ನಾಗಾವಿ ಕ್ಷೇತ್ರದಲ್ಲಿ ಪುರಾತನ ದೇವಸ್ಥಾನ ಮಸೀದಿ ಮಾಡಲು ಹೊರಟ ಜಿಲ್ಲಾಡಳಿತ ನಡೆ ಖಂಡಿಸಿ ಹಿಂದೂ ಜಾಗೃತಿ ಸೇನೆ ತಹಸೀಲ್ದಾರ್ ಗೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಐತಿಹಾಸಿಕ ಕ್ಷೇತ್ರ ನಾಗಾವಿಯಲ್ಲಿ ಇರುವ ಪುರಾತನ ದೇವಸ್ಥಾನ ಮಸೀದಿ ಮಾಡಲು ಹೊರಟ ಜಿಲ್ಲಾಡಳಿತ ನಡೆ ಖಂಡಿಸಿ ಹಿಂದೂ ಜಾಗೃತಿ ಸೇನೆ ಜಿಲ್ಲಾ ಘಟಕದ ಮುಖಂಡರು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ಸ್ವಾದಿ ಮಾತನಾಡಿ, ನಾಗಾವಿ ಕ್ಷೇತ್ರದಲ್ಲಿ ಕಾಲಿ ಮಸೀದಿ ಅಭಿವೃದ್ಧಿ ಕಾಮಗಾರಿ ವೇಳೆ 7 ಹೆಡೆಯ ಸರ್ಪ ಇರುವ ಶಿಲೆ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದೇವಸ್ಥಾನ ಇರುವುದಕ್ಕೆ ಬಹು ದೊಡ್ಡ ಸಾಕ್ಷಿ ಸಿಕ್ಕಿದೆ. ಕಾರಣ ಯಾವುದೇ ಕಾರಣಕ್ಕೂ ಆ ಸ್ಥಳದಲ್ಲಿ ಮಸೀದಿ ನಿರ್ಮಾಣ ಮಾಡಬಾರದು ಹಾಗೂ ಮತ್ತೆ ಆ ಸ್ಥಳದಲ್ಲಿ ಕಾಳಿ ಮಾತಾ ದೇವಸ್ಥಾನ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಪುರಸಭೆ ಸದಸ್ಯರಾದ ರಮೇಶ್ ಬೊಮ್ಮನಳ್ಳಿ, ಶಾಮಣ್ಣ ಮೇಧಾ, ಪ್ರಭು ಗಂಗಾಣಿ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಶ್ರೀನಿವಾಸ ಹಳ್ಳಿ, ಮುಖಂಡರಾದ ಅಂಬರೀಷ್ ಸುಲೇಗಾಂವ, ಅಶ್ವಥ್ ರಾಠೋಡ, ಶ್ರೀಕಾಂತ್ ಸುಲೇಗಾಂವ, ಮೇಘರಾಜ ಗುತ್ತೇದಾರ, ಉದಯಕುಮಾರ್ ಸಿಂಪಿ, ಶಿವರಾಮ್ ಚವ್ಹಾಣ ಸೇರಿದಂತೆ ಹಿಂದೂ ಜಾಗೃತಿ ಸೇನೆಯ ಮುಖಂಡರು, ಕಾರ್ಯಕರ್ತರು ಹಾಗೂ ಚಿತ್ತಾಪುರ ಹಿಂದೂ ಮುಖಂಡರು ಉಪಸ್ಥಿತರಿದ್ದರು.