲಿ ಸಂವಿಧಾನದ ಅರಿವು ಮತ್ತು ಬಿಜೆಪಿ ಈ ಸಮುದಾಯದ ಜನರ ಹಾಗೂ ಸಂವಿಧಾನ ರಕ್ಷಣೆಗೆ ಕಟಿಬದ್ಧವಾಗಿದೆ ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಸಂವಿಧಾನವನ್ನು ಪ್ರಚಾರ ಮಾಡುವ ಮೂಲಕ ಸಾರ್ವಜನಿಕರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ಖಾರವಾಗಿ ನುಡಿದರು.
ಜಿಲ್ಲಾ ಪ್ರಭಾರಿಗಳಾದ ಎಸ.ಜಿ.ಭಾರತಿ, ಗುರುರಾಜ ಸೂಲಳ್ಳಿ ಸಭೆಯಲ್ಲಿ ಇದ್ದರು. ಈ ಸಂಧರ್ಭದಲ್ಲಿ ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ನಾರಾಯಣ ಕಂದಕೂರ, ಅರುಣ ಪಟ್ಟಣಕರ್, ಕನಕಪ್ಪ ದಂಡಗುಲಕರ್, ಶೀವಕುಮಾರ ಇಂಗಿನಶೆಟ್ಟಿ, ಅಶೋಕ ಜಿಂಗಾಡೆ, ಬಸವರಾಜ ಬಿರಾದಾರ, ದುರ್ಗಪ್ಪ ಪವಾರ, ಯಲ್ಲಪ್ಪ ದಂಡಗುಲಕರ್, ಶ್ರೀನೀವಾಸ ನೇದಲಗಿ, ಗೋವಿಂದ ಕುಸಾಳೆ, ಜ್ಯೋತಿ ಶರ್ಮ, ಶಶಿಕಲಾ ಸಜ್ಜನ, ಪದ್ಮಾ ಕಟಗೆ, ನಂದಾ ಗುಡೂರ, ಉಮೇಶ್ ನಿಂಬಾಳಕರ, ಲೋಹಿತ ಮಳಖೇಡ, ಅವಿನಾಶ್ ಸಾಳುಂಕೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ದೇವದಾಸ ಜಾಧವ ಸ್ವಾಗತಿಸಿ, ನಿರೂಪಿಸಿದರು, ದೀನೇಶ ಗೌಳಿ ವಂದಿಸಿದರು.