Oplus_131072

ಚಿತ್ತಾಪುರ ನಾಗಯ್ಯಸ್ವಾಮಿ ಅಲ್ಲೂರು ಕುಟುಂಬವರ್ಗದವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಸಚಿವ ಪ್ರಿಯಾಂಕ್ ಖರ್ಗೆ, ಸೂಕ್ತ ಪರಿಹಾರದ ಭರವಸೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಅನಾರೋಗ್ಯದಿಂದ ಮೊನ್ನೆ ನಿಧನರಾದ ಹಿರಿಯ ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರು ಅವರ ಕುಟುಂಬದವರನ್ನು ಅಲ್ಲೂರು ಗ್ರಾಮದ ಮನೆಯಲ್ಲಿ ಸೋಮವಾರ ಭೇಟಿ ಮಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಂತ್ವನ ಹೇಳಿದರು.

ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು ನೀವು ಧೈರ್ಯದಿಂದ ಇರಿ ನಿಮ್ಮ ಜೊತೆ ನಾವಿದ್ದೇವೆ ಎಂದು ಕುಟುಂಬದವರಿಗೆ ಸಚಿವರು ಧೈರ್ಯ ತುಂಬಿದರು.

ನಾಗಯ್ಯಸ್ವಾಮಿ ಅವರ ಸಹೋದರ, ಅವರ ಪುತ್ರಿ ಹಾಗೂ ಪುತ್ರನ ಜತೆ ಮಾತನಾಡಿದ ಸಚಿವರು ಸಾಂತ್ವನ ತಿಳಿಸಿ ಅವರ ವಿಧ್ಯಾಭ್ಯಾಸ ದ ಬಗ್ಗೆ ವಿಚಾರಿಸಿದರು.

ಹಿರಿಯ ಪತ್ರಕರ್ತರಾಗಿದ್ದ ನಾಗಯ್ಯಸ್ವಾಮಿ ಅವರು ಪತ್ರಿಕೋದ್ಯಮ ವೃತ್ತಿಯ ಜೊತೆಗೆ ಸಾಹಿತ್ಯಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಚಿತ್ತಾಪುರ ತಾಲೂಕಿನಲ್ಲಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಿದ್ದರು. ಅವರ ನಿಧನದಿಂದಾಗಿ ಪತ್ರಿಕೋದ್ಯಮ ಕ್ಷೇತ್ರ ಓರ್ವ ಹಿರಿಯ ಮಾರ್ಗದರ್ಶಿ, ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರನ್ನು ಕಳೆದುಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕೆಪಿಸಿಸಿ ಕಾರ್ಯದರ್ಶಿ ರಮೇಶ ಮರಗೋಳ, ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಜಿಪಂ ಮಾಜಿ ಸದಸ್ಯರಾದ ಶಿವಾನಂದ ಪಾಟೀಲ, ಶಿವರುದ್ರ ಭೀಣಿ, ತಾಪಂ ಮಾಜಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ನಾಗು ಗೌಡ ಅಲ್ಲೂರ, ಶಾಂತಣ್ಣ ಚಾಳೀಕಾರ, ಶರಣಪ್ಪ ನಾಶಿ, ರಾಮಲಿಂಗ ಹೊನಿಗೇರಿ, ರಾಮಣ್ಣ ನಾಟೀಕಾರ್, ಮಹಾದೇವ ಬೋನಿ, ಶರಣು ಡೋಣಗಾಂವ, ಸಂಜಯ ಬುಳಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!