ಚಿಂಚೋಳಿ ಶಾಸಕ ಅವಿನಾಶ್ ಜಾಧವ ವಿರುದ್ಧ ಹಗುರವಾಗಿ ಹೇಳಿಕೆ ನೀಡಿದ್ದು ಖಂಡನೀಯ ಕೂಡಲೇ ಕ್ಷಮೆಯಾಚಿಸಲು: ಸಂತೋಷ ಗಡಂತಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿಂಚೋಳಿ: ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಅವಿನಾಶ್ ಜಾಧವ ವಿರುದ್ಧ ಹಗುರವಾಗಿ ಹೇಳಿಕೆ ನೀಡಿ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ಅಂಟಿಸಿರುವುದು ಖಂಡನೀಯ ಕೂಡಲೇ ಶಾಸಕರ ಕ್ಷಮೆಯಾಚನೆ ಮಾಡಬೇಕು ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಸಂತೋಷ್ ಗಡಂತಿ ಆಗ್ರಹಿಸಿದ್ದಾರೆ.
ಶಾಸಕರು ಅವರ ಕುಟುಂಬದ ಆರೋಗ್ಯ ಸಮಸ್ಯೆಯಿಂದ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು, ಪ್ರಸ್ತುತ ಮಾ.2 ರಿಂದ ಅಧಿವೇಶನದಲ್ಲಿದ್ದಾರೆ, ವೀರಣ್ಣ ಗಂಗಾವತಿ ಪೋಸ್ಟರ್ ಅಂಟಿಸುವ ಮುನ್ನ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.
ಸದ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಶೂನ್ಯವಾಗಿದೆ, ರೈತರು ಕಂಗಾಲಾಗಿದ್ದಾರೆ, ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಒಂದೇ ಒಂದು ಅಡಿಗಲ್ಲು ಸಮಾರಂಭವಾಗಿಲ್ಲ, ವೀರಣ್ಣ ಗಂಗಾಣಿ ಅವರು ಈ ವಿಷಯದ ಬಗ್ಗೆ ಅರಿತುಕೊಂಡು ಹೋರಾಟ ಮಾಡಲಿ, ತಮ್ಮ ಅವಿವೇಕದ ಹೇಳಿಕೆಯಿಂದ ಶಾಸಕರ ಅಭಿಮಾನ ಬಳಗ ಹಾಗೂ ಬಿಜೆಪಿ ಮುಖಂಡರು ತೀವ್ರವಾಗಿ ಖಂಡಿಸಿದ್ದು, ತಕ್ಷಣ ಕ್ಷಮೇಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.