ಚಿತ್ತಾಪುರ ಅಂಬಿಗರ ಚೌಡಯ್ಯ ಜಯಂತಿಯ ಶುಭಕೋರುವ ಬ್ಯಾನರ್ ಹರಿದು ತೆಗೆದುಕೊಂಡು ಹೋದ ವ್ಯಕ್ತಿಗೆ ಪತ್ತೆ ಮಾಡಿದ ಪೊಲೀಸ್ ಕಾರ್ಯಕ್ಕೆ ಶ್ಲಾಘನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದಲ್ಲಿ ಜನವರಿ 21 ರಂದು ಅಂಬಿಗರ ಚೌಡಯ್ಯ ನವರ ಜಯಂತಿಯ ಆಚರಣೆ ಅಂಗವಾಗಿ ಜೂನಿಯರ್ ಕಾಲೇಜು ಹತ್ತಿರ ಹಾಕಿದ ಶುಭಕೋರುವ ಸಲುವಾಗಿ ರಾಜಕೀಯ ಮುಖಂಡರುಗಳು ಹಾಗೂ ಸಮಾಜದ ಮುಖಂಡರುಗಳು ಇರುವ ಒಂದು ಪ್ಲೆಕ್ಸನ್ನು (ಬ್ಯಾನರ್) ಮಂಗಳವಾರ ಬೆಳಗಿನ ಜಾವ 5 ಗಂಟೆಯಿಂದ 5.30 ಗಂಟೆಯ ಮದ್ಯದಲ್ಲಿ ಯಾರೋ ಕಿಡಿಗೇಡಿಗಳು ಸದರಿ ಬ್ಯಾನರನ್ನು ಹರಿದು ತೆಗೆದುಕೊಂಡು ಹೋಗಿದ್ದರಿಂದ ಕೋಲಿ ಸಮಾಜದವರು ಆಕ್ರೋಶವನ್ನು ವ್ಯಕ್ತಪಡಿಸಿ ತಹಸಿಲ್ದಾರ್ ಕಾರ್ಯಾಲಯದ ಹತ್ತಿರ ಕ್ಷೀಪ್ರ ಪ್ರತಿಭಟನೆ ಮಾಡಿ ಕೂಡಲೇ ಕಿಡಿಗೇಡಿಗಳಿಗೆ ಪತ್ತೆ ಮಾಡುವಂತೆ ಮನವಿಯನ್ನು ಸಲ್ಲಿಸಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸ್ ಅಧಿಕಾರಿಗಳು ಕೇವಲ 5 ತಾಸಿನಲ್ಲಿಯೇ ಕಿಡಿಗೇಡಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಅಪರ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣವರ್ ಹಾಗೂ ಡಿವೈಎಸ್ಪಿ ಶಂಕರಗೌಡ ಪಾಟೀಲ ರವರ ಮಾರ್ಗದರ್ಶನದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ ಅವರ ನೇತೃತ್ವದಲ್ಲಿ ಪಿ.ಎಸ್.ಐ (ಕಾ ಮತ್ತು ಸು) ಶ್ರೀಶೈಲ್ ಅಂಬಾಟಿ, ಪಿಎಸ್‌ಐ (ತನಿಖೆ) ಚಂದ್ರಾಮಪ್ಪ ಹಾಗೂ ಸಿಬ್ಬಂದಿಗಳಾದ ಬಸವರಾಜ ಹೆಚ್ ಸಿ, ಸವಿಕುಮಾರ ಸಿಪಿಸಿ, ರವಿಕುಮಾರ ಸಿಪಿಸಿ, ದತ್ತು ಪಿಸಿ, ಅಯ್ಯಣ್ಣ ಪಿಸಿ, ಅಬ್ದುಲ್ ರೆಹಮಾನ್ ಪಿಸಿ, ಸಿದ್ದರಾಮೇಶ ಪಿಸಿ, ರವರನ್ನೊಳಗೊಂಡ ತಂಡವನ್ನು ರಚಿಸಿ ಬ್ಯಾನರ್ ಹರಿದು ತೆಗೆದುಕೊಂಡು ಹೋದ ಕಾಶಿ ಗಲ್ಲಿಯ ಲಕ್ಷ್ಮಣ ಸಾಯಿಬಣ್ಣ ಕಾಶಿ ಎನ್ನುವ ವ್ಯಕ್ತಿಗೆ ಬ್ಯಾನರ್ ಸಮೇತ ಪತ್ತೆ ಮಾಡಿ ಆ ವ್ಯಕ್ತಿಗೆ ಠಾಣೆಗೆ ತಂದು ಕುಲಂಕುಶವಾಗಿ ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಸದರಿಯವನು ಬ್ಯಾನರನ್ನು ತಮ್ಮ ಮನೆಯ ಮೇಲೆ ಮಳೆ ಬಂದಾಗ ಸೊರದಂತೆ ಹಾಕಲು ಬರುತ್ತದೆ ಅಂತಾ ಅಂದುಕೊಂಡು ಜೂನಿಯರ್ ಕಾಲೇಜು ಹತ್ತಿರ ಶುಭ ಕೋರಲು ಹಾಕಿರುವ ಬ್ಯಾನರನ್ನು ಬೆಳಗಿನ ಜಾವ ಹರಿದುಕೊಂಡು ಮನೆಗೆ ತೆಗೆದುಕೊಂಡು ಹೋಗಿರುತ್ತೆನೆ. ಅಲ್ಲದೇ ಸದರಿ ಬ್ಯಾನರನ್ನು ಹರಿದು ತೆಗೆದುಕೊಂಡು ಹೋಗಿದ್ದರಿಂದ ಇಷ್ಟೆಲ್ಲಾ ಆಕ್ರೋಶಕ್ಕೆ ಕಾರಣವಾಗುತ್ತದೆ ಅಂತಾ ತಿಳಿದಿರಲಿಲ್ಲ. ಆತನಿಗೆ ಈ ರೀತಿ ಮಾಡಲು ಯಾರು ಕುಮ್ಮಕ್ಕು ನೀಡಿರುವುದಿಲ್ಲ, ಅವನ ಮನೆಗೆ ಬೇಕಾಗಿರುವುದರಿಂದ ಬ್ಯಾನರ್ ಹರಿದು ತೆಗೆದುಕೊಂಡು ಹೋಗಿರುತ್ತಾನೆ ಅಂತಾ ವಿಚಾರಣೆಯಿಂದ ತಿಳಿದು ಬಂದಿರುತ್ತದೆ.
ಸದರಿ ಘಟನೆಯು ಜಯಂತಿಯ ದಿನದಂದು ಆಗಿರುವುದರಿಂದ ಸಮಾಜದವರು ಮತ್ತು ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆದ್ದರಿಂದ ನಮ್ಮ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಕೇವಲ 5 ತಾಸಿನಲ್ಲಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರಿಂದ ಸಮಾಜದವರು ಹರ್ಷವ್ಯಕ್ತಪಡಿಸಿರುತ್ತಾರೆ, ಸದರಿ ಅಧಿಕಾರಿ ಹಾಗೂ ಸಿಬ್ಬಂದಿಯವರ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.