ಚಿತ್ತಾಪುರ ತಹಸೀಲ್ ಕಚೇರಿಯಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತ್ಯುತ್ಸವ ನಿಮಿತ್ತ ಭಾವಚಿತ್ರಕ್ಕೆ ತಹಸೀಲ್ದಾರ್ ನಾಗಯ್ಯ ಹಿರೇಮಠ ಪೂಜೆ ಮಾಡಿ ಗೌರವ ನಮನಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ಮಡಿವಾಳ ಸಮಾಜದ ತಾಲೂಕಾಧ್ಯಕ್ಷ ಸಾಬಣ್ಣ ಪಿ. ಮಡಿವಾಳ, ಮುಖಂಡರಾದ ವಿಜಯಕುಮಾರ್ ಮಡಿವಾಳ, ದೇವೇಂದ್ರಪ್ಪ ಮಡಿವಾಳ, ಸುರೇಶಕುಮಾರ್ ಮಡಿವಾಳ, ಮಾದೇವ ಮಡಿವಾಳ, ಲಕ್ಷ್ಮಣ್ ಮಡಿವಾಳ, ಸೂರ್ಯಕಾಂತ್ ಮಡಿವಾಳ, ರವಿಕುಮಾರ್ ಮಡಿವಾಳ, ಗೌರೀಶ್ ಮಡಿವಾಳ, ನಾಗಣ್ಣ ಮಡಿವಾಳ ದಿಗ್ಗಾಂವ, ಶರಣಪ್ಪ ಮಡಿವಾಳ, ನಾಗರಾಜ ಮಡಿವಾಳ, ಹುಸನಪ್ಪ ಮಡಿವಾಳ ಕಾಶಿನಾಥ ಮಡಿವಾಳ ಸೇರಿದಂತೆ ಇತರರು ಇದ್ದರು.