ಇಟಗಾ ಜನಸಾಗರದ ಮಧ್ಯೆ ಬಯಲು ಬಸವೇಶ್ವರ ಅದ್ದೂರಿ ರಥೋತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಇಟಗಾ ಗ್ರಾಮದಲ್ಲಿ ಬುಧವಾರ ರಾತ್ರಿ ಬಯಲು ಬಸವೇಶ್ವರ ರಥೋತ್ಸವ ಬಹಳ ಅದ್ದೂರಿಯಾಗಿ ಜರುಗಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ರಥೋತ್ಸವ ಜರುಗುತ್ತಿದ್ದಂತೆ ಖಾರಿ, ಉತ್ತತ್ತಿ, ಬಾಳೆಹಣ್ಣು, ನಾಣ್ಯ ರಥದ ಮೇಲೆ ಎಸೆಯುವ ಮೂಲಕ ಭಕ್ತಿ ಭಾವ ಮೆರೆದರು. ರಥೋತ್ಸವಕ್ಕೆ ಪೂಜೆ ಪುನಸ್ಕಾರ ಜೊತೆಗೆ ಪುರವಂತರ ಸೇವೆ ನಡೆಯಿತು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಮ್ಮಣ್ಣ ಡಿಗ್ಗಿ, ಸಿದ್ದಣ್ಣಗೌಡ ಮಾಲಿ ಪಾಟೀಲ, ಸಾಬಣ್ಣ ಡಿಗ್ಗಿ, ತಿಪ್ಪಣ್ಣ ದಳಪತಿ, ಸಾಬಣ್ಣ ತಳವಾರ, ಸತ್ಯಪ್ಪ ತಳವಾರ, ಹಣಮಂತ್ರಾಯ ಇಟಗಿ, ಮಹಾದೇವ ಡಿಗ್ಗಿ, ನಿಂಬಣ್ಣಗೌಡ ಮಾಲಿ ಪಾಟೀಲ, ಸಾಬಣ್ಣ ಕುಂಬಾರ, ದೊಡ್ಡ ದೇವಪ್ಪ ಬೊಮ್ಮನಳ್ಳಿ, ಸಿದ್ರಾಮ ಕೊಗನೂರ, ಮಹಾದೇವ ಮುಗುಟಿ, ಮಲ್ಲಪ್ಪ ತೊನಸನಳ್ಳಿ, ಸುಬ್ಬಣ್ಣ ಕುಂಬಾರ, ಶೇಖಪ್ಪ ಹಿಂದರಕಿ, ಆನಂದ ಯರಗಲ್, ಗೂಳಿ ಡಿಗ್ಗಿ, ದೇವು ಡಿಗ್ಗಿ, ಅಶೋಕ ಗುತ್ತೇದಾರ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು. ಪಿಎಸ್ಐ ಚಂದ್ರಾಮಪ್ಪ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.