Oplus_0

ವಿಜಯಪುರದ ಇಟ್ಟಂಗಿ ಭಟ್ಟಿ ಮಾಲೀಕರ ವಿರುದ್ಧ ಕಠಿಣ ಶಿಕ್ಷೆ ವಿಧಿಸಿ ಕಾರ್ಮಿಕರ ರಕ್ಷಣೆಗೆ ಸಿಐಟಿಯು ಆಗ್ರಹ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ವಿಜಯಪುರದ ಇಟ್ಟಂಗಿ ಭಟ್ಟಿ ಮಾಲೀಕರ ವಿರುದ್ಧ ಕಠಿಣ ಶಿಕ್ಷೆ ವಿಧಿಸಿ ಕಾರ್ಮಿಕರಿಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ತಾಲೂಕು ಸಮಿತಿ ಮುಖಂಡರು ಬುಧವಾರ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.

ಸಿಐಟಿಯು ತಾಲೂಕು ಅಧ್ಯಕ್ಷೆ ಶೇಖಮ್ಮ ಕುರಿ ಮಾತನಾಡಿ, ಕಾರ್ಮಿಕರ ಮೇಲೆ ಹಲ್ಲೆ ಮಾಡಿದ ಇಟ್ಟಂಗಿ ಭಟ್ಟಿ ಮಾಲೀಕನಿಗೆ ಬಂಧಿಸಿದರೆ ಸಾಲದು ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಾಗಲಿ ಅಥವಾ ದೇಶದಲ್ಲಿ ಯಾಗಲಿ ಕಟ್ಟಡ ಕಾರ್ಮಿಕರ ಅವಿಭಾಜ್ಯ ಅಂಗವಾಗಿರುವ ಹಾಗೂ ಇಟ್ಟಂಗಿ ಕಾರ್ಮಿಕರಿಗೆ ಕೆಲಸಕ್ಕೆ ಸೇರಿದ ಮುನ್ನ ಮುಂಗಡ ಹಣ ನೀಡಿ ಅತ್ಯಂತ ಕ್ರೂರ ಶೋಷಣೆಗೆ ಒಳಪಡಿಸುತ್ತಾರೆ. ಯಾವುದೇ ಕಾಯ್ದೆ ಕಾನೂನುಗಳಿಲ್ಲದೆ ಮತ್ತು ಸುರಕ್ಷತೆ ಇಲ್ಲದೆ ಕಟ್ಟಡಗಳಲ್ಲಿ ಹಾಗೂ ಇಟ್ಟಂಗಿ ಗೂಡಿನಲ್ಲಿ ಕುಟುಂಬ ಸಮೇತವಾಗಿ ಕೆಲಸಕ್ಕೆ ಹೋಗುತ್ತಾರೆ. ಆದರೆ ಇವರಿಗೆ ದುಡಿಸಿಕೊಳ್ಳುವ ನಿಯೋಜಕರಿಗೆ ಚಿಕ್ಕಪುಟ್ಟ ಗುತ್ತೇದಾರರಿಗೆ ಯಾವುದೇ ರೀತಿ ಕಾನೂನು ಕಟ್ಟಪ್ಪಣೆಗಳೇ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರೆದರೆ ಕಾರ್ಮಿಕರಿಗೆ ರಕ್ಷಣೆ ಎಂಬುದು ಸ್ವತಂತ್ರ ಭಾರತದಲ್ಲಿ ಮರೀಮಾಚಿಕೆಯಾಗುತ್ತದೆ. ಸಂಸ್ಥೆಗಳ ನೋಂದಣೆ ಮಾಡಿಸಿ ಸಂಸ್ಥೆಗಳ ಮೂಲಕ ಕಾರ್ಮಿಕರನ್ನು ದುಡಿಸಿಕೊಳ್ಳಬೇಕು. ಸಂಸ್ಥೆ ನೊಂದಣಿ ಇಲ್ಲದೆ ದುಡಿಸಿಕೊಳ್ಳುವ ನಿಯೋಜಕರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಹಲ್ಲೆಗೊಳಗಾದ ಕಾರ್ಮಿಕರಿಗೆ 15 ಲಕ್ಷ ಪರಿಹಾರ ನೀಡಬೇಕು ಮತ್ತು ಉಚಿತ ಚಿಕಿತ್ಸೆ ನೀಡಬೇಕು, ಸ್ಥಳೀಯರಿಗೆ ಉದ್ಯೋಗದಲ್ಲಿ ಪ್ರಥಮ ಆದ್ಯತೆ ನೀಡಬೇಕು, ಉದ್ಯೋಗ ಖಾತ್ರಿ ಯೋಜನೆ ನಗರಗಳಿಗೂ ವಿಸ್ತರಿಸಬೇಕು, 10 ಲಕ್ಷ ಮೌಲ್ಯವುಳ್ಳ ಇಟ್ಟಂಗಿ ಗೂಡುಗಳಿಗೆ ಸೆಸ್ ಹಾಕಬೇಕು, ಇಟ್ಟಂಗಿ ಗೂಡುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಶಾಲೆಯ ವ್ಯವಸ್ಥೆ ಮತ್ತು ವಸತಿ ನೀಡಬೇಕು ಎಂದು ಒತ್ತಾಯಿಸಿದರು.

ಕೆಆರ್ಪಿಎಸ್ ಅಧ್ಯಕ್ಷ ರಾಯಪ್ಪ ಹುರಮುಂಜಿ, ನಾಗಪ್ಪ ರಾಯಚೂರು, ಮೈತ್ರಾದೇವಿ, ಸುವರ್ಣ, ನಿಂಗಣ್ಣ ಪೂಜಾರಿ, ರತನ್ ಸಂಕನಕರ್, ಜೈನೊದ್ದಿನ್, ತಿಪ್ಪಣ್ಣ ಹಿಂದಿನಕೇರಿ, ಅಮುಲ್ ರಾಂಪೂರೆ, ಮಹೇಬೂಬ್ ಸೇರಿದಂತೆ ಅನೇಕರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!