ಚಿತ್ತಾಪುರ ಜನ ಸಾಗರದ ನಡುವೆ ಶ್ರೀ ಶರಣಬಸವೇಶ್ವರ ಭವ್ಯ ರಥೋತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಜನ ಸಾಗರದ ನಡುವೆ ಪಟ್ಟಣದ ವರುಣ ನಗರದ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ಭವ್ಯ ರಥೋತ್ಸವ ಗುರುವಾರ ಸಂಜೆ ನಡೆಯಿತು.
ಶರಣಬಸವೇಶ್ವರ ಮಹಾರಾಜ ಕೀ ಜೈ ಎನ್ನುವ ಜಯ ಘೋಷಗಳು ಕೂಗುತ್ತಾ ಭಕ್ತಾದಿಗಳು ರಥದ ಮೇಲೆ ಖಾರಿ ಉತ್ತತ್ತಿ, ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಭಾವ ಮೆರೆದರು.
ಜಾತ್ರಾ ಮಹೋತ್ಸವದ ಅಂಗವಾಗಿ ಋಗ್ವೇದ ವೈದಿಕ ಪುರೋಹಿತ ಟ್ರಸ್ಟ್ ವೈದಿಕ ಬಳಗದವರಿಂದ ಶ್ರೀ ಶರಣಬಸವೇಶ್ವರ ಕೃರ್ತು ಗದ್ದುಗೆಗೆ ರುದ್ರಾಭಿಷೇಕ ಹಾಗೂ ದಂಪತಿಗಳಿಂದ ಶ್ರೀ ಗಣಪತಿ ಹೋಮ ಉಮಾಮಹೇಶ್ವರಿ ಕಲ್ಯಾಣೋತ್ಸವದೊಂದಿಗೆ ಮಂಗಲಕಾರ್ಯದ ವೇದಿಕೆ ಪೂಜೆ ಗುರುವಾರ ಬೆಳಗ್ಗೆ 8 ಗಂಟೆಗೆ ಶ್ರೀ ಕಂಬಳೇಶ್ವರ ಸಂಸ್ಥಾನ ಮಠದಿಂದ ಕಳಸ ಮೆರವಣಿಗೆ ನಂತರ ಕಳಸಾರೋಹಣ ಸಾಯಂಕಾಲ 4 ಕ್ಕೆ ಶ್ರೀ ಪ್ರಭುರಾಜ ರೇಷ್ಮೆ ಇವರ ಮನೆಯಿಂದ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಹಾಗೂ ಶ್ರೀ ರಾಜಶೇಖರರೆಡ್ಡಿ ದೇಶಮುಖ ಮನೆಯಿಂದ ಕುಂಭದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ಮೂಲಕ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ತಲುಪಿದ ನಂತರ ಭವ್ಯ ರಥೋತ್ಸವ ಜರುಗಿತು.
ನಂತರ ಶ್ರಮದಾನಿಗಳಿಗೆ ಗೌರವಿಸಲಾಯಿತು. ಚನ್ನವೀರ ಟಿ ಬೆಳಗುಂಪಾ ಕಲಾ ತಂಡದವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶರಣಬಸವೇಶ್ವರ ದೇವಸ್ಥಾನ ಜೀರ್ಣೋದಾರ ಹಾಗೂ ಸೇವಾ ಟ್ರಸ್ಟ್ ಹಾಗೂ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಸಮಿತಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಸೇರಿದಂತೆ ಅಸಂಖ್ಯಾತ ಭಕ್ತರು ಭಾಗವಹಿಸಿದ್ದರು.