ಕೊಡದೂರ ಗ್ರಾಮದಲ್ಲಿ ಹಾದಿ ಬಸವೇಶ್ವರ ಖಾಂಡ್ ಉತ್ಸವ
ನಾಗಾವಿ ಎಕ್ಸ್ಪ್ರೆಸ್
ಕಾಳಗಿ: ತಾಲೂಕಿನ ಕೊಡದೂರ ಗ್ರಾಮದ ಸದಭಕ್ತರು ಹಾದಿ ಬಸವೇಶ್ವರ ಖಾಂಡ್ ಉತ್ಸವ ಸಂಭ್ರಮದಿಂದ ನೆರವೇರಿಸಿದರು.
ವೇದಮೂರ್ತಿ ಶಿವನಂದಯ್ಯ ಸ್ವಾಮಿಜಿರವರ ವೈದಿಕತ್ವದಲ್ಲಿ ಹಾದಿ ಬಸವೇಶ್ವರ ದೇವರ ಮೂಲ ಮೂರ್ತಿಗೆ ಗುರುವಾರ ಬೆಳಿಗ್ಗೆ 8 ಗಂಟೆಗೆ ರುದ್ರಾಭಿಷೇಕ ಜಲಾಭಿಷೇಕ ಸೇರಿದಂತೆ ವಿವಿಧ ರೀತಿಯ ಪೂಜೆ ಕೈಂಕರ್ಯಗಳು ನೆರವೇರಿಸಿದರು.
ದೇವಸ್ಥಾನದ ಸಮಿತಿ ಸದಸ್ಯರು ಗ್ರಾಮಸ್ಥರೇಲ್ಲರೂ ಸೇರಿ ಸಜ್ಜಕಾ ಅನ್ನದ ಪ್ರಸಾದವನ್ನು ನೈವೇದ್ಯ ಸಮರ್ಪಿಸಿ ನಂತರ ಪ್ರಸಾದಕ್ಕೆ ಸ್ವೀಕರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಸಂಭ್ರಮದಿಂದ ಪ್ರಸಾದ ಸ್ವಿಕರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಸಮಿತಿ ಪ್ರಮುಖರಾದ, ಶರಣಪ್ಪ ಗದ್ದಿ, ಶರಣಪ್ಪ ಹಡಪದ, ಕಾಶಿನಾಥ ಗುಂಡಗುರ್ತಿ, ಜಗನ್ನಾಥ ಯಡಗಿ, ಬಾಬುರಾವ, ಹಣಮಂತ ಸರಡಗಿ, ಬಸವರಾಜ ವಟವಟಿ, ಬಸವರಾಜ ರಾಜಾಪುರ, ರೇವಣಸಿದ್ದಪ್ಪ ಪಸ್ತಪೂರ, ಶಿವಕುಮಾರ ಗುಂಡಗುರ್ತಿ, ಬಸವರಾಜ ಗದ್ದಿ, ವಿಜಯಕುಮಾರ ಸಂಗ್ಯದ, ಅಣ್ಣಪ್ಪ ಭಂಡಿ, ಡಾ.ಗುರನಾಥ ಮಂಗಲಗಿ, ಸಂಗಣ್ಣ ರಾಜಾಪುರ, ಶರಣು ನಾಗೂರ, ಬಂಡು ಗದ್ದಿ ಸೇರಿದಂತೆ ಇತರರಿದ್ದರು.