ತಾಲೂಕು ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಬೊಮ್ಮನಳ್ಳಿ ಆಯ್ಕೆ, ಶ್ರೀ ಶಿವಶರಣ ಮಾದರ ಚನ್ನಯ್ಯ ಜಯಂತ್ಯೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ, ಏಪ್ರಿಲ್ ಮೊದಲ ವಾರದಲ್ಲಿ ಅದ್ದೂರಿ ಜಯಂತಿ ಆಚರಣೆಗೆ ನಿರ್ಧಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಾದಿಗ ಸಮಾಜದ ಕುಲಗುರು ಶ್ರೀ ಶಿವಶರಣ ಮಾದರ ಚೆನ್ನಯ್ಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಬರುವ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಚಿತ್ತಾಪುರ ಪಟ್ಟಣದಲ್ಲಿ ಬಹಳ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಹೀಗಾಗಿ ತಾಲೂಕು ಸಮಿತಿ, ಯುವ ಸಮಿತಿ ಹಾಗೂ ನಗರ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಂತಿ ಕಾರ್ಯಕ್ರಮಕ್ಕೆ ಸಚಿವರನ್ನು, ಸಾಹಿತಿಗಳನ್ನು ಹಾಗೂ ರಾಜಕೀಯ ಗಣ್ಯಮಾನ್ಯರನ್ನು ಆಹ್ವಾನಿಸಲಾಗುವುದು ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಭೇಟಿ ಮಾಡಿ ದಿನಾಂಕ ತೆಗೆದುಕೊಂಡು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗೌರವಾಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಮಾತನಾಡಿ, ಮಾದರ ಚೆನ್ನಯ್ಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಪಕ್ಷಾತೀತವಾಗಿ ಎಲ್ಲರೂ ಸೇರಿಕೊಂಡು ಮಾಡಲಾಗುವುದು ಈಗಾಗಲೇ ಯುವಕರು ಉತ್ಸಾಹ ತೋರಿಸಿದ್ದಾರೆ ಹೀಗಾಗಿ ಈ ಕಾರ್ಯಕ್ರಮಕ್ಕೆ ಎಲ್ಲರೂ ಒಗ್ಗೂಡಿ ಕೈಜೋಡಿಸಬೇಕು ಎಂದು ಕರೆ ನೀಡಿದರು.
ತಾಲೂಕು ಸಮಿತಿ: ಮಲ್ಲಿಕಾರ್ಜುನ ಕಾಳಗಿ (ತಾಲೂಕು ಗೌರವಾಧ್ಯಕ್ಷರು), ಮಲ್ಲಿಕಾರ್ಜುನ ಬೊಮ್ಮನಳ್ಳಿ (ತಾಲೂಕು ಅಧ್ಯಕ್ಷರು), ದೇವಿಂದ್ರಪ್ಪ ಹಾದಿಮನಿ ಅಳ್ಳೋಳ್ಳಿ (ಉಪಾಧ್ಯಕ್ಷರು), ದೀಪಕ ಡಿ. ಹೊಸೂರಕರ್, ಮಾರುತಿ ಹುಳಗೋಳಕರ್, ದೇವಿಂದ್ರ ಜೆ.ಜಿ ಅಳ್ಳೋಳ್ಳಿ, ಬಸವರಾಜ ಕೆ.ಬಿ ಚಿತ್ತಾಪುರ (ಪ್ರಧಾನ ಕಾರ್ಯದರ್ಶಿಗಳು), ಸಾಬಣ್ಣ ಬಡಿಗೇರ್, ಮಲ್ಲಪ್ಪ ರಾಜೊಳ್ಳಿ, ಮಲ್ಲಿಕಾರ್ಜುನ ಮುಡಬೂಳ, ಮಲ್ಲಿಕಾರ್ಜುನ ಶೆಳ್ಳಗಿ, ತಾಯಪ್ಪ ನಾಲವಾರ, ತಿಮ್ಮಣ್ಣ ಕುಂಭಾರಹಳ್ಳಿ, ಹಂಪಣ್ಣ ಹುಳ್ಳಾಗಡ್ಡಿ, ಆನಂದ ಮೊಗಲಾ, ಶ್ರೀನಿವಾಸ ಸಂದೇನ (ಕಾರ್ಯದರ್ಶಿಗಳು), ಕೃಷ್ಣಾ ಬೀಮನಳ್ಳಿಕರ್ ಸಾತನೂರ, ಶ್ರೀಕಾಂತ ಹೊಸಳ್ಳಿಕರ್ ಚಿತ್ತಾಪುರ (ಖಜಾಂಚಿಗಳು), ಹಣಮಂತ ಚಂದನೋರ, ಅರ್ಜುನ ದಿಗ್ಗಾಂವ, ಯೇಸಪ್ಪ ಭೀಮನಳ್ಳಿ, ಮೊನೇಶ ಅಲ್ಲೂರ ಬಿ ಹಲಗಿ, ಗುರುನಾಥ ಹಲಕಟ್ಟಿ, ಸಾಬಣ್ಣ ಚಳಿಗೇರಿ, ಚಂದ್ರಶೇಖರ ವಾಲಿಕರ್ ಹೊಸ್ಸುರ್ (ಸಹ ಕಾರ್ಯದರ್ಶಿಗಳು), ವಿನ್ನುಕುಮಾರ ಜೆ.ಡಿ. ಚಿತ್ತಾಪುರ, ಮಹಾಂತೇಶ ಬೊಮ್ಮನಳ್ಳಿಕರ್, ನಾಗೇಶ ಹಲಗಿ ಚಿತ್ತಾಪುರ (ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷರು), ರಾಜಣ್ಣ ಕರದಾಳ (ಸಲಹೆಗಾರರು), ಸಾಬಣ್ಣ ಹೊಳಿ ಚಿತ್ತಾಪುರ, ಭೀಮರಾಯ ದೊಡ್ಡಮನಿ, ಗೀತಾ ಮುಖೇಶ ಯಾದಗಿರಿ (ಕಾನೂನು ಸಲಹೆಗಾರರು).
ತಾಲೂಕು ಯುವ ಸಮಿತಿ: ಮಹಾದೇವ ತೆಲಗರ್ (ಗೌರವಾಧ್ಯಕ್ಷರು), ರವಿ ಹಾದಿಮನಿ (ಅಧ್ಯಕ್ಷರು), ಮಾರುತಿ ಅಳ್ಳೋಳ್ಳಿ, ರಾಘವೇಂದ್ರ ಮುಗುಳಕರ್ (ಉಪಾಧ್ಯಕ್ಷರು), ದುರ್ಗೇಶ್ ಹಣೀಕೇರಾ, ರಮೇಶ್ ಭೀಮನಳ್ಳಿ (ಪ್ರಧಾನ ಕಾರ್ಯದರ್ಶಿಗಳು), ದೇವಿಂದ್ರಪ್ಪ ಹಲಗಿ, ಸಿಮೇನ್ ಅಳ್ಳೋಳ್ಳಿ, ರಂಗಪ್ಪ ದಂಡೋತಿ, ಭಾಸ್ಕರ್ ಭೀಮನಳ್ಳಿ (ಕಾರ್ಯದರ್ಶಿಗಳು), ಹರೀಶ್ ಮರಗೋಳ, ನಿಂಗಪ್ಪ ನಡುಗೇರಿ ಸಾತನೂರು, ಮೊನೇಶ್ ಇಂಗಳಗಿ, ಸಿದ್ರಾಮ ನಾಲವಾರ ಮಾರಡಗಿ (ಪ್ರಚಾರ ಸಮಿತಿ ಅಧ್ಯಕ್ಷರು), ಅರ್ಜುನ್ ಕಟ್ಟಿಮನಿ ದಂಡಗುಂಡ, ನಾಗರಾಜ ಅಳ್ಳೋಳ್ಳಿ ತೆಲಗರ್ (ಖಜಾಂಚಿಗಳು), ರಂಗಣ್ಣ ಜಿರಕಿ, ಗುರುಪ್ರಸಾದ್ ದೊಡ್ಡಮನಿ, ಶರಣಬಸಪ್ಪ ಕೊಡಂಗಲಕರ್, ರಾಮಚಂದ್ರ ಗೌಂಡಿ ಮುಡಬೂಳ, ಸ್ವೀಪರ್ ರಾಮತೀರ್ಥ, ನಾಗೇಶ್ ಸಿರಬುಡ್, ಶರಣಬಸಪ್ಪ ಕಟ್ಟಿಮನಿ ಬೆಳಗುಂಪಾ, ಮೊನೇಶ್ ಹಲಗಿ ಅಲ್ಲೂರ.ಬಿ, ಶ್ರೀಕಾಂತ್ ಜಿರಕಿ, ಮಹಾಂತೇಶ್ ಕಟ್ಟಿಮನಿ, ಅರ್ಜುನ್ ರಾಮತೀರ್ಥ, ದಿಲೀಪ್ ಮುಗುಳಕರ್ (ಸಲಹೆಗಾರರು).
ನಗರ ಸಮಿತಿ: ಬಲರಾಮ್ ಹುಳಗೋಳ (ಅಧ್ಯಕ್ಷರು), ಭೀಮು ಕಲಬುರಗಿಕರ್, ರಾಘವೇಂದ್ರ ಮುಗುಳಕರ್ (ಉಪಾಧ್ಯಕ್ಷರು), ಶಿವು ಯಾದಗಿರ, ರವಿ ಬಿದ್ರಿ, ಅಕ್ಷಯ ಕಾಂಬಳೆ, ಶಿವು ಬೊಮ್ಮನಳ್ಳಿ (ಪ್ರಧಾನ ಕಾರ್ಯದರ್ಶಿಗಳು), ಸಚೀನ ಕಡೇಸೂರ, ಸಾಬಣ್ಣ ಲಾಡ್ಲಾಪೂರ, ಕುಮಾರ್ ತೊನಸನಳ್ಳಿ, ಬಸವರಾಜ ಹಲಗಿ, ಯಲ್ಲಾಲಿಂಗ ಹೊಸ್ಸುರಕರ್ (ಕಾರ್ಯದರ್ಶಿಗಳು), ಕುಮಾರ್ ಯಡ್ಡಳ್ಳಿಕರ್, ಸಾಗರ ಕರದಳ್ಳಿ, ವಿಜಯಕುಮಾರ್ ಅಚಗೇರಿ, ಅಪ್ಪು ಭೀಮನಳ್ಳಿ, ಯಲ್ಲಪ್ಪ ಸಂದೇನ, ಪ್ರೇಮಕುಮಾರ ಮುಗುಳಕರ್, ಈರಣ್ಣ ಹಲಗಿ, ಶ್ರೀನಿವಾಸ ಮುಗುಳಕರ್, ರವಿ ಭೀಮನಳ್ಳಿ, ಸುನೀಲ್ ಅಚಗೇರಿ (ಸಹ ಕಾರ್ಯದರ್ಶಿಗಳು), ಶ್ರೀನಾಥ್ ದೊಡ್ಡಮನಿ, ಕಾಶಿನಾಥ ಅಲ್ಲೂರಕರ್ (ಪ್ರಚಾರ ಸಮಿತಿ ಅಧ್ಯಕ್ಷರು), ರವಿ ಕಲಬುರಗಿಕರ್ (ಖಜಾಂಚಿ), ಬಸವರಾಜ ಸಂದೇನ, ಗುರು ಬೊಮ್ಮನಳ್ಳಿ, ಹಂಪಣ್ಣ ಬೊಮ್ಮನಳ್ಳಿ, ಅನೀಲ ಮುಗುಳಕರ್, ಸಾಗರ ವಾಡಿ, ಮಾರುತಿ ಬೊಮ್ಮನಳ್ಳಿ, ಮರೇಪ್ಪ ರಾಜೋಳ್ಳಾ, ಭಾಗೇಶ್ ಕಾಳಗಿ, ಸತೀಶ್ ಮುಡಬೂಳಕರ್, ಶರಣು ಮುಗುಳಕರ್, ಪ್ರಭು ದಬಡೆ, ಸಂದೀಪ್ ದಬಡೆ, ಸುದೀಪ್ ಮುಗುಳಕರ್ (ಕಾರ್ಯಕಾರಿ ಸಮಿತಿ ಸದಸ್ಯರು).