ಮುನಿರತ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ತನಿಖೆ ನಡೆಸಲು ಸಂಗಾವಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಗುತ್ತಿಗೆದಾರ ಚೆಲುವರಾಜ ಇವರನ್ನು ಲಂಚಕ್ಕಾಗಿ ಪೀಡಿಸಿ ದಲಿತರ ವಿರುದ್ಧ ಅವಹೇಳನಕಾರಿ ಮಾತನಾಡಿ ಜಾತಿ ನಿಂದನೆ ಮಾಡಿರುವುದು ಅತ್ಯಂತ ಅಸಹ್ಯಕರ ಬೆಳವಣಿಗೆಯಾಗಿರುತ್ತದೆ. ಮತ್ತು ಒಕ್ಕಲಿಗರ ಹೆಣ್ಣುಮಕ್ಕಳ ಬಗ್ಗೆಯು ಅಶ್ಲೀಲ ಮತ್ತು ಅಸಭ್ಯ ಪದಗಳನ್ನು ಉಪಯೋಗಿಸಿ ಮಾತನಾಡಿದ್ದು ನಮ್ಮ ರಾಜ್ಯದ ಮತ್ತು ದೇಶದ ಜನತೆಗೆ ಅಪಮಾನ ಮಾಡಿದಂತಾಗಿದೆ ಕೂಡಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಮಹಾಂತಪ್ಪ ಕೆ. ಸಂಗಾವಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿದ ಅವರು, ಈಗಾಗಲೇ ಬಂಧನಕ್ಕೊಳಗಾಗಿರುವ ಮುನಿರತ್ನ ನಾಯ್ಡು ಜಾಮೀನಿನ ಮೇಲೆ ಹೊರ ಬಂದರೆ ಸಾಕ್ಷ್ಯನಾಶ ಮತ್ತು ವ್ಯಕ್ತಿಗಳ ಮೇಲೆ ಒತ್ತಡ ತಂದು ಕೇಸನ್ನು ತಲೆಕೆಳಗಾಗಿ ಮಾಡಬಹುದು ಆದ್ದರಿಂದ ದಲಿತರ ಮೇಲೆ ಈ ರೀತಿ ಜಾತಿ ನಿಂದನೆ ಪದಗಳನ್ನು ಉಪಯೋಗಿಸಿ ಇಡೀ ದಲಿತ ಸಮಾಜಕ್ಕೆ ಅವಮಾನ ಮಾಡಿರುತ್ತಾರೆ. ಇಂತಹ ನಾಗರೀಕ ಸಮಾಜದಲ್ಲೂ ಜನಗಳಿಂದ ಆಯ್ಕೆಯಾದ ಒಬ್ಬ ಜನಪ್ರತಿನಿಧಿ ಒಂದು ಕನಿಷ್ಟ ಮಾನವಿಯತೆಯನ್ನು ಇಟ್ಟುಕೊಳ್ಳದೆ ಈ ರೀತಿ ನಡೆದುಕೊಂಡಿರುವು ದುರದುಷ್ಟಕರ ಎಂದು ತಿಳಿಸಿದ್ದಾರೆ.
ಮುನಿರತ್ನ ರವರನ್ನು ತನಿಖೆ ಮುಗಿಯುವ ವರೆಗೂ ದಲಿತ ಮೇಲೆ ದೌರ್ಜನ್ಯ ಕಾಯ್ದೆಯಡಿ ಜಾಮೀನು ರಹಿತ ಬಂಧನ ಮಾಡಿ ಇವರನ್ನು ವಿಧಾನಸಭೆಯ ಸ್ಪೀಕರ್ ರವರು ತಮಗೆ ಇರುವ ದತ್ತ ಅಧಿಕಾರವನ್ನು ಉಪಯೋಗಿಸಿ ಮುನಿರತ್ನರವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸ ಬೇಕು ಎಂದು ಕಾಂಗ್ರೆಸ್ ಪ.ಜಾ.ವಿಭಾಗದ ಜಿಲ್ಲಾ ಉಸ್ತುವಾರಿ ಕಲ್ಯಾಣರಾವ ಟಿ.ತೊನಸಳ್ಳಿ, ಮಾಧ್ಯಮ ವಕ್ತಾರ ತಿಪ್ಪಣ್ಣ ಒಡೆಯರಾಜ್, ಉಪಾಧ್ಯಕ್ಷ ಮಲ್ಲಿಕಾರ್ಜುನ ನೀಲೂರ, ಬ್ಲಾಕ್ ಸಮಿತಿ ಅಧ್ಯಕ್ಷ ಅಪ್ಪಾರಾವ ಪಟ್ಟಣಕರ್ ಅವರು ಒತ್ತಾಯಿಸಿದ್ದಾರೆ.