ವಾಡಿ ಬಿಜೆಪಿ ಕಚೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಅವರ ಜಯಂತಿ ಆಚರಿಸಲಾಯಿತು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಸಮಾಜದಲ್ಲಿ ನಿರಂತರವಾಗಿ ನಡೆಯುವ ಶೋಷಣೆ, ಸಾಮಾಜಿಕ ಪಿಡುಗುಗಳ ವಿರುದ್ಧ ತಮ್ಮ ವಚನಗಳ ಮೂಲಕವೇ ಖಂಡಿಸಿ, ಸಾಮರಸ್ಯ ಜೀವನ ಸಾರಿ ಅಂಬಿಗರ ಚೌಡಯ್ಯ ಅವರು ನಿಜಶರಣರಾದರು ಎಂದರು.
12 ನೇ ಶತಮಾನದ ಶರಣರ ಸಮಕಾಲಿನಲ್ಲಿ ಬಸವಣ್ಣನವರ ಅನುಯಾಯಿಯಾಗಿ ಸಾಮಾಜಿಕ ಅಸಮಾನತೆ ವಿರುದ್ಧ ಕ್ರಾಂತಿಯ ಚಳುವಳಿ ಸಾರಿದರು. ಅವರು ತಮ್ಮ ವಚನಗಳಲ್ಲಿ ಸಮಾಜದ ಅಂಕು ಡೊಂಕುಗಳ ವಿರುದ್ಧ ಕಟುವಾಗಿ ಟೀಕಿಸಿದರು, ಅವರ ಮಾತುಗಳಲ್ಲಿ ಸಾಮಾಜಿಕ ಕಾಳಜಿ ಕಾಣುತ್ತಿತ್ತು, ಅವರ ವಚನಗಳಲ್ಲಿನ ಅನ್ಯಾಯ ಮತ್ತು ಅಸಮಾನತೆಯ ವಿರುದ್ಧ ಕಟುವಾಗಿ ಟೀಕಿಸುತ್ತಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಇಂಗಳಗಿ ಶಕ್ತಿ ಕೇಂದ್ರದ ಬಿಜೆಪಿ ಅಧ್ಯಕ್ಷ ಸೋಮು ಚವ್ಹಾಣ, ಕೋಲಿ ಸಮಾಜದ ಉಪಾಧ್ಯಕ್ಷ ರಾಜು ಕೊಲಿ, ಕಾರ್ಯದರ್ಶಿ ವಿಶ್ವರಾಧ್ಯ ತಳವಾರ, ಮುಖಂಡರಾದ ರಾಮಚಂದ್ರ ರಡ್ಡಿ, ಶರಣಗೌಡ ಚಾಮನೂರ, ಅರ್ಜುನ ಕಾಳೆಕರ, ಶಿವಶಂಕರ ಕಾಶೆಟ್ಟಿ, ಕಿಶನ ಜಾಧವ, ಅಂಬದಾಸ ಜಾಧವ, ಯಂಕಮ್ಮ ಗೌಡಗಾಂವ, ಶರಣಮ್ಮ ಯಾದಗಿರ, ಮಲ್ಲಿಕಾರ್ಜುನ ಸಾತಖೇಡ, ಅನಿಲ ಕುಮಾರ ನಿರಡಗಿ, ಮಹೇಶ್ ಕೊಲಿ, ಆನಂದ ಶಿರವಾಳ, ರತ್ನಪ್ಪ ಮೆಸ್ತ್ರಿ, ರವಿ ಕೊಲಿ, ಅಜಯ ಕುಮಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.