ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ, ಮಾನಸಿಕ ಮತ್ತು ದೈಹಿಕ ಸದೃಢತೆಗೆ ಕ್ರೀಡೆಗಳು ಪೂರಕ: ರಾಜೇಶ್ ಗುತ್ತೇದಾರ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ನವ ಯುವಕರ ಮಾನಸಿಕ ಮತ್ತು ದೈಹಿಕವಾಗಿ ಸಧೃಡತೆಗೆ ಕ್ರೀಡೆಗಳು ಪೂರಕವಾಗಿವೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಜೇಶ್ ಗುತ್ತೇದಾರ ಹೇಳಿದರು.
ಕಾಳಗಿ ತಾಲೂಕಿನ ಕೋಡ್ಲಿ ರಾಮನಗರ ತಾಂಡದಲ್ಲಿ ಶ್ರೀ ಸಂತ ಸೇವಾಲಾಲ್ ಮಹಾರಾಜರ ಮತ್ತು ಮಾತಾ ಜಗಧಂಬಾ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಅದನ್ನು ಬಿಟ್ಟು ದುಶ್ಚಟಗಳಿಗೆ ಬಲಿಯಾಗಿ ಉತ್ತಮ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು. ಕ್ರೀಡೆಗಳಲ್ಲಿಯೇ ಕ್ರಿಕೆಟ್ ಎಲ್ಲರಿಗೂ ಅಚ್ಚುಮೆಚ್ಚು ಆಗಿದ್ದು, ಎಲ್ಲಾ ವಯೋಮಾನದ ಕಿರಿಯರು, ಹಿರಿಯರು ಎನ್ನದೆ ಎಲ್ಲರೂ ಕ್ರಿಕೆಟ್ ಆಡುತ್ತಾರೆ ಎಂದರು. ಕ್ರೀಡೆಯಲ್ಲಿ ಸ್ಪರ್ಧಾ ಮನೋಭಾವ ಇರಬೇಕು ಹೊರತು ಸಂಘರ್ಷ ಮನೋಭಾವ ಇರಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಯುವ ಕರ್ನಾಟಕ ವೇದಿಕೆಯ ಅಧ್ಯಕ್ಷ ಸಚಿನ್ ಚವ್ಹಾಣ, ಗ್ರಾ.ಪಂ ಮಾಜಿ ಅಧ್ಯಕ್ಷ ಭರತ್ ಬುಳ್ಳಾ, ಯುವ ಕಾಂಗ್ರೆಸ್ ಮುಖಂಡ ಹಣಮಯ್ಯ ಎನ್. ಗುತ್ತೇದಾರ್ ಕೋಡ್ಲಿ, ವಿಎಸ್ಎಸ್ಎನ್ ಕೋಡ್ಲಿ ಉಪಾಧ್ಯಕ್ಷ ನಾಗೇಶ್ ಗುತ್ತೇದಾರ್, ಶೇಖರ್ ನಾಟೀಕರ್, ಪ್ರಕಾಶ್ ಕಾಳಗಿ, ಗೋವಿಂದ್ ಪವಾರ, ಸಚಿನ್ ರಾಥೋಡ್, ಲಕ್ಷ್ಮಣ್ ರಾಠೋಡ್ ಹಾಗೂ ಶಾಹಾಬಾದ ಕ್ರಿಕೆಟ್ ಟೀಮ್ ಕ್ಯಾಪ್ಟನ್ ಮತ್ತು ಹೂವಿನಬಾವಿ ತಾಂಡ ಕ್ಯಾಪ್ಟನ್ ಹಾಗೂ ಕೂಡ್ಲಿ ರಾಮನಗರ ತಾಂಡದ ಯುವಕರು ಇದ್ದರು.