ಕಲಬುರಗಿ ಕಬ್ಬಿನ ಬಾಕಿ ಹಣ ರೈತರಿಗೆ ಸಂದಾಯ ಮಾಡುವಂತೆ ಆಗ್ರಹಿಸಿ ಕಬು ಬೆಳೆಗಾರರ ಸಂಘ ಮುಖ್ಯಮಂತ್ರಿಗೆ ಮನವಿ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕಬ್ಬಿನ ಬಾಕಿ ಹಣ ಉಳಿಸಿಕೊಂಡ ಬೀದರ್, ಯಾದಗಿರ, ಆಳಂದ ಸಕ್ಕರೆ ಕಾರ್ಖಾನೆಗಳು ಚಿಂಚೋಳಿ. ಕಾಳಗಿ, ಚಿತಾಪುರ, ಸೇಡಂ, ಕಮಲಾಪುರ, ಮಹಾಗಾಂವ ಹೀಗೆ ಅನೇಕ ತಾಲೂಕಿನ ರೈತರ ಬಾಕಿ ಉಳಿಸಿಕೊಂಡ ಹಣ ರೈತರಿಗೆ ಕೂಡಲೇ ಕೊಡಬೇಕು. ಈಗಾಗಲೇ ಬೇಸಿಗೆ ಕಾಲ ರೈತರ ತಮ್ಮ ತಮ್ಮ ಮಕ್ಕಳ ಮದುವೆ, ಆಳಿನ ಪಗಾರ, ಎತ್ತು ಖರೀದಿ, ಟ್ರ್ಯಾಕ್ಟರ್ ಕಂತು ಕಟ್ಟುವುದು ಮತ್ತು ಈಗಾಗಲೇ ಯುಗಾದಿ ಹಬ್ಬ ಮುಗಿದು ಹೋಗಿದೆ ತಂದಿರತಕ್ಕಂತಹ ಸಾಲ ಕೊಡುವುದಿದೆ ಹಾಗಾಗಿ ಕೂಡಲೇ ರೈತರ ಬಾಕಿ ಉಳಿಸಿಕೊಂಡ ಹಣ ಕೊಡಬೇಕು ಎಂದು ರೈತ ಸೇನೆ ಮತ್ತು ಕಬು ಬೆಳೆಗಾರರ ಸಂಘದ ಕಾಳಗಿ-ಚಿಂಚೋಳಿ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ರಟಕಲ್ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
2025-26 ನೇ ಸಾಲಿನ ಕಬ್ಬಿಗೆ ಬೆಂಬಲ ಬೆಲೆ ರಾಜ್ಯ ಸರ್ಕಾರ ಹೆಚ್ಚು ಮಾಡಬೇಕು, ಸಕ್ಕರೆ ಇಳುವರಿ ಮತ್ತು ತೂಕದಲ್ಲಿ ಮೋಸ ಮಾಡುವ ಸಕ್ಕರೆ ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಮತ್ತು ಇಳುವರಿ ಚೆಕ್ ಮಾಡುವ ಲ್ಯಾಬ್ ಸರ್ಕಾರದಿಂದ ಸ್ಥಾಪಿಸಬೇಕು, ತೋಟದ ಮನೆಗಳಿಗೆ ರಾತ್ರಿ ಹೊತ್ತು ಬೆಳಕಿಗೋಸ್ಕರ ವಿದ್ಯುತ್ ನೀಡಲು ಆದೇಶ ಮಾಡಿದರೂ ಕೂಡ ಅಧಿಕಾರಿಗಳು ರೈತರಿಗೆ ವಿದ್ಯುತ್ ನೀಡದೆ ಕಾಲ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ತೋಟದ ಮನೆಗಳಿಗೆ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳ ಬಾಕಿ ಹಣ ಕೂಡಲೇ ರೈತರಿಗೆ ಸಂದಾಯ ಮಾಡಿಸಬೇಕು. ಕಲಬುರಗಿ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ, ನಟೆ ರೋಗದಿಂದ ಹಾಳಾದ ತೊಗರಿ ಬೆಳೆಗಳಿಗೆ ಕೂಡಲೇ ಪರಿಹಾರ ಘೋಷಿಸಬೇಕು. ಬೆಳೆ ವಿಮೆ ಕಟ್ಟಿದ ರೈತರಿಗೆ ಕೂಡಲೇ ವಿಮೆ ಸಂದಾಯ ಮಾಡಲು ವಿಳಂಬ ಮಾಡುತ್ತಿರುವುದನ್ನು ಪರಿಶೀಲಿಸಿ ಕೂಡಲೇ ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಜಮಾ ಮಾಡಬೇಕು ಎಂದು ಹೇಳಿದರು.
ಕಬ್ಬಿಗೆ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಕಬ್ಬು ಬೆಂಕಿಗೆ ಆಹುತಿಯಾದಾಗ ವಿಮೆ ಜಾರಿಗೆ ತರಬೇಕು ರೈತರ ದಾಖಲಾತಿಗಳಾದ ಪಹಣಿ ಮತ್ತು ಇತರ ದಾಖಲಾತಿಗಳಿಗೆ ಹತ್ತು ರೂಪಾಯಿ ಇರುವ ಬೆಲೆ 25 ರೂಪಾಯಿ ಮಾಡಿರುವುದನ್ನು ನಿಲ್ಲಿಸಿ ರೂ.10 ಗೆ ಇಳಿಸಬೇಕು ಮತ್ತು ರೈತರು ಖರೀದಿ ಮಾಡುತ್ತಿರುವ ಜಮೀನುಗಳ ಸಬ್ ರೆಸ್ಟೋರ್ ಟ್ಯಾಕ್ಸ್ ಅಲ್ಲಿ ಅತೀ ಹೆಚ್ಚು ಆಗಿದೆ ಅದನ್ನು ಕಡಿವಾಣ ಹಾಕಿ ಇಂದಿನ ಟ್ಯಾಕ್ಸ್ ಬೆಲೆ ಮುಂದೆ ಕೂಡ ಜಾರಿಗೆ ತರಬೇಕು, ಸರ್ಕಾರಿ ದವಾಖಾನೆಯಲ್ಲಿ ಬಡ ರೋಗಿಗಳಿಗೆ ನೋಂದಣಿ ಶುಲ್ಕ ಹೆಚ್ಚಿಸಿರುವುದನ್ನು ಕಡಿತಗೊಳಿಸಿ ಹಿಂದೆ ಇರುವ ಹಾಗೆ ಕೇವಲ ಐದು ರೂಪಾಯಿಗೆ ಹೆಸರು ನೋಂದಾಯಿಸುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.
ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಕಳಪೆ ಮಟ್ಟದಾಗಿದೆ ವರ್ಷಗಳಿಂದ ನೀರಿನ ಸಮಸ್ಯೆ ಉದ್ಭವವಾಗಿದೆ. ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು ಗ್ರಾಮಸ್ಥರು ದಿನನಿತ್ಯ ನೀರಿಗಾಗಿ ಪರದಾಡುತ್ತಿದ್ದೇವೆ ಹತ್ತಾರು ಬಾರಿ ರಸ್ತೆಗಿಳಿದು ಹೋರಾಟ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ, ಅದಕ್ಕಾಗಿ ಕೂಡಲೇ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಪತ್ರ ಸಲ್ಲಿಸಿದ್ದಾರೆ.