ಚಿತ್ತಾಪುರ ರೇವಣಸಿದ್ದಪ್ಪ ಕಾಂತಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26 ನೇ ಸಾಲಿನ ಪ್ರವೇಶ ಪ್ರಾರಂಭ: ಬಿರಾದಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26 ನೇ ಶೈಕ್ಷಣಿಕ ಸಾಲಿಗಾಗಿ ಬಿ.ಎ, ಬಿ.ಕಾಂ., ಬಿ.ಎಸ್ಸಿ ಮತ್ತು ಬಿ.ಸಿ.ಎ, ಕೋರ್ಸುಗಳಿಗಾಗಿ ಏಪ್ರಿಲ್ 21 ರಿಂದ ಪ್ರವೇಶ ಪ್ರಾರಂಭವಾಗುತ್ತವೆ. ಪಿ.ಯು.ಸಿ ಮತ್ತು ತತ್ಸಮಾನ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅರ್ಹರಿರುತ್ತಾರೆ ಎಂದು ಪ್ರಾಚಾರ್ಯ ಡಾ.ಶಿವಶರಣಪ್ಪ ಬಿರಾದಾರ ತಿಳಿಸಿದ್ದಾರೆ.
ಸರ್ಕಾರ ನಿಗದಿಪಡಿಸಿದ ಶುಲ್ಕ ಮಾತ್ರ ಇದ್ದು, ಸರ್ಕಾರ ನೀಡುವ ಎಲ್ಲಾ ರೀತಿಯ ಶಿಷ್ಯವೇತನ ಸೌಲಭ್ಯಗಳು ದೊರಕುತ್ತವೆ. ನುರಿತ ಮತ್ತು ಪರಿಣಿತ ಅಧ್ಯಾಪಕರಿದ್ದು, ನಿರಂತರ ಪಾಠ-ಪ್ರವಚನಗಳು, ಪಠ್ಯೇತರ ಚಟುವಟಿಕೆಗಳು ನಿಯಮಾನುಸಾರ ಜರಗುತ್ತವೆ. ಚಿತ್ತಾಪುರ ಪಟ್ಟಣ ಮತ್ತು ತಾಲೂಕಿನ ಪದವಿ ವ್ಯಾಸಂಗ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.
ಬಿ.ಸಿ.ಎ. ಕೋರ್ಸಿಗೆ ಕೇವಲ 40 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಇರುತ್ತದೆ. ವೇಳಾಪಟ್ಟಿ ಅನುಸಾರ ಪ್ರತಿ ವಿಷಯದ ತರಗತಿಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯಲು, ಶೈಕ್ಷಣಿಕ ಮತ್ತು ವೈಕ್ತಿತ್ವ ವಿಕಸನ ಮಾಡಿಕೊಳ್ಳಲು ರೇವಣಸಿದ್ದಪ್ಪ ಕಾಂತಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕೆಂದು ಪ್ರಾಚಾರ್ಯ ಡಾ. ಶಿವಶರಣಪ್ಪ ಬಿರಾದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.