ಚಿತ್ತಾಪುರ ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಶಾಲೆಗೆ ಕೀರ್ತಿ ತಿನ್ನಿ: ಅವಂಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಕಲಿಸಿದ ಶಾಲೆಗೆ ಉತ್ತಮ ಕೀರ್ತಿ ತರಬೇಕು ಎಂದು ಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರ್ ಅವಂಟಿ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಏಳನೇ ತರಗತಿ ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಭೆ ಎನ್ನುವುದು ಬಡತನದಲ್ಲಿಯೇ ಹುಟ್ಟುತ್ತದೆ ಹೀಗಾಗಿ ಯಾರು ಯಾರಿಗೆ ಕಡಿಮೆ ಇಲ್ಲ, ಎಲ್ಲರೂ ಪ್ರತಿಭಾವಂತರೇ ಆಗಿದ್ದಾರೆ ಎಂದು ಹೇಳಿದರು.
ಶ್ರೀಮತಿ ಅಣಿಮ್ಮ ಗೊಬ್ಬರ ಪ್ರೌಢಶಾಲೆಯಲ್ಲಿ 23-24 ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿವರ್ಷದಂತೆ ಈ ವರ್ಷ ಕೂಡ ಪುರಸ್ಕಾರವನ್ನು ಹಿಂದಿನ ಅಧ್ಯಕ್ಷ ದಿ. ಬಸವಣ್ಣಪ್ಪ ಕಾಂತಾ ಅವರು ಪುರಸ್ಕಾರವನ್ನು ನೀಡುತ್ತಿದ್ದರು, ಈಗ ಅವರ ಸುಪುತ್ರ ಡಾ. ಪ್ರಭುರಾಜ್ ಕಾಂತಾ ಅವರು ನಗದ ರೂಪದಲ್ಲಿ ಪುರಸ್ಕಾರವನ್ನು ನೀಡಿದರು ಮತ್ತು ಅದೇ ರೀತಿಯಾಗಿ ಶರಣಬಸಪ್ಪ ಬೊಮ್ಮನಹಳ್ಳಿ ಅವರು ಅವರ ತಾಯಿಯ ಸ್ವರ್ಣಾರ್ಥವಾಗಿ ದಿ. ಸುಭದ್ರಮ್ಮ ಶಾಂತಪ್ಪ ಬೊಮ್ಮನಹಳ್ಳಿ ಅವರ ಹೆಸರಿನಲ್ಲಿ ಹಾಗೂ ಬಸವರಾಜ್ ಬೊಮ್ಮನಹಳ್ಳಿ ಅಜ್ಜ ಮತ್ತು ಅಜ್ಜಿಯವರ ಸ್ಮಣಾರ್ಥವಾಗಿ ಬಸ್ಸಮ್ಮ ಲಿಂಗಪ್ಪ ಬೊಮ್ಮನಹಳ್ಳಿ ಅವರು ಶಾಲೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ನಗದು ರೂಪದಲ್ಲಿ ನೀಡಿ ಸತ್ಕರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್ ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಸದಸ್ಯ ಡಾ. ಚಂದ್ರಶೇಖರ್ ಕಾಂತಾ, ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಶರಣಬಸಪ್ಪ ಬೊಮ್ಮನಹಳ್ಳಿ, ಮುಖ್ಯ ಗುರು ದೇವೇಂದ್ರಪ್ಪ ಇಮಡಾಪೂರ ವೇದಿಕೆಯಲ್ಲಿದ್ದರು
ಶಿಕ್ಷಕರಾದ ಶಂಕರ ರಾಠೋಡ, ಚಂದ್ರಶೇಖರ್, ಮನೋಹರ್ ಬಾಬು ಹಡಪದ, ನಾಗರಾಜ ಕುಲಕರ್ಣಿ, ಅಂಬರೀಶ್, ಶೈಲಜಾ ಹರಸುರ, ಬಸ್ಸಮ್ಮ, ಕರಬಸಮ್ಮ ಸುಲೇಗಾಂವ್, ಕಾಶಿಬಾಯಿ ದಂಡೋತಿ, ಸಾಜಿದ್ ಸೇರಿದಂತೆ ಇತರರು ಇದ್ದರು. ಬಸವರಾಜ್ ಬೊಮ್ಮನಹಳ್ಳಿ ಸ್ವಾಗತ ಮಾಡಿದರು, ಶಿಕ್ಷಕಿ ಲಲಿತಮ್ಮ ರೇಷ್ಮೆ ಕಾರ್ಯಕ್ರಮ ನಿರೂಪಣೆ ಮಾಡಿದರು.