Oplus_0

ಚಿತ್ತಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಫಲಿತಾಂಶ ರದ್ದು

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಹಕಾರ ಸಂಘದ ಆಡಳಿತ ಮಂಡಳಿಗೆ ಕಳೆದ 18 ನವೆಂಬರ್ 2024 ರಂದು ಘೋಷಿಸಿದ ಚುನಾವಣಾ ಫಲಿತಾಂಶ ರದ್ದು ಪಡಿಸಿ ಈ ಕೂಡಲೇ ಜಾರಿಗೆ ಬರುವಂತೆ ಆದೇಶಿಸಿದೆ ಮತ್ತು ಈ ತೀರ್ಪನ್ನು ತೆರೆದ ನ್ಯಾಯಾಲಯದಲ್ಲಿ ಘೋಷಿಸಿದೆ ಎಂದು ಸೇಡಂ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.

ಅರ್ಜಿದಾರ ಮಲ್ಲಿಕಾರ್ಜುನ ಅಂಬಣ್ಣ ಅವರು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 70 ರಡಿ ಎದುರು ಅರ್ಜಿದಾರರ ಕ್ರಮ ಸಂಖ್ಯೆ 01 ರಿಂದ 12 ಇವರು ಅರ್ಜಿದಾರರ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರಾಗಿ ನವೆಂಬರ್ 18 2024 ರಂದು ಜರುಗಿದ ಚುನಾವಣೆಯಲ್ಲಿ ಆಯ್ಕೆಯಾಗಿರುವವರನ್ನು ಪ್ರಶ್ನಿಸಿ ತಕರಾರು ಅರ್ಜಿ ಸಲ್ಲಿಸುವವರು, ಚುನಾವಣೆಗೋಸ್ಕರ ತಯಾರಿಸಿದ ಅಂತಿಮ ಮತದಾರರ ಪಟ್ಟಿ ದೋಷಪೂರಿತವಾಗಿರುತ್ತದೆ ಮತ್ತು ಪಿ.ಕೆ.ಪಿ.ಎಸ್ ಸಾತನೂರ ಮತ್ತು ಪಿ.ಕೆ.ಪಿ.ಎಸ್ ಮೊಗಲಾ ಸಂಘಗಳ ಕಾರ್ಯವ್ಯಾಪ್ತಿಯಲ್ಲಿ ವಾಸವಾಗಿರುವವರು ಅರ್ಜಿದಾರರ ಸಹಕಾರ ಸಂಘದಲ್ಲಿ ಕಾನೂನು ಬಾಹಿರವಾಗಿ ಮುಂದುವರಿದಿರುವುದರಿಂದ ಸದರಿಯವರ ಹೆಸರುಗಳು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿರುತ್ತವೆ ಹೀಗಾಗಿ ಈ ಚುನಾವಣೆ ರದ್ದು ಪಡಿಸಬೇಕು ಎಂದು ದೂರು ನೀಡಿದ್ದರು.

ಅರ್ಜಿದಾರರ ಸಹಕಾರ ಸಂಘದ ಅಂತಿಮ ಮತದಾರರ ಪಟ್ಟಿ ಗಮನಿಸಲಾಗಿ ಪಿ.ಕೆ.ಪಿ.ಎಸ್ ಮೊಗಲಾ ಮತ್ತು ಪಿ.ಕೆ.ಪಿ.ಎಸ್ ಸಾತನೂರ ಸಂಘಗಳ ಕಾರ್ಯವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ನಿವಾಸಿಗಳು ಪಿ.ಕೆ.ಪಿ.ಎಸ್ ಚಿತ್ತಾಪೂರ ಸಂಘದಲ್ಲಿ ಕಾನೂನು ಬಾಹೀರವಾಗಿ ಮುಂದುವರೆದಿರುವದು ಮತ್ತು ಸದರಿಯವರ ಹೆಸರುಗಳು ಅಂತೀಮ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೋಳಿಸಿರುವದರಿಂದ ಅಂತಿಮ ಮತದಾರರ ಪಟ್ಟಿ ದೂಷಪೂರಿತವಾಗಿರುವದನ್ನು ಸಾಬಿತು ಪಡಿಸುತ್ತದೆ ಅಲ್ಲದೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಕಲಂ 16 ರ ರಲ್ಲಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ವಾಸವಾಗಿರುವವರು ಮಾತ್ರ ಆ ಸಹಕಾರ ಸಂಘದಲ್ಲಿ ಸದಸ್ಯರಾಗಲು ಅರ್ಹತೆಯನ್ನು ಪಡೆದಿರುತ್ತಾರೆ ಎನ್ನುವ ಅಂಶ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಮತ್ತು ಸದರಿ ಕಾನೂನನ್ನು ಉಲ್ಲಂಘಿಸಿ ಪಿ.ಕೆ.ಪಿ.ಎಸ್ ಮೊಗಲಾ ಮತ್ತು ಪಿ.ಕೆ.ಪಿ.ಎಸ್ ಸಾತನೂರ ಸಂಘದ ಕಾರ್ಯವ್ಯಾಪ್ತಿಯಲ್ಲಿ ವಾಸಿಸುವವರು ಪಿ.ಕೆ.ಪಿ.ಎಸ್ ಚಿತ್ತಾಪುರ ಸಂಘದಲ್ಲಿ ಸದಸ್ಯರಾಗಲು ಅನರ್ಹರಾಗಿದ್ದು ಈ ಸಂಘದಲ್ಲಿ ಸದಸ್ಯರಾಗಿ ಮುಂದುವರೆದಿರುವದು ಕಾನೂನು ಬಾಹಿರವಾಗಿದೆ ಎನ್ನುವದನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

ಮೇಲೆ ವಿವರಿಸಿದ ಚರ್ಚೆಯಿಂದ ಅರ್ಜಿದಾರರ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ದೂಷಪೂರಿತ ಅಂತಿಮ ಮತದಾರರ ಪಟ್ಟಿಯನ್ನಾಧರಿಸಿ ಜರುಗಿಸಲಾಗಿದೆಯೇ ಎನ್ನುವ ಪ್ರಶ್ನೆಗೆ ಹೌದ ಎನ್ನುವ ಸಕಾರಾತ್ಮಕ ಉತ್ತರ ದೊರೆಯುತ್ತದೆ ಎಂಬ ಸ್ಪಷ್ಟ ಅಭಿಪ್ರಾಯಕ್ಕೆ ಈ ನ್ಯಾಯಾಲಯ ಬಂದಿರುತ್ತದೆ ಎಂದು ತಿಳಿಸಿದ್ದಾರೆ.

ಇಂತಹದೆ ಪ್ರಕರಣದಲ್ಲಿ ಚುನಾವಣೆಗೆ ಸಂಭಂದಿಸಿದ విధి ವಿಧಾನಗಳನ್ನು ಉಲ್ಲಂಘಸಿರುವದನ್ನು ಸರ್ವೋಚ್ಛ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಚುನಾವಣೆ ರದ್ದುಗೋಳಿಸಿ ಆದೇಶಸಿರುವದನ್ನು ಗಮನಕ್ಕೆ ತೆಗೆದುಕೊಂಡು (2017) 13 ಎಸ್ ಸಿ ಸಿ 573. ಗಂಗಾಧರನ್ ನಾಯರ ಪಿ ಮತ್ತು ಇತರರು) ವಿರುದ್ಧ ಭಾಸ್ಕರನ್ ಎಮ್ ಮತ್ತು ಇತರರು ಅರ್ಜಿದಾರರ ಪ್ರಸ್ತುತ ಅರ್ಜಿಯನ್ನು ಪುರಸ್ಕರಿಸಿ ಸಹಕಾರ ಸಂಘದ ಆಡಳಿತ ಮಂಡಳಿಗೆ 18 ನವೆಂಬರ್ 2024 ರಂದು ಘೋಷಿಸಿದ ಚುನಾವಣಾ ಫಲಿತಾಂಶ ರದ್ದು ಪಡಿಸಿ ಈ ಕೂಡಲೇ ಜಾರಿಗೆ ಬರುವಂತೆ ಆದೇಶಿಸಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!