Oplus_0

ವಾಡಿ ಬಿಜೆಪಿ ಕಛೇರಿಯಲ್ಲಿ ಕಲ್ಯಾಣ ಕರ್ನಾಟಕದ ಉತ್ಸವ ದಿನಾಚರಣೆ 

ನಾಗಾವಿ ಎಕ್ಸಪ್ರೆಸ್

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 76ನೇ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಹೈದರಾಬಾದ್‌ ನಿಜಾಮರ ಆಡಳಿತ ತುಂಬ ದರ್ಪದಿಂದ ಕೂಡಿತ್ತು, ಜನಸಾಮಾನ್ಯರು ಜೀವ ಭಯದ ಮಧ್ಯೆ ಉಸಿರಾಡುತ್ತಿದ್ದರು, ಇಡೀ ದೇಶ ಬ್ರಿಟಿಷರಿಂದ ಮುಕ್ತವಾದರೂ ನಿಜಾಮರು ಜನತಾ ಸ್ವಾತಂತ್ರ್ಯ ವಿರೋಧಿಸಿದರು ಎಂಬ ಕಾರಣಕ್ಕೆ ಈ ಭಾಗದಲ್ಲಿ ಆಕ್ರೋಶ ಮಡುಗಟ್ಟಿತ್ತು. ಹೈದರಾಬಾದ್ ಕೇಂದ್ರಿತ ಆಡಳಿತಕ್ಕೇ ಜನ ಸೆಡ್ಡುಹೊಡೆದರು. ವಿಮೋಚನೆಗಾಗಿ ರಕ್ತ ಚೆಲ್ಲಿ ಹೋರಾಡಿದರು. ಇದೇ ವೇಳೆ ಒಕ್ಕೂಟ ವ್ಯವಸ್ಥೆ ಜಾರಿಗಾಗಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ಸಂಸ್ಥಾನಗಳ ವಿರುದ್ಧ ಬಿಗಿನಿಲುವು ತಾಳಿದರು. ಪರಿಣಾಮ, ನಿಜಾಮರ ಆಡಳಿತದ ಎಲ್ಲ ಭಾಗ ಭಾರತದ ಮಡಿಲಿಗೆ ಸೇರಿತು.ಆದ್ದರಿಂದ ಈ ಕಲ್ಯಾಣ ಕರ್ನಾಟಕದ ನೆಲದಲ್ಲಿನ ಎಲ್ಲರೂ ಈ ಒಂದು ದಿನಕ್ಕೆ ಗೌರವ ಸಲ್ಲಿಸಿ, ನಮ್ಮನ್ನು ಸ್ವಾತಂತ್ರ್ಯ ಗೊಳಿಸಿದವರಿಗೆ ಋಣಿಯಾಗಿರುವುದು ನಮ್ಮ ಕರ್ತವ್ಯ ವಾಗಿದೆ ಎಂದು ಹೇಳಿದರು.

ಮುಖಂಡ ಬಸವರಾಜ ಪಂಚಾಳ ಮಾತನಾಡಿ, ಭಾರತಕ್ಕೆ ಆಗಸ್ಟ್ 15 ಸ್ವಾತಂತ್ರ್ಯ ದಿನದ ಸಂಭ್ರಮವಾದರೆ, ಕಲ್ಯಾಣ ಕರ್ನಾಟಕ ಭಾಗದ ನಮಗೆ ಮಾತ್ರ ಸೆಪ್ಟೆಂಬರ್ 17 ಸ್ವಾತಂತ್ರ್ಯ ದಿನದ ಸಂಭ್ರಮ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 13 ತಿಂಗಳು 2 ದಿನದ ನಂತರ ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ನಮ್ಮವರು ಮೊದಲು ಬ್ರಿಟಿಷರ ವಿರುದ್ಧ ಹೋರಾಡಿದರೇ, ನಂತರ ನಮ್ಮದೇ ದೇಶದ ಹೈದರಾಬಾದ್ ನಿಜಾಮನ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆಯಬೇಕಾಯಿತು. ಕಲ್ಯಾಣ ಕರ್ನಾಟಕ ಸೇರಿದಂತೆ ಹೈದ್ರಾಬಾದ್ ಪ್ರಾಂತ್ಯಕ್ಕೆ ಸ್ವಾತಂತ್ರ್ಯ ಸಿಗಲು ಕಾರಣೀಭೂತರಾಗಿದ್ದು, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರಿಗೆ ಕೃತಜ್ಞರಾಗಿ ಗೌರವಿಸಬೇಕಾಗಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಬಸವರಾಜ ಪಂಚಾಳ,ಸಿದ್ದಣ್ಣ ಕಲ್ಲಶೆಟ್ಟಿ, ಶರಣಗೌಡ ಚಾಮನೂರ, ಭೀಮರಾವ ದೊರೆ, ಹರಿ ಗಲಾಂಡೆ,ಅಶೋಕ ಹರನಾಳ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ,ಪ್ರೇಮ ರಾಠೋಡ, ಪ್ರಕಾಶ ಪುಜಾರಿ,ಆನಂದ ಇಂಗಳಗಿ,ಸೋಮು ಚವ್ಹಾಣ, ಷಣ್ಮುಖ ಚವ್ಹಾಣ, ಸುಭಾಷ್ ಪಂಚಾಳ, ದೇವೇಂದ್ರ ಬಡಿಗೇರ, ಅಶೋಕ ಪಂಚಾಳ, ಬಿ ಕೆ ಕಾಳಪ್ಪ, ಸಿದ್ದಣ್ಣ ಪಂಚಾಳ, ಅನಿಲ ಚವ್ಹಾಣ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!