Oplus_0

ವಿಜಯಪುರ ಕಾರ್ಮಿಕರ ಮೇಲೆ ಹಲ್ಲೆಗೈದ ಇಟ್ಟಂಗಿ ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕೆ ರವಿ ಬೆಳಮಗಿ ಆಗ್ರಹ

ನಾಗಾವಿ ಎಕ್ಸಪ್ರೆಸ್

ಶಹಾಬಾದ: ವಿಜಯಪುರ ಗಾಂಧಿನಗರದ ಸ್ಟಾರ್ ಚೌಕ ಹತ್ತಿರದ ಇಟ್ಟಂಗಿ ಮಾಲೀಕ ಖೇಮು ರಾಠೋಡ ಹಾಗೂ ಇತರರು ಸೇರಿ ಕಾರ್ಮಿಕರಿಗೆ ದೌರ್ಜನ್ಯ ಕಿರುಕುಳ ಹಾಗೂ ಕೈ-ಕಾಲು ಕಟ್ಟಿ ಹಾಕಿ ಹಲ್ಲೆ ಮಾಡಿರುವುದು ಬೆದರಿಕೆ ಹಾಕಿ ಹಲ್ಲೆ ಮಾಡಿರುವುದಕ್ಕೆ ಮಾದಿಗ ಸಮಾಜ ಯುವ ಮುಖಂಡ ರವಿ ಬೆಳಮಗಿ ತೀವ್ರವಾಗಿ ಖಂಡಿಸಿದ್ದಾರೆ.

ಮಾದಿಗ ಸಮಾಜದ ಅನಕ್ಷರಸ್ಥ ಕಾರ್ಮಿಕರಿಗೆ ದಿನನಿತ್ಯ ಅರೆಹೊಟ್ಟಿ ಅನ್ನ ನೀಡಿ, ದಿನದ 18-20 ತಾಸು ಕೆಲಸ ಮಾಡಿಸಿಕೊಂಡು ಜೀವ ಅನಾರೋಗ್ಯ ಇದ್ದರೂ ಕೆಲಸ ಮಾಡುವಂತೆ ಹೇಳಿ ಹೊಡೆದು ಗುಲಾಮ ಜೀತಪದ್ಧತಿ ಕಾನೂನು ಅನ್ವಯ ಇಟ್ಟಂಗಿ ಮಾಲೀಕ ಖೇಮುರಾಥೋಡ್ ಸಹಚರರು ರೌಡಿಜಂ ಮಾಡಿದ್ದಕ್ಕಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಶರಣರ ನಾಡು ವಿಜಯಪುರ ನಗರದಲ್ಲಿರುವ ಇಟ್ಟಂಗಿ ಮಾಲೀಕರ ಸಭೆ ಕರೆದು ಶೀಘ್ರವೇ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ದೌರ್ಜನ್ಯ ಹಲ್ಲೆಗೊಳಗಾದ ಈ ಕಾರ್ಮಿಕರಿಗೆ ವೈದ್ಯಕೀಯ ಚಿಕಿತ್ಸೆ, ಔಷಧ, ಉಪಚಾರ, ಕುಟುಂಬದ ಇತರ ಸದಸ್ಯರಿಗೆ ರಕ್ಷಣೆ ನೀಡಬೇಕು. ಸಂಬಂಧಿಸಿದ ಕಾರ್ಮಿಕ ಇಲಾಖೆ ಅಧಿಕಾರಿಗಳು ಜೀತ ಪದ್ಧತಿಯ ನಿರ್ಮೂಲನೆ ಕಾಯ್ದೆ ಅಡಿಯಲ್ಲಿ ಇಟ್ಟಂಗಿಬಟ್ಟಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು, ಈ ಕೂಡಲೇ ಇಟ್ಟಂಗಿ ಭಟ್ಟಿ ವ್ಯಾಪಾರ ಅನುಮತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ದೌರ್ಜನ್ಯ ಹಲ್ಲೆಗೆ ಒಳಗಾದ ಕಾರ್ಮಿಕರಿಗೆ ಸೂಕ್ತ ನ್ಯಾಯ ಒದಗಿಸಿ ಕೊಡಲು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!