ಬಿಜೆಪಿ ಕಛೇರಿಯಲ್ಲಿ ಮಹಿಳಾ ದಿನಾಚರಣೆ, ಮಹಿಳೆ ಪುರುಷರಿಗಿಂತ ಕಡಿಮೆಯಿಲ್ಲ: ಬಿ.ಕೆ ಜಯಶ್ರೀ

ನಾಗಾವಿ ಎಕ್ಸಪ್ರೆಸ್

ಶಹಾಬಾದ: ಮಹಿಳಾ ದಿನಾಚರಣೆ ಕೇವಲ ಒಂದು ದಿನ ಆಚರಣೆ ಮಾಡುವುದಲ್ಲಾ, ದಿನನಿತ್ಯ ನೆನೆಯುವ ದಿನವಾಗಿದೆ, ಮಹಿಳೆ ಪುರುಷರಿಗಿಂತ ಕಡಿಮೆ ಅಲ್ಲ, ಪುರುಷರಿಗೆ ಸರಿಸಮಾನವಾಗಿ ಬೆಳೆದು ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ, ಸ್ತ್ರೀ ಅನೇಕ ಶಕ್ತಿಯನ್ನು ಹೊಂದಿದ್ದಾಳೆ ಎಂದು ಶಹಾಬಾದನ ಬ್ರಹ್ಮಾಕುಮಾರಿ ಆಶ್ರಮದ ಬ್ರಹ್ಮಾಕುಮಾರಿ ಜಯಶ್ರೀ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಯಿಯ ಗರ್ಭದಲ್ಲಿ ಇರುವಾಗಲೇ ಮಗುವಿನ ಮೇಲೆ ತಾಯಿ ಯೋಚನೆ ಮಾಡುವುದು ಮತ್ತು ಪ್ರತಿಯೊಂದು ಚಿಂತನೆಗಳ ಪ್ರಭಾವ ಮಗುವಿನ ಮೇಲೆ ಬೀಳುತ್ತದೆ. ತಾಯಿಯ ಸಂಸ್ಕಾರವು ಮಗು ಜನ್ಮ ತಾಳುವುದರ ಜೊತೆಗೆ ಬರುತ್ತದೆ, ನಮ್ಮ ಜೀವನ ಕೇವಲ ಸಿನಿಮಾ ಅಲ್ಲ ನಮ್ಮ ಜೀವನ ಶ್ರೇಷ್ಠವಾದದ್ದು ಎಂದರು.

ಸರ್ಕಾರಿ ಆಸ್ಪತ್ರೆಯ ವೈದ್ಯೆ ಡಾ. ಅಶ್ವಿನಿ ಮಾತನಾಡಿ, ಹೆಣ್ಣು ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಕುಗ್ಗದೆ ಧೈರ್ಯದಿಂದ ಬದುಕಬೇಕು, ಪ್ರಪಂಚದಲ್ಲಿ ಹೆಣ್ಣಿಗೆ ಶ್ರೇಷ್ಠವಾದ ಸ್ಥಾನ ಇದೆ ಎಂದು ಅಭಿಪ್ರಾಯಪಟ್ಟರು.

ಪೊಲೀಸ್ ಇಲಾಖೆಯ ಮಹಾನಂದ, ಬಿಜೆಪಿ ಮುಖಂಡರಾಜ ಜ್ಯೋತಿ ಶರ್ಮ, ಪದ್ಮ ಕಟ್ಟಿಗೆ ಹಾಗೂ ನಂದಾ ಗುಡೂರ ವೇದಿಕೆ ಮೇಲೆ ಇದ್ದರು. ಶಶಿಕಲಾ ಸಜ್ಜನ್, ಸನ್ನಿಧಿ ಕುಲಕರ್ಣಿ, ನೀಲಗಂಗಮ್ಮ ಗಂಟ್ಲಿ, ಜಯಶ್ರೀ ಸೂಡಿ ಹಾಗೂ ಮಹಿಳಾ ಮೋರ್ಚದ ಪದಾಧಿಕಾರಿಗಳು ಪಕ್ಷದ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು. ಸಿದ್ರಾಮ ಕುಸಾಳೆ ಪ್ರಸ್ತಾವಿಕವಾಗಿ ಮಾತನಾಡಿದರು.

ಶಹಾಬಾದ ವರದಿ- ನಾಗರಾಜ್ ದಂಡಾವತಿ.

Spread the love

Leave a Reply

Your email address will not be published. Required fields are marked *

error: Content is protected !!