ಕಾಳಗಿ ನೀಲಕಂಠ ಕಾಳೇಶ್ವರ ಪುರಾಣ ನಾಳೆಯಿಂದ ಪ್ರಾರಂಭ, ಏ.23 ರಂದು ಭವ್ಯ ರಥೋತ್ಸವ: ರಾಜೇಶ್ ಗುತ್ತೇದಾರ
ನಾಗಾವಿ ಎಕ್ಸಪ್ರೆಸ್
ಕಾಳಗಿ : ಪಟ್ಟಣದ ಆರಾಧ್ಯ ದೈವ ಶ್ರೀ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಎಪ್ರಿಲ್ 10 ರಿಂದ ದಿ.20 ರವರೆಗೆ ನೀಲಕಂಠ ಕಾಳೇಶ್ವರ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪುರಾಣ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ರಾಜೇಶ್ ಜಗದೇವ ಗುತ್ತೇದಾರ ಹೇಳಿದರು.
ಪಟ್ಟಣದ ನೀಲಕಂಠ ಕಾಳೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರಾ ಮಹೋತ್ಸವ ಅಂಗವಾಗಿ ಪ್ರಥಮ ಬಾರಿಗೆ ನೀಲಕಂಠ ಕಾಳೇಶ್ವರ ಚರಿತ್ರೆಯ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪುರಾಣ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದ್ದು ಪಟ್ಟಣದ ಹಳೆ ಬಸ್ ನಿಲ್ದಾಣ, ದೇವಸ್ಥಾನ ಆವರಣ ವಿದ್ಯುತ್ ದ್ವೀಪಗಳಿಂದ ಅಲಂಕಾರ ಮಾಡಲಾಗಿದೆ. ದಿ.10 ಗುರುವಾರದಿಂದ ಆರಂಭಗೊಳ್ಳುವ ಪುರಾಣ ಕಾರ್ಯಕ್ರಮದಲ್ಲಿ ಮುಗಳಖೋಡ ಜಿಡಗ ಮಠದ ಪೂಜ್ಯ ಮುರುಘರಾಜೇಂದ್ರ ಮಹಾಸ್ವಾಮಿಗಳು, ಹಾರಕೂಡ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು, ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಲಿಂಗರಾಜಪ್ಪ ಅಪ್ಪಾ, ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜರು, ಹೊನ್ನಕಿರಣಗಿ ಪೂಜ್ಯ ಚಂದ್ರಗುಂಡ ಶಿವಾಚಾರ್ಯರು, ಅಫಜಲಪುರ ಪೂಜ್ಯ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಮಳಖೇಡ ಡಾ. ಸಯದ್ ಶಾಹಮುಸ್ತಾಫ ಖಾದ್ರಿ, ಮಾದನಹಿಪ್ಪರಗಾ ಪೂಜ್ಯ ಶಿವಲಿಂಗ ಮಹಾಸ್ವಾಮಿಗಳು, ಮುತ್ಯನಬಬಲಾದ ಪೂಜ್ಯ ಗುರುಪಾದಲಿಂಗ ಮಹಾಸ್ವಾಮಿಗಳು, ಭರತನೂರ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಸಚಿವ ಡಾ. ಶರಣಪ್ರಕಾಶ ಪಾಟೀಲ, ಶಾಸಕ ಡಾ.ಅವಿನಾಶ್ ಜಾಧವ್, ಸಿದ್ದು ಪಾಟೀಲ ಹುಮನಾಬಾದ, ಸಂಸದ ಸಾಗರ ಖಂಡ್ರೆ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಚಂದ್ರಶೇಖರ ಪಾಟೀಲ ಹುಮನಾಬಾದ, ತಿಪ್ಪಣ್ಣಪ್ಪ ಕಮಕನೂರ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ, ಕಾಳಗಿ ಇತಿಹಾಸ ಮತ್ತು ಸಂಸ್ಕೃತಿ ಪುಸ್ತಕದ ಲೇಖಕಿ ಹನುಮಾಕ್ಷಿ ಗೋಗಿ ಸೇರಿದಂತೆ ನಾಡಿನ ಹರಗುರು ಚರಮೂರ್ತಿಗಳು ಹಾಗೂ ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮ ವಿವರ : ಏ.9 ಬುಧವಾರ ಸಾಯಂಕಾಲ 6 ಗಂಟೆಗೆ ರೊಟ್ಟಿ ಬುಟ್ಟಿ ಮೆರವಣಿಗೆ, ರಾತ್ರಿ 7 ಗಂಟೆಗೆ ರೌದ್ರಾವತಿ ನದಿಗೆ ಹೊನ್ನಕಿರಣಗಿ ವೈದಿಕ ಬಳಗದಿಂದ ಗಂಗಾರತಿ, ಏ.10 ಗುರುವಾರದಿಂದ, ಏ.20 ರವಿವಾರದವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ನೀಲಕಂಠ ಕಾಳೇಶ್ವರ ಮಹಾಪುರಾಣ, ಏ.21 ಸೋಮವಾರ ಸಂಜೆ 6 ಗಂಟೆಗೆ ಸಹಸ್ರ ದೀಪೋತ್ಸವ, ಏ.22 ಮಂಗಳವಾರ ಬೆಳಿಗ್ಗೆ 6 ಅಗ್ನಿಪೂಜೆ, ಏ.23 ಬುಧವಾರ ಬೆಳಿಗ್ಗೆ 6 ಗಂಟೆಗೆ ಅಗ್ನಿಪ್ರವೇಶ, ಸಂಜೆ 6 ಗಂಟೆಗೆ ನೀಲಕಂಠ ಕಾಳೇಶ್ವರ ಭವ್ಯ ರಥೋತ್ಸವ ಜರುಗುವುದು. ಏ.24 ಗುರುವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೀಲಕಂಠ ಕಾಳೇಶ್ವರ ಬೆಳ್ಳಿಮೂರ್ತಿ ಪಲ್ಲಕ್ಕಿ ಮೆರವಣಿಗೆ ಜರುಗುವುದು. ಏ.23, 24 ಮತ್ತು 25 ರಂದು ಮೂರು ದಿನಗಳ ಕಾಲ ಪ್ರತಿದಿನ ರಾತ್ರಿ 10.30ಗಂಟೆಗೆ ಧರ್ಮದ ನುಡಿ ಬೆಂಕಿಯ ಕಿಡಿ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಪ್ರಶಾಂತ ಕದಮ್, ಬಸಯ್ಯಸ್ವಾಮಿ ಪ್ಯಾಟಿಮಠ, ಶಿವಶರಣಪ್ಪ ಗುತ್ತೇದಾರ, ಜಗನ್ನಾಥ ಚಂದನಕೇರಿ, ಸಂತೋಷ ಪತಂಗೆ, ಶೇಖರ ಪಾಟೀಲ, ನಾಗರಾಜ ಚಿಕ್ಕಮಠ, ಶಿವಶರಣಪ್ಪ ಮಾಕಪನೋರ, ಶಿವಕುಮಾರ್ ಶಾಸ್ತ್ರಿ, ಶರಣಪ್ಪ ಬೆಲೂರ, ಅನೀಲಕುಮಾರ ಗುತ್ತೇದಾರ, ಶಿವರಾಯ ಪಡಶೆಟ್ಟಿ, ರೇವಣಸಿದ್ಧ ಕುಡ್ಡಳ್ಳಿ, ರಮೇಶ ನಾಮದಾರ, ಅರ್ಜುನ ಪಂಚಾಳ ಸೇರಿದಂತೆ ಅನೇಕರು ಇದ್ದರು.