ಪ್ರಕರಣ ದಾಖಲಿಸುವಂತೆ ಪೊಲೀಸ್ ಠಾಣೆಗೆ ದೂರು
ಶಾಸಕ ಮುನಿರತ್ನ ವಿರುದ್ಧ ಕಾನೂನು ಕ್ರಮಕ್ಕೆ ಡಿಎಸ್ಎಸ್ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಜಾತಿ ನಿಂದನೆ, ಮಹಿಳೆಯನ್ನು ಬಹಿರಂಗವಾಗಿ ಅವಹೇಳನ ಮಾಡಿದ ಮಾಜಿ ಸಚಿವ ಹಾಲಿ ಶಾಸಕ ಮುನಿರತ್ನ ವಿರುದ್ಧ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ದೌರ್ಜನ್ಯ ತಿದ್ದುಪಡಿ ಕಾಯ್ದೆ 2015 ರಂತೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಭೀಮಶಕ್ತಿ ಕರ್ನಾಟಕ) ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್ ನೇತೃತ್ವದಲ್ಲಿ ಮುಖಂಡರು ಸ್ಥಳೀಯ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ.
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಮಾಜಿ ಸಚಿವ ಹಾಲಿ ಸದಸ್ಯ ಮುನಿರತ್ನ ನಾಯ್ಡು ತನಗೆ ತಿಳಿದಿರುವ ಬಿಬಿಎಂಪಿ ಗುತ್ತಿಗೆದಾರ ಚಲುವರಾಜವರೊಂದಿಗೆ ಹಣಕಾಸಿನ ವಿಚಾರವಾಗಿ ಮಾತುಕತೆ ವೇಳೆಯಲ್ಲಿ ಅಸಂಸಧೀಯ ಮಾತುಗಳು ಬಳಸಿ ಜಾತಿ ನಿಂದನೆ ಹಾಗೂ ಮಹಿಳೆಯರ ಅವಹೇಳನ ಮಾಡಿದ್ದಾರೆ ಹೀಗಾಗಿ ಅವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮುನಿರತ್ನಂ ನಾಯ್ಡು ಹಾಲಿ ವಿಧಾನಸಭಾ ಸದಸ್ಯರಾಗಿದ್ದು ನಾಗರಿಕ ಸಮಾಜಕ್ಕೆ ಕಾನೂನು ಬದ್ಧ ಸಂದೇಶ ನೀಡಬೇಕಾಗಿದ್ದು ಸಮಾಜಕ್ಕೆ ಮಾದರಿಯಾಗಿ ನಿಲ್ಲಬೇಕಾಗಿತ್ತು, ಆದರೆ ಸಮಾಜಕ್ಕೆ ಮಾರಕವಾಗಿ ಬಿಂಬಿತರಾಗಿದ್ದಾರೆ. ಇವರ ನಡವಳಿಕೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮತ್ತು ಮಹಿಳೆಯರ ಹಕ್ಕುಗಳಿಗೆ ದಕ್ಕೆಯಾಗುವಂತೆ ವರ್ತಿಸಿರುವುದಲ್ಲದೇ ಜಾತಿಯ ಬಗ್ಗೆ ಅತ್ಯಂತ ಕೀಳು ಮಟ್ಟದಲ್ಲಿ ಪದೇ ಪದೇ ಮಾತನಾಡಿ ನಾಡಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮುದಾಯಗಳಿಗೆ ಅನುಮಾನಿಸಿ ಸ್ವಾಭಿಮಾನ ಮತ್ತು ಗೌರವಕ್ಕೆ ದಕ್ಕೆಯನ್ನುಂಟು ಮಾಡಿರುವ ಶಾಸಕರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ತಿದ್ದುಪಡಿ ಕಾಯ್ದೆ 2015 ರಂತೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಂತೆ ಪ್ರಕರಣ ದಾಖಲಿಸಿ ಮತ್ತು ಕಾನೂನು ರೀತ್ಯಾ ಕ್ರಮ ಜರುಗಿಸಿ, ಮಹಿಳೆಯರ ರಕ್ಷಣೆ ಮತ್ತು ಸಾಮಾಜಿಕ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಡಿಎಸ್ಎಸ್ ತಾಲೂಕು ಅಧ್ಯಕ್ಷ ಲೋಹಿತ್ ಮುದ್ದಡಗಿ, ವಿಭಾಗೀಯ ಅಧ್ಯಕ್ಷ ಆನಂದ ಮೊಗಲಾ, ಜಿಲ್ಲಾ ದಲಿತ ಯುವ ಮುಖಂಡ ಶ್ರೀಕಾಂತ್ ಶಿಂಧೆ, ನಗರ ಸಂಚಾಲಕ ಬಸವರಾಜ ಮುಡಬೂಳ, ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಶರಣು ಮರಗೋಳ, ಯುವ ಮುಖಂಡರಾದ ಪರಶು ಮೊಗಲಾ, ಕುಶಾಲ್ ನಾಟೀಕಾರ, ಅಂಬರೀಶ್ ಮತ್ತಿಮುಡ್ ಇದ್ದರು.