ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಚಿತ್ತಾಪುರದಲ್ಲಿ ವಿಜಯೋತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಪ್ರಯುಕ್ತ ಪಟ್ಟಣದಲ್ಲಿ ಬಿಜೆಪಿ ಮಂಡಲ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಜಯ ಘೋಷಣೆಗಳ ಮೂಲಕ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮೀತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪರಿಶ್ರಮದ ಫಲವಾಗಿ ದೆಹಲಿ ವಿಧಾನಸಭೆಯ ಚುನಾವಣೆಯಲ್ಲಿ ಬಹುಮತ ಸಿಕ್ಕಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಗೋಪಾಲ ರಾಠೋಡ ಮಾತನಾಡಿ, ಕುಂಭಮೇಳದ ಬಗ್ಗೆ ಟೀಕಿಸಿ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡಿದ ಕಾಂಗ್ರೆಸ್ ಹಾಗೂ ಎಎಪಿ ಪಕ್ಷಗಳಿಗೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ಮುಖಂಡ ಸುರೇಶ್ ಬೆನಕನಳ್ಳಿ ಮಾತನಾಡಿ, ದೆಹಲಿಯಲ್ಲಿ ಕ್ರೇಜಿವಾಲ್ ದುರಾಡಳಿತಕ್ಕೆ ಮತದಾರರು ತಕ್ಕುದಾದ ಉತ್ತರ ನೀಡಿದ್ದಾರೆ. ಬಿಜೆಪಿ ಗೆ ಸಂಪೂರ್ಣ ಬಹುಮತ ನೀಡಿದ ಮತದಾರರಿಗೆ ಧನ್ಯವಾದಗಳು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ, ಮುಖಂಡರಾದ ಕೋಟೇಶ್ವರ ರೇಷ್ಮಿ, ಮಲ್ಲಿಕಾರ್ಜುನ ಅಲ್ಲೂರಕರ್, ಸಿದ್ದರಾಮೇಶ್ವರ ರೇಷ್ಮಿ, ಪ್ರಭು ಗಂಗಾಣಿ, ಅಕ್ಕಮಹಾದೇವಿ, ಶಿವರಾಮ ಚವ್ಹಾಣ, ಶಾಮಣ್ಣ ಮೇಧಾ, ತಿಪ್ಪಣ್ಣ ಇವಣಿ, ಎಂ.ಡಿ.ಯುನುಸ್, ಗೂಳಿ ಡಿಗ್ಗಿ, ಸಂಗು ಯರಗಲ್, ರಾಜು ದೊರೆ, ಕುನಾಲ್ ಜಿತುರೆ, ಅಂಬರೀಶ್ ರಂಗನೂರ್ ಸೇರಿದಂತೆ ಇತರರು ಇದ್ದರು.