ಚಿತ್ತಾಪುರ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ 5 ದಿನಕ್ಕೆ, ಮುಷ್ಕರಕ್ಕೆ ಬಿಜೆಪಿ ಬೆಂಬಲ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮೂಲಸೌಲಭ್ಯ, ಸೇವಾ ಸೌಲಭ್ಯ ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಾಲೂಕು ಗ್ರಾಮ ಆಡಳಿತಾಧಿಕಾರಿಗಳು ತಹಸೀಲ್ ಕಚೇರಿಯ ಆವರಣದಲ್ಲಿ ಆರಂಭಿಸಿದ 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ 5 ನೇ ದಿನಕ್ಕೆ ಕಾಲಿಟ್ಟಿದೆ.
ಗ್ರಾಮ ಆಡಳಿತಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಸುನೀಲ ಎಸ್. ಚವ್ಹಾಣ ಮಾತನಾಡಿ, ಸರ್ಕಾರದ ಹೊಸ ಹೊಸ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಸರಿಯಾದ ಮೂಲ ಸೌಲಭ್ಯ ನೀಡುತ್ತಿಲ್ಲ. ಹಲವಾರು ಬಾರಿ ಬೇಡಿಕೆ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಸ್ಪಂದಿಸುತ್ತಿಲ್ಲ. ಬೇಡಿಕೆ ಈಡೇರುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಯಲಿದೆ. ಬೇಡಿಕೆ ಈಡೇರುವವರೆಗೆ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.
ತಾಲೂಕು ಅಧ್ಯಕ್ಷ ಸುನೀಲ ಎಸ್. ಚವ್ಹಾಣ, ಉಪಾಧ್ಯಕ್ಷ ಮೈನೋದ್ದಿನ್, ಪ್ರಧಾನ ಕಾರ್ಯದರ್ಶಿ ವೆಂಕಟಪ್ಪ, ಖಜಾಂಚಿ ಮಾರುತಿ ಎನ್, ವಸಂತಮೂರ್ತಿ, ಬಸವರಾಜ ಹಲಕಟ್ಟಾ, ಸಂಗಮೇಶ ಹಾಗರಗಿ, ಮಾಂತೇಶ ಬಡಿಗೇರ್, ರಾಜು ಯು.ಬಿ, ಪರಶುರಾಮ, ನಾಗಣ್ಣ, ಹಜರತ್, ಸತೀಶ ಖರಾಬಿ, ವಿಜಯಕುಮಾರ, ಅನೀಲಕುಮಾರ, ಶೇಖಪ್ಪ, ಸಂಜಯಕುಮಾರ, ನರಸರೆಡ್ಡಿ, ಭುವನೇಶ್ವರಿ, ಪೂಜಾ, ಸಿದ್ದಮ್ಮ, ಜ್ಯೋತಿ, ಶಶಿಕಲಾ, ಹಾಲಮ್ಮ, ಪರಿಮಳಾ, ಚಂದ್ರಶಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮುಷ್ಕರಕ್ಕೆ ಬಿಜೆಪಿ ಬೆಂಬಲ: ಗ್ರಾಮ ಆಡಳಿತ ಅಧಿಕಾರಿಗಳು ಹಮ್ಮಿಕೊಂಡಿದ್ದ ಮುಷ್ಕರಕ್ಕೆ ಬಿಜೆಪಿ ಮುಖಂಡರು ಬೆಂಬಲಿಸಿ ಹೋರಾಟಕ್ಕೆ ಕೈಜೋಡಿಸಿ ಕೆಲ ಹೊತ್ತು ಮುಷ್ಕರ ನಿರತ ಸ್ಥಳದಲ್ಲಿ ಕುಳಿತುಕೊಂಡರು.
ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ ಮಾತನಾಡಿ, ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳು ನ್ಯಾಯಯುತವಾಗಿದ್ದು ಕೂಡಲೇ ಸರ್ಕಾರ ಸ್ಪಂದಿಸಿ ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಒಬಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ಹೂಗಾರ ಮಾತನಾಡಿದರು. ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಮುಖಂಡರಾದ ಮಲ್ಲಿನಾಥ ಇಂದೂರ, ಗೋಪಾಲ ರಾಠೋಡ, ಅಕ್ಕಮಹಾದೇವಿ, ಶಿವರಾಮ್ ಚವ್ಹಾಣ, ಶಾಂತಯ್ಯ ಗುತ್ತೇದಾರ, ಶಾಮಣ್ಣ ಮೇಧಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.