Oplus_0

ಗುಂಡಗುರ್ತಿ ಬಳಿ ಜನಾಕರ್ಷಕ ಲುಂಬಿನಿ ಗಾರ್ಡನ್ ನಿರ್ಮಾಣಕ್ಕೆ 1.50 ಕೋಟಿ ಅನುದಾನ: ಸಚಿವ ಪ್ರಿಯಾಂಕ್ ಖರ್ಗ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಗುಂಡಗುರ್ತಿ ಗ್ರಾಮದ ಬಳಿ ಜನಾಕರ್ಷಕ ಲುಂಬಿನಿ ಉದ್ಯಾನವನವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಹಾಗೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಿದರು.

ಸುಮಾರು 10 ಎಕರೆ ವಿಸ್ತಾರ ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ಡಿಎಂ ಎಫ್ ಅನುದಾನ ಅಂದಾಜು ರೂ.1.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಉದ್ಯಾನವನ ವಿವಿಧ ಬಗೆಯ ಸೌಲಭ್ಯಗಳಿಂದ ಜನರನ್ನು ಆಕರ್ಷಿಸುತ್ತದೆ. ಮಿಯಾವಾಕಿ ಅರಣ್ಯ, ಚಿಟ್ಟೆ ಪಾರ್ಕ್, ಮರದ ಸೇತುವೆ, ಕಾರಂಜಿ, ವಿವಿಧ ಬಗೆಯ ಗಿಡಗಳು, ಹಸಿರು ಹುಲ್ಲಿನ ಹೊದಿಕೆ, ಮಕ್ಕಳ ಆಟದ ಸಾಮಾಗ್ರಿಗಳು, ವಾಟರ್ ಫಾಲ್ಸ್ ಇತ್ಯಾದಿ ಉದ್ಯಾನವನದ ಪ್ರಮುಖ ಆಕರ್ಷಣೆಯಾಗಿವೆ.

ಕಲಬುರಗಿ ಜಿಲ್ಲೆಯ ಗ್ರಾಮೀಣ ಭಾಗದ ಅದರಲ್ಲೂ‌ ಚಿತ್ತಾಪುರ ತಾಲೂಕಿನ‌ ಜನರ ಮನೋರಂಜನೆಗಾಗಿ ಹಾಗೂ ವಾರದ ಕೊನೆ ದಿನದಲ್ಲಿ ಮಕ್ಕಳ ಆಟೋಪೋಹಾರಕ್ಕಾಗಿ ಒಂದು ಸುಸಜ್ಜಿತ ಉದ್ಯಾನವನದ ಸ್ಥಾಪನೆ ಮಾಡಲಾಗಿದ್ದು. ವಿಭಿನ್ನ ಪ್ರಬೇಧದ ಚಿಟ್ಟೆಗಳು ಹಾಗೂ ಮರಗಿಡಗಳು ಹಾಗೂ ಹಚ್ಚ ಹಸಿರಿ‌ನ ಹುಲ್ಲು ಮನಸಿಗೆ ಉಲ್ಲಾಸವನ್ನುಂಟು ಮಾಡುತ್ತವೆ ಎಂದು ಸಚಿವರು ಹೇಳಿದರು.

ಉದ್ಯಾನವನ ನಿರ್ಮಾಣದ ಪ್ರಮುಖ ಉದ್ದೇಶ ನೋಡುಗರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸುಸುವುದರ ಜೊತೆಗೆ ಪುಸ್ತಕ ಪ್ರೇಮಿಗಳಿಗೆ ನೆಚ್ಚಿನ ತಾಣವನ್ನಾಗಿ ಮಾಡುವುದಾಗಿದೆ ಇದಕ್ಕೆ ಅಧಿಕಾರಿಗಳು ಸಾಕಷ್ಟು ಶ್ರಮಿಸಿದ್ದಾರೆ. ಮಕ್ಕಳು ಹಾಗೂ ಮಹಿಳೆಯರು ಮತ್ತು ಪರಿಸರ ಪ್ರೇಮಿಗಳು ಹಸಿರು ತುಂಬಿದ ಉದ್ಯಾನವನದಲ್ಲಿ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಇತ್ತ ಪುಸ್ತಕ ಪ್ರೇಮಿಗಳಿಗಾಗಿಯೇ ಗ್ರಂಥಾಲಯವೊಂದನ್ನು ಕೂಡಾ ಇಲ್ಲಿ ಸ್ಥಾಪಿಸಲಾಗಿದೆ. ಇದು ಓದುಗರಿಗೆ ಜ್ಞಾನಾರ್ಜನೆ ಮಾಡಿಕೊಳ್ಳುವ ತಾಣವಾಗಲಿದೆ. ಇಲ್ಲಿಗೆ ಬರುವವರು ಸಿಬ್ಬಂದಿಗಳೊಂದಿಗೆ ಸಹಕರಿಸಿ ಸ್ವಚ್ಛತೆ ಕಾಪಾಡಲು ಅನುವು ಮಾಡಿಕೊಡಬೇಕು ಎಂದು ಪ್ರಿಯಾಂಕ್ ಖರ್ಗೆ ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಡಿಸಿಎಫ್ ಸುಮಿತ್ ಪಾಟೀಲ, ಸಿಇಒ ಭಂವರ್ ಸಿಂಗ್ ಮೀನಾ, ಎಸ್.ಪಿ ಅಡ್ಡೂರು ಶ್ರೀನಿವಾಸಲು, ಅಡಿಷನಲ್ ಎಸ್.ಪಿ ಮಹೇಶ್ ಮೇಘಣ್ಣವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಅರಣ್ಯಾಧಿಕಾರಿ ವಿಜಯಕುಮಾರ್,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಮಾಜಿ ಸದಸ್ಯ ರಾಜೇಶ್ ಗುತ್ತೇದಾರ, ಗ್ರಾಪಂ ಮಾಜಿ ಅಧ್ಯಕ್ಷ ಸುನೀಲ್ ದೊಡ್ಡಮನಿ, ತಾಪಂ ಮಾಜಿ ಸದಸ್ಯ ನಾಮದೇವ ರಾಠೋಡ, ಮನ್ಸೂರ್ ಪಟೇಲ್, ಶಿವರಾಜ್ ಕಲಗುರ್ತಿ, ಶ್ರೀನಿವಾಸ ಗುಂಡಗುರ್ತಿ, ಗುಂಡು ಐನಾಪುರ, ಶರಣು ಡೋಣಗಾಂವ ಸೇರಿದಂತೆ ಹಲವರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!