Oplus_0

ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ, ವಿಜಯಪುರ ಪ್ರೀತಿ ವಾತ್ಸಲ್ಯದ ಭೂಮಿ: ನ್ಯಾಯಾಧೀಶ ನಲವೆಡೆ

ನಾಗಾವಿ ಎಕ್ಸಪ್ರೆಸ್

ವಿಜಯಪುರ: ವಿಜಯಪುರವು ಪ್ರೀತಿ, ವಿಶ್ಚಾಸ, ನಂಬಿಕೆ ವಾತ್ಸಾಲ್ಯದ ಭೂಮಿಯಾಗಿದೆ, ಇಲ್ಲಿಯ ಜನರ ನಡೆ ನುಡಿ ಗಮನಿಸಿದ್ದೇನೆ, ಇಲ್ಲಿಯ ವಕೀಲರ ವೈಖರಿ ಶಿಸ್ತುಬದ್ದವಾಗಿದೆ, ವಿಜಯಪುರದಲ್ಲಿ ಬಸವಣ್ಣ, ಸಿದ್ದೇಶ್ವರ ಶ್ರೀಗಳು ಜನಿಸಿದ ನಾಡಲ್ಲಿ ಸೇವೆ ಸಲ್ಲಿಸಿದ್ದು ನನ್ನ ಪುಣ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾಗಿ ಸೇವೆ ಸಲ್ಲಿಸಿ ವಿಜಯಪುರದಲ್ಲಿ ನಿವೃತ್ತಿಯಾದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಾಜಿ ಅನಂತ ನಲವೆಡೆ ಹೇಳಿದರು.

ಇಲ್ಲಿನ ನ್ಯಾಯಾಂಗ ಅಧಿಕಾರಿಗಳ ಸಭಾ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೆನಾಲ್ ವಕೀಲರು, ಮದ್ಯಸ್ಥಗಾರರು, ಎಲ್ಎಡಿಸಿ ವಕೀಲರು ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.

ವಿಜಯಪುರ ಜಿಲ್ಲೆಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ತಮ್ಮ ಅನುಭವ ಹಂಚಿಕೊಂಡ ಅವರು ಸತ್ಯ ಮತ್ತು ನ್ಯಾಯಾದಾರಿಯಲ್ಲಿ ಸಾಗಿ ಬಂದವರ ಜೀವನ ಬಂಗಾರವಾಗುತ್ತದೆ ಎಂದ ಅವರು ಭೃಂಗಿಮಠರಂತಹ ಅದ್ಙುತ ಭಾಷಣಕಾರರು, ಉಸ್ಮಸನರಂತಹ ಸಂಸ್ಕೃತ ಮಾತನಾಡುವ ಭಾವಖ್ಯಜೀವಿಗಳು ವಕೀಲರ ಸಮೂಹದಲ್ಲಿರುವುದು ಮತ್ತು ಅವರ ಅದ್ಭುತ ಭಾಷಣ ಶೈಲಿ ಆಶ್ಚರ್ಯಕರವಾಗಿದೆ, ಹೀಗೆ ಇಲ್ಲಿನ ಇಡೀ ವಕೀಲರ ಸಮೂಹ ಉತ್ತಮವಾಗಿದೆ, ಪ್ರತಿಭಾನ್ವಿತರಾಗಿರುವ ಇಲ್ಲಿನ ವಕೀಲರು, ಜನರು ನ್ಯಾಯದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಒಂದು ದಾಖಲೆಯೇ ಸರಿ ಎಂದರು, ಎಲ್ಲರೂ ಸಹಕಾರ ನೀಡಿದ್ದರಿಂದ ಉತ್ತಮ ಸೇವೆ ಸಾಧ್ಯವಾಗಿದೆ ಎಂದು ವಿವರಿಸಿದ ನಲವೆಡೆ ಅವರು, ವಿಜಯಪುರ ಪವಿತ್ರ ಭೂಮಿಯಲ್ಲಿ ನಿವೃತ್ತಿ ಹೊಂದಿರುವುದರ ಬಗ್ಗೆ ಹೆಮ್ಮೆಯ ವಿಚಾರ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಮಾ ನಾಯಕ ಮಾತನಾಡಿ,  ಶಿವಾಜಿ ಅನಂತ ನಲವೆಡೆ ಅವರ ಸೇವೆಯ ಬಗ್ಗೆ ಶ್ಲಾಘಿಸಿದರು. ನಲವೆಡೆ ಅವರ ಅಧ್ಯಕ್ಷತೆಯಲ್ಲಿ ಸಾಗಿಬಂದ ಡಿ.ಎಲ್.ಎಸ್ ನಲ್ಲಿ ಪ್ರತಿಭಾನ್ವಿತ ಭಾಷಣಕಾರರಾದ ಭೃಂಗಿಮಠ, ವಕೀಲರ ಅದ್ಭುತ ಹಾಡು ಹೇಳಿದ ಸಂಗಮೇಶ ಪಾಟೀಲ ತಾಳೇವಾಡ, ರಾಜಶೇಖರ ಸಂಜವಾಡ ಮಠ ಇತರರು ಸೇರಿದಂತೆ ಸರ್ವ ಪೆನಾಲ್, ಮದ್ಯಸ್ಥಗಾರರು, ವಕೀಲರ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವಹಿಸಿದ್ದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಸುಭಾಷ ಸಂಕದ ಮಾತನಾಡಿ, ನಲವೆಡೆ ಸಾಹೇಬರ ತಾಳ್ಮೆ, ಹಸನ್ಮುಖದ ಸೇವೆ ಖುಷಿ ತಂದಿದೆ ಎಂದು ತಿಳಿಸಿದರು.

ಹಿರಿಯ ವಕೀಲರಾದ ಮಲ್ಲಿಕಾರ್ಜುನ ಭೃಂಗಿಮಠ ಅವರು ಮಾತನಾಡಿ ” ಶಿವನಡೆ ನಿವೃತ್ತಿಕಡೆ” ಶೀರ್ಷಿಕೆಯ ಕವಿತೆಯ ಮೂಲಕ ನಿವೃತ್ತಿ ಜೀವನಕ್ಕೆ ಶುಭ ಕೋರಿ, ಶ್ರೀ ನಲವೆಡೆ ಸಾಹೇಬರು ನ್ಯಾಯದಾನದಲ್ಲಿ ಅತ್ಯಂತ ತಾಳ್ಮೆಯಿಂದ ನಿಭಾಯಿಸಿದ ಅವರ ಸೇವೆ ವಿಜಯಪುರ ಜಿಲ್ಲೆಗೆ ಸಿಕ್ಕಿರುವುದು ಸಂತೋಷಕರ ಸಂಗತಿಯಾಗಿದೆ ನಲವಡೆ ಅವರು ನುಡಿದಂತೆ ನಡೆದವರು, ಆಚಾರ, ವಿಚಾರ, ಸದಾ ಸತ್ಯದ ದಾರಿಯಲ್ಲೇ ಸಾಗಿ ಬಂದವರು ಎಂದು ಬಣ್ಣಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಎಸ್.ಬಿರಾದಾರ ಅವರು ಅತಿಥಿ ಸ್ಥಾನವಹಿಸಿದ್ದರು. ಹಿರಿಯ ವಕೀಲರಾದ ಪ್ರಕಾಶ ಉಡುಪಿಕರ ,ಆರ್.ಎಸ್ ನಂದಿ, ಮಂಜುಳಾ ಅರಕೇರಿ, ಉಸ್ಮಾನ ಕುರಿ ಅಲ್ಗೂರು ಅವರು ಮಾತನಾಡಿದರು.

ಜಿಲ್ಲಾ ನ್ಯಾಯಾಧೀಶರಾದ ಸತೀಶ್ ಎಲ್.ಪಿ, ಎಮ್.ಬಿ. ಪಾಟೀಲ್, ಸಿಂಧೂ ಪೊತ್ದಾರ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಮಲ್ಲಿಕಾರ್ಜುನ ಅಂಬಲಿ, ಲೋಕೇಶ, ರಮೇಶ ಮಹಾಜನ, ಮಹೇಶ ಚಂದ್ರಕಾಂತ, ಸಮೀರ ಕೊಳ್ಳಿ, ಸಿವಿಲ್ ನ್ಯಾಯಾಧೀಶೆ ಪರಿಮಳಾ ಟುಬಕಿ, ವಿಶ್ವನಾಥ ಯಮಕನಮರಡಿ, ಸ್ಮಿತಾ, ಚಂದ್ರಕಾಂತ, ಸುನೀಲಕುಮಾರ ಇದ್ದರು.

ಹಿರಿಯ ವಕೀಲರಾದ ರಾಜೀವ ಬಿದರಿ, ಡಿ.ಬಿ.ಮಠದ, ಮಲ್ಲಿಕಾರ್ಜುನ ಲೋಗಾವಿ, ಬಸವರಾಜ ಮಠ, ಅಶೋಕ ಜೈನಾಪುರ, ರಾಜೇಶ ಯಳಸಂಗಿಮಠ, ರಾಜೇಶ್ವರಿ ಪಾಟೀಲ್, ದೀಪಾ, ಜಾವೀದ ಗುಡಗುಂಟಿ, ವಿ.ಜೆ ಖುದಾನಪುರ, ಬಿ.ಕೆ ಮಠ, ಜಯಶ್ರೀ ಮಠಪತಿ, ಶುಷ್ಮಾ ದೇಸಾಯಿ, ಉಮೇಶ ರಾಠೋಡ, ಒಡೆಯರ, ಬಡಗೇರ, ಮುಂತಾದ ಪೆನಾಲ್ ವಕೀಲರು ಪಾಲ್ಗೊಂಡಿದ್ದರು

ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಅರವಿಂದ ಹಾಗರಗಿ ಅವರು ಪ್ರಸ್ತಾವಿಕ ಮಾತುಗಳನ್ನಾಡಿ ಕಾನೂನು ಸೇವೆಗಳ ಪ್ರಾಧಿಕಾರವು ನಲವಡೆ ಅವರ ಅಧ್ಯಕ್ಷತೆಯಲ್ಲಿ ಬೆಳೆದು ಬಂದ ಯಶಸ್ವಿ ದಾರಿಯ ಬಗ್ಗೆ ವಿವರಿಸಿದರು. ಮಂಜುಳಾ ನಿರೂಪಿಸಿದರು, ಉಸ್ಮಾನ ಕುರಿ ಆಲ್ಗೂರು ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!