ಭರತನೂರ ಗ್ರಾಮದಲ್ಲಿ 18 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗೆ ಎಂಎಲ್ಸಿ ಜಗದೇವ ಗುತ್ತೇದಾರ ಚಾಲನೆ
ನಾಗಾವಿ ಎಕ್ಸಪ್ರೆಸ್
ಕಾಳಗಿ : ತಾಲೂಕಿನ ಭರತನೂರ ಗ್ರಾಮದಲ್ಲಿ 2024-25ನೇ ಸಾಲಿನ ವಿಧಾನ ಪರಿಷತ್ ಸದಸ್ಯರ ಅನುದಾನ ಅಡಿಯಲ್ಲಿ ಸೋಮವಾರ ರಾಜಾಪೂರ – ಭರತನೂರ ಗ್ರಾಮದ ಮುಖ್ಯರಸ್ತೆಯಿಂದ ಚಿಕ್ಕಗುರುನಂಜೇಶ್ವರ ಮಠದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ನನ್ನ ಮೊದಲ ಅಭಿವೃದ್ಧಿ ಕಾಮಗಾರಿಯನ್ನು ಭರತನೂರ ಗ್ರಾಮದಲ್ಲಿ ಮಾಡುತ್ತಿರುವುದು ತುಂಬಾ ಸಂತೋಷದಾಯಕವಾಗಿದೆ ಎಂದು ಹೇಳಿದರು.
ಭರತನೂರ ಗ್ರಾಮದಲ್ಲಿ ರಸ್ತೆ ನಿರ್ಮಾಣಕ್ಕೆ ಗೋವಿಂದರೆಡ್ಡಿ ತುಮಕುಂಟಿ ರಾಜಾಪೂರ ಅವರು ಭೂಮಿ ನೀಡಿರುವುದು ಶ್ಲಾಘನೀಯವಾಗಿದೆ ಎಂದ ಅವರು ವಿಧಾನ ಪರಿಷತ್ ಸದಸ್ಯರ 10ಲಕ್ಷ ರೂ.ಅನುದಾನದಲ್ಲಿ ಭರತನೂರ ಗ್ರಾಮದ ಮುಖ್ಯರಸ್ತೆಯಿಂದ ಚಿಕ್ಕಗುರುನಂಜೇಶ್ವರ ಮಠದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಪರಿಶಿಷ್ಟ ಬಡಾವಣೆಯಲ್ಲಿ 8 ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.
ಭರತನೂರ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಮಾಜಿ ಜಿಪಂ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ, ಗೋವಿಂದರೆಡ್ಡಿ ತುಮಕುಂಟಿ, ಕೆಆರ್ ಐಡಿಎಲ್ ಎಇಇ ಅರುಣಕುಮಾರ ಬಿರಾದಾರ, ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ವೇದಪ್ರಕಾಶ ಮೊಟಗಿ, ಕಾಂಗ್ರೆಸ್ ವಕ್ತಾರ ರಾಘವೇಂದ್ರ ಗುತ್ತೇದಾರ, ಮುಖಂಡರಾದ ಶರಣಗೌಡ ಪೊಲೀಸ್ ಪಾಟೀಲ್, ಶಿವಶರಣಪ್ಪ ಕಮಲಾಪೂರ, ವಿಶ್ವನಾಥ ವನಮಾಲಿ, ಸಂತೋಷ ನರನಾಳ, ನೀಲಕಂಠ ಮಡಿವಾಳ, ಪ್ರಕಾಶ ಶೇಗಾಂವಕರ್, ಪ್ರಕಾಶ ಯಲಾಲಕರ್, ವಿಠ್ಠಲ್ ಶೇಗಾಂವಕರ್, ಶಾಮರಾವ್ ಪಾಟೀಲ, ರವಿದಾಸ ಪತಂಗೆ, ಮಲ್ಲಿಕಾರ್ಜುನ ಡೊಣ್ಣೂರ, ಅವಿನಾಶ್ ಗುತ್ತೇದಾರ, ಸಂತೋಷ ಪತಂಗೆ, ಶಾಮರಾವ್ ಕಡಬೂರ ಸೇರಿದಂತೆ ಅನೇಕ ಮುಖಂಡರು ಇದ್ದರು.