ಚಿತ್ತಾಪುರ ತಹಸೀಲ್ ಕಚೇರಿಯಲ್ಲಿ ಪೂರ್ವಭಾವಿ ಸಭೆ, ಸೇವಾಲಾಲ್ ಮಹಾರಾಜರ ಜಯಂತ್ಯೋತ್ಸವ ಅದ್ದೂರಿಯಾಗಿ ಆಚರಣೆಗೆ ನಿರ್ಧಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಹಸೀಲ್ ಕಚೇರಿಯಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಬಂಜಾರ ಸಮಾಜದ ಮುಖಂಡರ ಅಭಿಪ್ರಾಯದ ಮೇರೆಗೆ ಈ ಬಾರಿ ಜಯಂತಿ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.
ಫೆ. 15 ರಂದು ಕರ್ನಾಟಕ ಸರ್ಕಾರದಿಂದ ಆಚರಿಸಲ್ಪಡುವ ಸೇವಾಲಾಲ್ ಮಹಾರಾಜರ ಜಯಂತಿಯನ್ನು ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸುವಂತೆ ಸೂಚಿಸಬೇಕು ಎಂದು ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಭೀಮಸಿಂಗ್ ಚವ್ಹಾಣ ಹೇಳಿದಾಗ ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ಈ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು. ಅಂದು ಬೆಳಗ್ಗೆ ಸೇವಾಲಾಲ್ ಮಹಾರಾಜರ ಭಾವಚಿತ್ರಕ್ಕೆ ಪೂಜೆ ನಂತರ ವೇದಿಕೆ ಕಾರ್ಯಕ್ರಮ ನಂತರ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಗೌರವಾಧ್ಯಕ್ಷ ಗೋಪಾಲ ರಾಠೋಡ, ಪುರಸಭೆ ಸದ್ಯಸ ಜಗದೀಶ್ ಡಿ. ಚವ್ಹಾಣ, ಮುಖಂಡರಾದ ತುಕಾರಾಮ್ ನಾಯಕ, ಕಿರಣ್ ಭೀಮಾ ನಾಯಕ, ಚಂದು ಜಾಧವ, ರವಿ ರಾಠೋಡ, ಯಂಕು ಕನ್ನು ಚವ್ಹಾಣ, ಚಂದರ್ ರಾಠೋಡ್ ಮೋಟನಳ್ಳಿ, ತಿರುಪತಿ ಚವ್ಹಾಣ, ಮನೋಜ್ ರಾಠೋಡ, ಮಹದೇವ್ ರಾಠೋಡ, ಪ್ರವೀಣ್ ಪವಾರ, ರಾಕೇಶ್ ಪವಾರ, ಶಿವರಾಮ್ ಚವ್ಹಾಣ, ಗೋಪಿ ರಾಠೋಡ, ಪಾಂಡು ರಾಠೋಡ, ರಾಮ ಚವ್ಹಾಣ, ರವಿ ಜಾಧವ, ಸುಭಾಷ್ ಜಾಧವ, ದೇವಿದಾಸ್ ಚವ್ಹಾಣ, ಜಗದೀಶ್ ಪವಾರ, ಆಕಾಶ್ ಚವ್ಹಾಣ, ಬಾಲರಾಜ್ ಚವ್ಹಾಣ, ವಿನೋದ್ ಪವಾರ, ತಿರುಪತಿ ರಾಠೋಡ, ಸಾಗರ್ ಚವ್ಹಾಣ, ಚಂದರಾಮ್ ಚವ್ಹಾಣ, ಸೀದು ರಾಠೋಡ, ರಾಜು ರಾಠೋಡ, ಸಂತೋಷ ರಾಠೋಡ, ಅಂಬದಾಸ್ ರಾಠೋಡ, ವಿಕಾಸ್ ರಾಠೋಡ, ಘನು ತುಕಾರಾಮ್ ನಾಯಕ, ಅಶೋಕ್ ಗೋವಿಂದ, ಶಂಕರ್ ಜಾಧವ ರಾಠೋಡ್ ನಾಗು ಖುಬು ರಾಠೋಡ್ ರಾಜು ಜಾಧವ, ಅನಿಲ್ ಪವಾರ, ನೆಹರು ಚವ್ಹಾಣ, ಗೋಪಿ ಚವ್ಹಾಣ, ಆನಂದ್ ಜಾಧವ, ಸುನಿಲ್ ಚವ್ಹಾಣ, ಅರ್ಜುನ್ ಚವ್ಹಾಣ, ಅಂಬದಾಸ್ ರಾಠೋಡ, ಅವಿನಾಶ್ ಪವಾರ, ನರೇಶ್ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.