ವಿದ್ಯಾರ್ಥಿಗಳ ಜನಿವಾರ ಕತ್ತರಿಸಿ ಅವಮಾನಿಸಿದ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಲು ಬ್ರಾಹ್ಮಣ ಸಮಾಜ ಒತ್ತಾಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿ ಅವಮಾನ ಮಾಡಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಅವರನ್ನು ಸೇವೆಯಿಂದ ವಜಾ ಮಾಡಿ ಅನ್ಯಾಯವಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿ ಬ್ರಾಹ್ಮಣ ಸಮಾಜದ ಮುಖಂಡರು ಶನಿವಾರ ಪ್ರತಿಭಟಿಸಿ ಉನ್ನತ ಶಿಕ್ಷಣ ಸಚಿವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಈ ವೇಳೆ ತಾಲೂಕು ಅಧ್ಯಕ್ಷ ಗಿರೀಶ್ ಜಾನೀಬ್ ಮಾತನಾಡಿ, ರಾಜ್ಯದ ಬೀದರ ಸೇರಿದಂತೆ ವಿವಿಧ ಜಿಲ್ಲೆಯ ಸಿ.ಇ.ಟಿ. ಪರೀಕ್ಷೆ ನಡೆಯುತ್ತಿರುವ ಸಮಯದಲ್ಲಿ ಬ್ರಾಹ್ಮಣ ಜನಾಂಗದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವಾಗ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸಿ ವಿದ್ಯಾರ್ಥಿಗಳು ಧರಿಸಿದ ಯಜ್ಯೋಪವೀತ (ಜನಿವಾರ) ವನ್ನು ಸಿ.ಇ.ಟಿ. ಪರೀಕ್ಷಾಧಿಕಾರಿಗಳು ಕತ್ತರಿಸಿ ಹಾಕಿದ್ದಾರೆ ಖಂಡನಾರ್ಹ ಎಂದು ಹೇಳಿದರು.
ಯಜ್ಯೋಪವೀತ (ಜನಿವಾರ)ವನ್ನು ತೆಗೆದು ಹಾಕಿರುವುದು ಬ್ರಾಹ್ಮಣರ ಮನಸ್ಸಿಗೆ ಧಕ್ಕೆಯಾಗಿದ್ದು ಜನಿವಾರ ಕತ್ತರಿಸಿದ ತಪ್ಪಿತಸ್ತ್ರ ಪರೀಕ್ಷಾ ಅಧಿಕಾರಿಗಳನ್ನು ಕೂಡಲೆ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಚಿತ್ತಾಪುರ ಬ್ರಾಹ್ಮಣ ಸಮಾಜ ಸರ್ಕಾರಕ್ಕೆ ಮತ್ತು ಶಿಕ್ಷಣ ಸಚಿವರಿಗೆ ಒತ್ತಾಯಿಸಿದರು, ಅಲ್ಲದೆ ಪರೀಕ್ಷೆ ಬರೆಯುವಲ್ಲಿ ವಂಚಿತರಾದ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಪುನಃ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಒಂದು ವೇಳೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೆ ರಾಜ್ಯಾದ್ಯಂತ ಎಲ್ಲಾ ವಿದ್ಯಾರ್ಥಿಗಳು ಹಾಗೂ ಹಾಗೂ ಇಡೀ ಬ್ರಾಹ್ಮಣ ಸಮಾಜದ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಮುಖಂಡರಾದ ರವಿ ಕುಲಕರ್ಣಿ, ರಾಮಾಚಾರ್ಯ, ರಾಘವೇಂದ್ರ ಜಾನೀಬ್, ಸಂಜೀವ್ ಕುಲಕರ್ಣಿ, ರಾಜೀವ್ ಕುಲಕರ್ಣಿ, ದೇವಿದಾಸ ಕುಲಕರ್ಣಿ, ಪವನ್ ಜೋಶಿ, ಗುಂಡು ದೇಶಪಾಂಡೆ, ಶಶಾಂಕ್ ಕುಲಕರ್ಣಿ, ಸಂಜೀವ್ ಜಾನೀಬ್, ನರಸಿಂಹ ಕುಲಕರ್ಣಿ, ರಾಘವೇಂದ್ರ, ನಾಗರಾಜ್ ಅಲ್ಲೂರ.ಬಿ ಇದ್ದರು.