ಚಿತ್ತಾಪುರ ರೇವಣಸಿದ್ದಪ್ಪ ಕಾಂತಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿ.23 ರಂದು ಉದ್ಯೋಗ ಮೇಳ: ಬಿರಾದಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಕ್ಯಾಡ ಮ್ಯಾಕ್ಸ್ ಎಜುಕೇಷನ್ ಟ್ರಸ್ಟ್ ಸಹಯೋಗದೊಂದಿಗೆ ಏಪ್ರಿಲ್ 23 ರಂದು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಪ್ರಾಚಾರ್ಯ ಡಾ. ಶಿವಶರಣಪ್ಪ ಬಿರಾದಾರ ತಿಳಿಸಿದ್ದಾರೆ.
ಈ ಉದ್ಯೋಗ ಮೇಳದಲ್ಲಿ ಮಹಿಂದ್ರಾ ಏರೋ ಸ್ಪೇಸ್, ಟಾಟಾ ಅಡ್ವಾನ್ಸಡ್ ಸಿಸ್ಟಮ್, ವಿಪ್ರೋ ಕವಾಸಕಿ, ಜಷ್ಟೋ, ಸನ್‌ಸೇರಾ ಇಂಜಿನಿಯರಿಂಗ್, ಡೆನ್ಸಿ, ಇಂಡೋ-ಮಿಮ್, ಡಾಟಾ ಕಾರ್ಪ ಟ್ರಾಫಿಕ್, ಅಮಾಸಲ್, ಅಸ್ಟ್ರಾಲ್ ಪೇಂಟ್ಸ್, ಎನ್.ಟಿ.ಎಫ್, ಟಿ.ಡಿ.ಪಿ.ಎಸ್. ಎಂಡ್ಯೂರೆನ್ಸ್ ಮತ್ತಿತರ ಸುಮಾರು 20 ಕಂಪನಿಗಳು ಭಾಗವಹಿಸಲಿವೆ ಆದ್ದರಿಂದ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಗ್ರಿ ಪಾಸಾದ ಅಭ್ಯರ್ಥಿಗಳು ತಮ್ಮ ಸೂಕ್ತ ದಾಖಲೆಗಳ ಜೊತೆಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು ಎಂದು ಮಾಹಿತಿ ನೀಡಿದ್ದಾರೆ.
ರೇವಣಸಿದ್ದಪ್ಪ ಕಾಂತಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಹಾಗೂ ತಾಲೂಕಿನ ಉದ್ಯೋಗ ಆಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವುದರ ಮೂಲಕ ಇದರ ಸದುಪಯೋಗ ಪಡೆಯಬೇಕೆಂದು ಉದ್ಯೋಗ ಮಾಹಿತಿ ಕೋಶದ ಸಂಚಾಲಕ ಡಾ. ಮಲ್ಲಿಕಾರ್ಜುನ ಬಿರಾದಾರ ಮತ್ತು ಪ್ರಾಚಾರ್ಯ ಡಾ. ಶಿವಶರಣಪ್ಪ ಬಿರಾದಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.