ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಚಿತ್ತಾಪುರ ತಾಲೂಕು ಅಧ್ಯಕ್ಷರಾಗಿ ರೇವಣಸಿದ್ದಪ್ಪ ರೋಣದ್ ಅವಿರೋಧವಾಗಿ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಚಿತ್ತಾಪುರ ತಾಲೂಕು ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ ರೋಣದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಸರ್ಕಾರಿ ನಿವೃತ್ತ ನೌಕರರ ಸಭೆಯಲ್ಲಿ ಸರ್ವಸದಸ್ಯರ ಒಪ್ಪಿಗೆ ಮೇರೆಗೆ ನಿವೃತ್ತ ಶಿಕ್ಷಕ ರೇವಣಸಿದ್ದಪ್ಪ ರೋಣದ್ ಅವರು ಆಯ್ಕೆಯಾಗಿದ್ದಾರೆ. ನಿವೃತ್ತ ಶಿಕ್ಷಕರಾದ ಕಿಶನ್ ರಾಠೋಡ ರವರು ಸೂಚಿಸಿದರು ಮತ್ತು ಮೋನಯ್ಯ ಪಂಚಾಳ್ ಅನುಮೋದನೆ ಮಾಡಿದರು.
ಸಂಘದ ಗೌರವ ಅಧ್ಯಕ್ಷ ವಿಜಯಕುಮಾರ ಲೊಡ್ಡೆನೋರ, ಸಂಘದ ಖಜಾಂಚಿ ಮಲ್ಲಣ್ಣ ಮಾಸ್ಟರ್ ಮಡಬೂಳ, ಹಿರಿಯ ಮಾರ್ಗದರ್ಶಕರಾದ ಮಲ್ಲಿಕಾರ್ಜುನ ಮಲಕೂಡ, ಸುಭಾಷ್ ಮೆಂಗಜೀ, ನಿಜಾಮೋದಿನ್, ಶಿವಾಜಿ ನಿಂಬಾಳ್ಕರ್, ಬಸವರಾಜ ಕಲಬುರ್ಗಿ ಬಾಗೋಡಿ, ಹಾಜಪ್ಪ ಶಹಾಬಾದ್, ಕಾರ್ಯದರ್ಶಿ ಶಶಿಧರ ಉಟಗೂರ ರವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಮಹ್ಮದ್ ಅಬ್ದುಲ್ ನಬಿ, ರವಿ ಪೊದ್ದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮಹಾದೇವಪ್ಪ ಉಪ್ಪಾರ ಕಾರ್ಯಕ್ರಮ ನಿರೂಪಿಸಿದರು, ಕಿಶನ್ ರಾಠೋಡ ವಂದಿಸಿದರು. ನಂತರ ನೂತನ ಅಧ್ಯಕ್ಷ ರೇವಣಸಿದ್ದಪ್ಪ ರೋಣದ್ ಅವರಿಗೆ ನಿವೃತ್ತ ನೌಕರರು ಸನ್ಮಾನಿಸಿದರು.