Oplus_0

ಚಿತ್ತಾಪುರದಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ನೇತೃತ್ವದಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರದ ಭವ್ಯ ಮೆರವಣಿಗೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತಿ ನಿಮಿತ್ತ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ನೇತೃತ್ವದಲ್ಲಿ ಮಂಗಳವಾರ ಚೌಡಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ತಹಸೀಲ್ ಕಚೇರಿಯಿಂದ ಪ್ರಾರಂಭವಾದ ಭವ್ಯ ಮೆರವಣಿಗೆ, ಸ್ಟೇಷನ್ ರಸ್ತೆ, ನಾಗಾವಿ ವೃತ್ತ, ಜನತಾ ವೃತ್ತ, ತರಕಾರಿ ಮಾರುಕಟ್ಟೆ ರಸ್ತೆ, ಭುವನೇಶ್ವರಿ ವೃತ್ತ, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಲಾಡ್ಜಿಂಗ್ ಕ್ರಾಸ್ ಮೂಲಕ ಅಂಬಿಗರ ಚೌಡಯ್ಯ ವೃತ್ತಕ್ಕೆ ತಲುಪಿ ಸಮಾಪ್ತಿಗೊಂಡಿತ್ತು. ಡೊಳ್ಳು ಕುಣಿತ, ಯುವಕರ ಕುಣಿತ, ಹಾಗೂ ಹಲಗೆ ವಾದನ, ಕುಂಬ ಹೊತ್ತ ಮಹಿಳೆಯರಿಂದ ಮೆರವಣಿಗೆಗೆ ಕಳೆ ಬಂದಿತ್ತು.

ಜಯಂತಿ ಸಮಿತಿ ಅಧ್ಯಕ್ಷ ಭೀಮಣ್ಣ ಸೀಬಾ, ಅಂಬಿಗರ ಚೌಡಯ್ಯ ನಿಗಮದ ಮಾಜಿ ನಿರ್ದೇಶಕ ಶರಣಪ್ಪ ನಾಟೀಕಾರ, ತಾಲೂಕು ಯುವ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕರ್, ಗೌರವಾಧ್ಯಕ್ಷ ಗುಂಡು ಐನಾಪುರ, ಮಲ್ಲಯ್ಯ ಮುತ್ಯಾ ಅಲ್ಲೂರ, ಮುಖಂಡರಾದ ಅಣ್ಣಾರಾವ್ ಸಣ್ಣೂರಕರ್, ತಮ್ಮಣ್ಣ ಡಿಗ್ಗಿ, ಶಿವುಕುಮಾರ ಸುಣಗಾರ, ಸಾಬಣ್ಣ ಡಿಗ್ಗಿ, ಕಾಶಪ್ಪ ಡೋಣಗಾಂವ, ಸಂತೋಷ ಇವಣಿ, ಸಾಬಣ್ಣ ಭರಾಟೆ, ಶರಣು ಅರಣಕಲ್, ದಶರಥ ದೊಡ್ಡಮನಿ, ಮಹಾದೇವ ಕೊನಿಗೇರಿ, ಮಹಾದೇವ ಮುಗುಟಿ, ದುರ್ಗಪ್ಪ ಯಾಗಾಪೂರ, ಸೂರ್ಯಕಾಂತ ಕೊಂಕನಳ್ಳಿ, ಸಂಜೀವಪ್ಪ ಸಂಕನೂರ, ಮಲ್ಲಿಕಾರ್ಜುನ ಮುಗಳನಾಗಾಂವ, ಭೀಮು, ಆನಂದ ಯರಗಲ್,  ಮಹೇಶ್ ಸಾತನೂರು, ಅರುಣ್ ಯಾಗಾಪೂರ, ಗೂಳಿ ಡಿಗ್ಗಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮುಖಂಡರು, ಯುವಕರು ಭಾಗವಹಿಸಿದ್ದರು. ಪಿಎಸ್ಐ ಶ್ರೀಶೈಲ್ ಅಂಬಾಟಿ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

ಚಿತ್ತಾಪುರ ಪಟ್ಟಣದಲ್ಲಿ ಕೋಲಿ ಸಮಾಜದ ಹಿರಿಯರ, ಯುವಕರ ಸಹಕಾರದಿಂದ ಅಂಬಿಗರ ಚೌಡಯ್ಯ ನವರ ಭಾವಚಿತ್ರದ ಮೆರವಣಿಗೆ ಸಡಗರ ಸಂಭ್ರಮದಿಂದ ಬಹಳ ಅದ್ದೂರಿಯಾಗಿ ಯಶಸ್ವಿಯಾಗಿದೆ. ಬರುವ ದಿನಗಳಲ್ಲಿ ತಾಲೂಕಿನಲ್ಲಿ ಕೋಲಿ ಸಮಾಜದ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಇದೇ ರೀತಿ ಎಲ್ಲರೂ ಸಹಕರಿಸಬೇಕು.”-ಶಿವುಕುಮಾರ ಯಾಗಾಪೂರ ಕೋಲಿ ಸಮಾಜದ ತಾಲೂಕು ಅಧ್ಯಕ್ಷರು ಚಿತ್ತಾಪುರ.

Spread the love

Leave a Reply

Your email address will not be published. Required fields are marked *

error: Content is protected !!