Oplus_131072

ಚಿತ್ತಾಪುರ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜೀವನ ದರ್ಶನ ಪ್ರವಚನ, ನಾನು ನನ್ನದು ಬಿಟ್ಟಾಗ ದೇವರ ದರ್ಶನ ಆಗಲಿದೆ: ಜಗಳೂರ ಶಾಸ್ತ್ರೀಗಳು

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ನಾನು ನನ್ನದು ಈ ಎರಡು ಬಿಟ್ಟು ಬಂದಾಗ ದೇವರ ದರ್ಶನ ಆಗಲಿದೆ ಎಂದು ಜಗಳೂರ ಪ್ರವಚನ ರತ್ನ ಪಂ.ವೀರುಪಾಕ್ಷಯ್ಯ ಶಾಸ್ತ್ರೀಗಳು ಹೇಳಿದರು.

ಪಟ್ಟಣದ ವರುಣ ನಗರದ ದೇವಸ್ಥಾನದ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಚಿತ್ತಾಪುರ ಹಾಗೂ ಶ್ರೀ ಶರಣಬಸವೇಶ್ವರ ದೇವಸ್ಥಾನ ಜೀರ್ಣೋದ್ದಾರ ಹಾಗೂ ಸೇವಾ ಟ್ರಸ್ಟ್ ಇವರ ಸಹಯೋಗದೊಂದಿಗೆ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ದೇವಸ್ಥಾನ ಅಭಿವೃದ್ಧಿಯ ಪ್ರಯುಕ್ತ  ಹಮ್ಮಿಕೊಂಡಿದ್ದ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜೀವನ ದರ್ಶನ ಪ್ರವಚನದ ಸೋಮವಾರ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನಕ್ಕೆ ಬೆಳಕು ಬೇಕಾದರೆ ನಾನು ನನ್ನದು ಬೀಡಬೇಕು ಎಂದು ಹೇಳಿದರು.

ಹಸಿದು ಬಂದವರಿಗೆ ಅನ್ನ ಹಾಕಿದ, ಎಲ್ಲರನ್ನೂ ಅಪ್ಪಿಕೊಂಡು ನಿರಾಶ್ರಿತರಿಗೆ ಆಶ್ರಯ ಕೊಟ್ಟು ಜನರಲ್ಲಿ ಅರಿವು ಮೂಡಿಸಿದ ಶರಣ ದೇವರಾದ ಎಂದು ಹೇಳಿದರು.

ಪ್ರೀತಿ ಮತ್ತು ದ್ವೇಷ ಎರಡೇ ಅಕ್ಷರದಲ್ಲಿದೆ ಆದರೆ ಪ್ರೀತಿಗೆ ಅಗಾಧ ಶಕ್ತಿ ಇದೆ, ಹೀಗಾಗಿ ಎಲ್ಲರೊಂದಿಗೆ ಪ್ರೀತಿಯಿಂದ ಎರಡು ಮಾತಾಡಿ ಉತ್ತಮ ಸಂಬಂಧ ಬೆಳೆಯುತ್ತದೆ ಈ ನಿಟ್ಟಿನಲ್ಲಿ ಒಳ್ಳೆಯವರಾಗಿ ಒಳ್ಳೆಯದನ್ನು ಮಾಡಿ ಎಂದು ಆಶೀರ್ವಚನ ನೀಡಿದರು.

ಮೊಬೈಲ್ ಹತ್ತಿರ ಆಯ್ತು ಸಂಬಂಧ ದೂರ ಆಯ್ತು ಆದ್ದರಿಂದ ಮೊಬೈಲ್ ಸ್ವಲ್ಪ ದೂರ ಇಡಿ ಎಂದು ಕಿವಿಮಾತು ಹೇಳಿದರು. ನೂರು ದಿನ ನೂರು ದಾನಿಗಳ ಸಹಕಾರದಿಂದ ಒಂದು ಭವ್ಯ ಕಲ್ಯಾಣ ಮಂಟಪ ನಿರ್ಮಾಣ ಆಗಿರುವುದು ಯುವಕರ ಪಾತ್ರ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದಿಗ್ಗಾಂವ ಶ್ರೀ ಸಿದ್ದವೀರ ಶಿವಾಚಾರ್ಯರು, ಗುಂಡಗುರ್ತಿ ಶ್ರೀ ಸದ್ಯೋಜಾತ ಶಿವಾಚಾರ್ಯರು, ದಂಡೋತಿಯ ಬಾಲಯೋಗಿನಿ ಜಯಶ್ರೀ ಮಾತಾಜೀ, ವೀರಶೈವ ಸಮಾಜ ಮುಖಂಡರಾದ ಸೋಮಶೇಖರ ಪಾಟೀಲ ಬೆಳಗುಂಪಾ, ಶರಣಗೌಡ ಪಾಟೀಲ್ ಭೀಮನಳ್ಳಿ, ಖಾಸಗಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ ಬಟಗೇರಿ ಮುಡಬೂಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರಕರ್, ನಿವೃತ್ತ ಶಿಕ್ಷಕ ಲಿಂಗಣ್ಣ ಮಲ್ಕನ್ ಕೊಲ್ಲೂರ, ರೆಡ್ಡಿ ಸಮಾಜ ಅಧ್ಯಕ್ಷ ಮಲ್ಲಿಕಾರ್ಜುನರಡ್ಡಿ ಇಜಾರ್, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ ಅಲ್ಲಿಪೂರ, ಸಂತೋಷ ಕೋಮಟಿ ವಾಡಿ.

ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ನಾಗಪ್ಪ ಕಲ್ಲಕ್, ಸದಸ್ಯರಾದ ಚಂದ್ರಶೇಖರ ವಾಯ್. ಕಾಶಿ, ಪಾಶಾಮಿಯ್ಯಾ ಖುರೇಷಿ, ರಮೇಶ ಬೊಮ್ಮನಳ್ಳಿ, ಪ್ರಭು ಗಂಗಾಣಿ, ಶಾಮ್ ಮೇದಾ, ಮಹ್ಮದ್ ರಸೂಲ್ ಮುಸ್ತಫಾ, ವಿನೋದ ಗುತ್ತೇದಾರ, ಜಗದೀಶ ಚವ್ಹಾಣ, ಸುಭಾಷ ಜಾಧವ, ಮಹ್ಮದ್ ಎಕ್ಖಾಲ್, ಶಿವರಾಜ ಜಿ. ಪಾಳೇದ್, ಸಂತೋಷ ಚೌದರಿ, ಸುಶೀಲಾ ದೇವಸುಂದರ, ಪತ್ರಕರ್ತರಾದ ವಿರೇಂದ್ರಕುಮಾರ ಕೋಲ್ಲೂರ, ಕಾಶಿನಾಥ ಗುತ್ತೇದಾರ, ಮಲ್ಲಿಕಾರ್ಜುನ ಮುಡಬೂಳಕರ್, ರವಿಶಂಕರ ಬುರ್ಲಿ, ಎಂ.ಡಿ ಮಶಾಕ್, ಜಗದೇವ ದಿಗ್ಗಾಂವಕರ್, ಸಂತೋಷ ಕಟ್ಟಿಮನಿ, ಜಗದೇವ ಕುಂಬಾರ, ಪೃಥ್ವಿ ಸಾಗರ, ಚಂದ್ರಶೇಖರ ಬಳ್ಳಾ, ಮಂಜುನಾಥ ಸ್ವಾಮಿ ಹಾಲಕೂಡ ವೇದಿಕೆಯಲ್ಲಿದ್ದರು.

ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ನಾಗರಾಜ ಭಂಕಲಗಿ, ಮಲ್ಲರೆಡ್ಡಿ ಗೋಪಸೇನ್, ಕೋಟೇಶ್ವರ ರೇಷ್ಮಿ, ಬಸವರಾಜ ಕಾಳಗಿ, ಆನಂದ ಪಾಟೀಲ ನರಿಬೋಳ, ಚಂದ್ರಶೇಖರ ಉಟಗೂರ, ಅನೀಲ ವಡ್ಡಡಗಿ, ಸಂತೋಷ ಹಾವೇರಿ, ಶಿವಕುಮಾರ ಪೂಜಾರಿ, ನಾಗರಾಜ ಹೂಗಾರ, ನಾಗರಾಜ ಕಡಬೂರ, ಮಹಾದೇವ ಅಂಗಡಿ, ರಮೇಶ್ ಕಾಳನೂರ, ರಮೇಶ್ ಮತಕುಂಟಿ ಸೇರಿದಂತೆ ಇತರರು ಇದ್ದರು. ಅಂಬರೀಷ್ ಸುಲೇಗಾಂವ ಸ್ವಾಗತಿಸಿದರು, ವಿರೇಶ್ ಕರದಾಳ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!