ಮಂಗಲಗಿ ಗ್ರಾಮದಲ್ಲಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ದರ್ಶನ ಪ್ರವಚನ ಮಹಾಮಂಗಲ, ಪುರಾಣ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ: ತೊಟ್ನಳ್ಳಿ ಶ್ರೀ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ಪುರಾಣ, ಪ್ರವಚನ, ಪುಣ್ಯಕಥೆಗಳನ್ನು ಆಲಿಸುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುವುದು ಎಂದು ತೊಟ್ನಳ್ಳಿಯ ಪೂಜ್ಯ ಡಾ. ತ್ರಿಮೂರ್ತಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಮಂಗಲಗಿ ಗ್ರಾಮದ ಶ್ರೀ ಶಾಂತೇಶ್ವರ ಹಿರೇಮಠದಲ್ಲಿ ನಿರ್ವಿಕಲ್ಪ ಸಮಾಧಿಸ್ತರಾದ ಲಿಂ. ಪೂಜ್ಯ ಶ್ರೀ ಶಾಂತೇಶ್ವರರ ಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ದರ್ಶನ-ಪ್ರವಚನ ಮಹಾ ಮಂಗಲ ಸಮಾರಂಭದಲ್ಲಿ ಮಾತನಾಡಿದ ಅವರು, ಶರಣರ ಪುರಾಣಗಳು ಪ್ರತಿಯೊಬ್ಬರ ಬದುಕಿಗೆ ದಾರಿದೀಪವಾಗಿವೆ ಎಂದು ಅಶೀರ್ವಚನ ನೀಡಿದರು.
ಮನುಷ್ಯ ಇರುವಷ್ಟು ದಿನ ಪರೋಪಕಾರಿಯಾಗಿ ಬದುಕಬೇಕು, ನನ್ಮಾರ್ಗದಲ್ಲಿ ನಡೆದು ಸಮಾಜದ ಪ್ರೀತಿಗೆ ಪಾತ್ರರಾಗಬೇಕು, ಪುರಾಣ, ಪ್ರವಚನ, ಪುಣ್ಯಕಥೆಗಳು ಶ್ರೀಸಾಮಾನ್ಯನ ಬದುಕಿಗೆ ಮಾರ್ಗಸೂಚಿಗಳಾಗಿವೆ, ಕಾಲ ಕಾಲಕ್ಕೆ ನಮ್ಮನ್ನು ಎಚ್ಚರಿಸುವ ಕೆಲಸ ಮಾಡುತ್ತವೆ ಎಂದು ಹೇಳಿದರು. ಶರಣರ ಚಿಂತನೆಗಳು ಮೆಲುಕು ಹಾಕುವುದರಿಂದ ಮನಸ್ಸಿಗೆ ಒಂದಿಷ್ಟು ನೆಮ್ಮದಿ, ಸುಖ, ಶಾಂತಿ ದೊರಕುತ್ತದೆ ಎಂದು ಹೇಳಿದರು.
ಕಾಳಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶೌಕತ್ ಅಲಿ ನಾವದಗಿಕರ್ ಮಾತನಾಡಿ, ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ, ಪರಂಪರೆ, ಸಂಸ್ಕ್ರತಿ ಬಗ್ಗೆ ಅರಿವು ಮೂಡಿಸಬೇಕು, ಮೂರು ವರ್ಷದ ಬುದ್ದಿ ನೂರು ವರ್ಷ ಎಂಬಂತೆ ಬಾಲ್ಯದಲ್ಲಿ ಪಡೆದ ಸಂಸ್ಕಾರ ಜೀವನ ಪರ್ಯಂತ ಉಳಿಯುತ್ತದೆ, ಉತ್ತಮ ವ್ಯಕ್ತಿಯಾಗಲು ದಾರಿ ತೋರುತ್ತದೆ ಎಂದು ಹೇಳಿದರು.
ಸಂಸ್ಕಾರ, ಪರಂಪರೆ ತಿಳಿಸಿಕೊಡುವ ಕೊಂಡಿ ಕುಟುಂಬದ ಹಿರಿಯ ಜೀವಗಳಾಗಿದ್ದವು. ಇತ್ತೀಚೆಗೆ ಅವಿಭಕ್ತ ಕುಟುಂಬಗಳು ಅಳಿಸಿಹೋಗಿ ಸಣ್ಣ ಕುಟುಂಬಗಳು ಹೆಚ್ಚಾಗುತ್ತಿವೆ. ಹಾಗಾಗಿ ಹೊಂದಾಣಿಕೆ, ಪ್ರೀತಿ, ವಿಶ್ವಾಸ ದೂರವಾಗಿ ಬದುಕು ಯಾಂತ್ರಿಕವಾಗಿದೆ, ಕುಟುಂಬದ ಸದಸ್ಯರೊಂದಿಗೆ ಮಾತನಾಡುವ, ಒಗ್ಗೂಡಿ ಊಟ ಮಾಡುವ ಸಾಮರಸ್ಯ. ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮಂಗಲಗಿ-ತೆಂಗಳಿಯ ಶ್ರೀ ಶಾಂತೇಶ್ವರ ಹಿರೇಮಠದ ಪೂಜ್ಯ ಡಾ. ಶಾಂತಸೋಮನಾಥ ಶಿವಾಚಾರ್ಯರು ಆಶೀರ್ವಚನ ನೀಡಿದರು.
ನಿವೃತ್ತ ಪ್ರಾಧ್ಯಾಪಕ ಸಂಗಣ್ಣ ಧೂಳಗುಂಡಿ, ಪತ್ರಕರ್ತ ಶಿವುಕುಮಾರ ಗುತ್ತೇದಾರ, ಶಾಂತಕುಮಾರ ಪೊಲೀಸ ಪಾಟೀಲ್, ಗುಂಡಪ್ಪ ದೇಸಾಯಿ, ರಮೇಶ ಜಾಧವ್, ನೀಲಕಂಠ ಮರಗೋಳ, ಶರಣಪ್ಪ ಮರಗೋಳ, ಶರಣಸಿದ್ದ ಮರಗೋಳ, ಸಂಗನಬಸಪ್ಪ ಕಲಬುರಗಿ, ನಾಗಯ್ಯ ಒಂಟತ್ತಿ, ಬೋಜಣ್ಣ ಪವಾರ, ಸಂಗಣ್ಣ ಗಡಗಿ, ಶ್ವೇತಾ ಆರ್. ಪಾಟೀಲ್, ಗುಂಡಪ್ಪ ಧೂಳಗುಂಡಿ, ರಂಗಾರೆಡ್ಡಿ, ಶರಣಬಸಪ್ಪ ಮರಗೋಳ, ಮೋನೇಶ ವಿಶ್ವಕರ್ಮ, ಅಂಬರೀಶ ಕೋರೆ, ಚಂದ್ರಕಾಂತ ಪೇಚೆಟ್ಟಿ, ಶಿವಶಂಕರ ಪೇಚೆಟ್ಟಿ ಸೇರಿದಂತೆ ಮಂಗಲಗಿ, ಕೊಡದೂರ, ರಾಯಕೋಡ, ಭರತನೂರ, ಮಳಗಿ ಗ್ರಾಮದ ಭಕ್ತರು ಇದ್ದರು.
ಪುರಾಣ ಪ್ರವೀಣ ಉದಯಕುಮಾರ ಶಾಸ್ತ್ರೀ, ಭೀಮಳ್ಳಿ ಶ್ರೀ ರೇವಣಸಿದ್ದೇಶ್ವರ ದರ್ಶನ-ಪ್ರವಚನ ನಡೆಸಿಕೊಟ್ಟರು. ಗುರುಶಾಂತಯ್ಯ ಸ್ಥಾವರಮಠ, ಮಹೇಶ ತುಪ್ಪದ ಸಂಗೀತ ಸೇವೆ ಸಲ್ಲಿಸಿದರು. ವೀರಭದ್ರಯ್ಯ ಸ್ಥಾವರಮಠ ತಬಲಾ ಸೇವೆ ಸಲ್ಲಿಸಿದರು. ಸೂರ್ಯಕಿರಣ ಸ್ವಾಗತಿಸಿದರು, ಆನಂದ ಶಾಸ್ತ್ರೀ ಮಠಪತಿ ನಿರೂಪಿಸಿ ವಂದಿಸಿದರು.