ಬೆಣ್ಣೂರ.ಬಿ ಗ್ರಾಮದಿಂದ ಯಾನಾಗುಂದಿ ಮಾತಾ ಮಾಣಿಕೇಶ್ವರಿ ಸನ್ನಿಧಿಗೆ 27 ನೇ ವರ್ಷದ ಪಾದಯಾತ್ರೆಗೆ ಶಂಕರ ತಳವಾರ ಚಾಲನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಬೆಣ್ಣೂರ.ಬಿ ಗ್ರಾಮದಿಂದ ಸುಕ್ಷೇತ್ರ ಯಾನಗುಂದಿ ಮಾತಾ ಮಾಣಿಕೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಮಹಾಶಿವರಾತ್ರಿಯ ಪ್ರಯುಕ್ತ ತಾಲೂಕಿನ ಬೆಣ್ಣೂರ.ಬಿ ಗ್ರಾಮದಿಂದ 27 ನೇ ವರ್ಷದ ಪಾದಾಯಾತ್ರೆಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಶಂಕರ ತಳವಾರ ಸೋಮವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಬೆಣ್ಣೂರ.ಬಿ ಗ್ರಾಮದಿಂದ ಸತತವಾಗಿ 27 ವರ್ಷಗಳಿಂದ ಪಾದಯಾತ್ರೆ ನಡೆಯುತ್ತಿದೆ. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ ಪಾದಯಾತ್ರೆ ಕೈಗೊಳ್ಳುವ ಭಕ್ತಾದಿಗಳಿಗೆ ಊರಿನ ಹಿರಿಯರು ಶುಭಹಾರೈಸಿ ಪ್ರಸಾದ ಸೇವೆ ಸಲ್ಲಿಸಿ ಕಳುಹಿಸಿ ಕೊಡುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿತಾಪುರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ದೇವರಾಜ್ ತಳವಾರ, ಮುಖಂಡರಾದ ಸಾಬಣ್ಣ ಕಟ್ಟಿಮನಿ, ಹಣಮಯ್ಯ ಗುತ್ತೇದಾರ, ವಿಜಯಕುಮಾರ್, ಬಸವರಾಜ ತಳವಾರ ಸೇರಿದಂತೆ ಭಕ್ತಾದಿಗಳು ಇದ್ದರು.