ಚಿತ್ತಾಪುರ ಪಟ್ಟಣದಲ್ಲಿ ವ್ಯಕ್ತಿಯೋರ್ವನ ಕೊಲೆ ಬೆಚ್ಚಿಬಿದ್ದ ಜನತೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಹಳೆಯ ಕೋರ್ಟ್ ಎದುರು ಗಡೆ ಇರುವ ಲಕ್ಷ್ಮೀ ಅಟೋಮೊಬೈಲ್ ಅಂಗಡಿ ಹತ್ತಿರ ವ್ಯಕ್ತಿಯೋರ್ವನ ಕೊಲೆಯಾಗಿರುವ ವಿಷಯ ಭಾನುವಾರ ಬೆಳಿಗ್ಗೆ ತಿಳಿಯುತ್ತಿದ್ದಂತೆ ಪಟ್ಟಣದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಪಿಎಸ್ಐ ಶ್ರೀಶೈಲ್ ಅಂಬಾಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿಯ ಪ್ಯಾಂಟ್ ಶರ್ಟ್ ಪರೀಶಿಲನೆ ಮಾಡಿದ್ದು ಹಾಗೂ ಪ್ಲಾಸ್ಟಿಕ್ ಚೀಲದಲ್ಲಿಯೂ ಸಹ ಚೆಕ್ ಮಾಡಲಾಗಿದೆ ವಿಳಾಸದ ಯಾವುದೇ ದಾಖಲೆ ಇಲ್ಲ, ಈ ವ್ಯಕ್ತಿ ಎಲ್ಲಿಯವ, ಇಲ್ಲಿಗೇಕೆ ಬಂದ ಮತ್ತು ಇತನನ್ನು ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಕೊಲೆಯಾದ ವಿಷಯ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಕುತೂಹಲದಿಂದ ಹಾಗೂ ಆತಂಕದಿಂದ ಜನರು ತಂಡೋಪ ತಂಡವಾಗಿ ನೋಡಲು ಘಟನಾ ಸ್ಥಳದಲ್ಲಿ ಜಮಾಯಿಸಿದ್ದಾರೆ.