Oplus_131072

ಚಿತ್ತಾಪುರ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ, ಆಧುನಿಕ ಭಾರತದ ಅಭಿವೃದ್ಧಿಗೆ ಡಿಜಿಟಲ್ ಸಾಕ್ಷರತೆ ಪೂರಕ: ಕಲ್ಲಶೆಟ್ಟಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಆಧುನಿಕ ಭಾರತದ ಅಭಿವೃದ್ಧಿಗೆ ಡಿಜಿಟಲ್ ಸಾಕ್ಷರತೆ ಪೂರಕವಾಗಿದೆ ಎಂದು ಎಂ.ಬಿ.ಪಾಟೀಲ ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ಕಲ್ಲಶೆಟ್ಟಿ ಹೇಳಿದರು.

ಪಟ್ಟಣದ ಶ್ರೀ ರೇವಣಸಿದ್ದಪ್ಪ ಕಾಂತಾ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಹಾಗೂ ಸಂಶೋಧನಾ ಕೇಂದ್ರ, ಚಿತ್ತಾಪುರ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2024-25 ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದ ಅವರು,  ಪ್ರತಿಯೊಂದು ಕ್ಷೇತ್ರದಲ್ಲೂ ಡಿಜಿಟಲ್ ಸೇವೆ ಇದೆ ಇದು ಜನರಿಗೆ ಬಹಳ ಅನುಕೂಲವಾಗಿದೆ ಎಂದರು. ಡಿಜಿಟಲ್ ದಿಂದ ಒಳ್ಳೆಯದು ಇದೆ ಕೆಟ್ಟದು ಇದೆ, ಡಿಜಿಟಲ್ ಆನ್ ಲೈನ್ ದಲ್ಲಿ ಹೆಚ್ಚಾಗಿ ಮೋಸ ವಂಚನೆಯ ಪ್ರಕರಣಗಳು ನಡೆಯುತ್ತಿವೆ ಇದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ವಿಶೇಷ ಉಪನ್ಯಾಸಕರಾಗಿ ಹಿರಿಯ ಪತ್ರಕರ್ತ ಕಾಶಿನಾಥ ಗುತ್ತೇದಾರ ಅವರು, ನನ್ನ ಭಾರತಕ್ಕಾಗಿ ಯುವಕರು ಮತ್ತು ಡಿಜಿಟಲ್ ಸಾಕ್ಷರತೆಗಾಗಿ ಯುವಕರು ವಿಷಯ ಕುರಿತು ಮಾತನಾಡಿ, ಪ್ರಸ್ತುತ ಡಿಜಿಟಲ್ ಯುಗವಾಗಿದ್ದು ಎಲ್ಲರೂ ಬುದ್ಧಿವಂತರಾಗಿದ್ದಾರೆ ಹೀಗಾಗಿ ದೇಶ ಪ್ರಗತಿ ಕಾಣುತ್ತಿದೆ ಈ ನಿಟ್ಟಿನಲ್ಲಿ ಸರ್ಕಾರಗಳು ಡಿಜಿಟಲ್ ಸಾಕ್ಷರತೆಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ಹೇಳಿದರು. ಈಗ ಎಲ್ಲರೂ ಮೊಬೈಲ್ ಬಳಕೆ ಮಾಡುತ್ತಾರೆ ಇದರಿಂದ ಡಿಜಿಟಲ್ ಸೇವೆ ಉಪಯೋಗ ತುರ್ತಾಗಿ ಆಗುತ್ತಿದೆ ಇದರಿಂದ ತುಂಬಾ ಅನುಕೂಲ ಕೂಡ ಆಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಎನ್ಎಸ್ಎಸ್ ಪೂರಕವಾಗಿದ್ದು ಶಿಬಿರದಲ್ಲಿ ಸಕ್ರೀಯವಾಗಿ ಭಾಗವಹಿಸಿ ಜನರಲ್ಲಿ ಸೇವಾ ಮನೋಭಾವ, ಮೂಡನಂಬಿಕೆ, ವೈಜ್ಞಾನಿಕ ಮನೋಭಾವ, ಆರೋಗ್ಯ, ಶಿಕ್ಷಣ ಮತ್ತು ಪರಿಸರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎನ್ಎಸ್ಎಸ್ ಕಾರ್ಯಕ್ರಮದ ಅಧಿಕಾರಿ ಪ್ರೊ.ಅನೀಲಕುಮಾರ ಮಂದೋಲಕರ್, ಅತಿಥಿ ಉಪನ್ಯಾಸಕ ಡಾ.ಗುರುಲಿಂಗಪ್ಪ ತುಂಗಳ ಅವರು ಮಾತನಾಡಿದರು.

ಎನ್ಎಸ್ಎಸ್ ಕಾರ್ಯಕ್ರಮದ ಅಧಿಕಾರಿಗಳಾದ ಡಾ.ಸಂಗಪ್ಪ ಮಾಮನಶೆಟ್ಟಿ, ಪ್ರೊ.ಸಾವಿತ್ರಿ ದೇಸಾಯಿ,  ಡಾ.ಮಂಜುನಾಥ ದೇಶಪಾಂಡೆ, ಮರೆಪ್ಪ ಮೇತ್ರಿ ಸೇರಿದಂತೆ ಶಿಬಿರಾರ್ಥಿಗಳು, ಬಸವೇಶ್ವರ ತಂಡದ ಸದಸ್ಯರು ಭಾಗವಹಿಸಿದ್ದರು. ಕಾವೇರಿ ಪ್ರಾರ್ಥಿಸಿದರು, ಆಕಾಶ ಸ್ವಾಗತಿಸಿದರು, ಶಂಕರ ನಿರೂಪಿಸಿದರು, ಸಂತೋಷಕುಮಾರ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!