ಭರತನೂರ: 20 ಲಕ್ಷ ರೂ. ಅನುದಾನದ ಡಾ. ಬಾಬು ಜಗಜೀವನರಾಮ್ ಸಮುದಾಯ ಭವನ ಕಾಮಗಾರಿಗೆ ಶಾಸಕ ಡಾ. ಅವಿನಾಶ ಜಾಧವ್ ಗುದ್ದಲಿ ಪೂಜೆ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ತಾಲೂಕಿನ ಭರತನೂರ ಗ್ರಾಮದಲ್ಲಿ 2019-20 ನೇ ಸಾಲಿನ 20 ಲಕ್ಷ ರೂ.ವೆಚ್ಚದ ಅನುದಾನದಲ್ಲಿ ಡಾ. ಬಾಬು ಜಗಜೀವನರಾಮ್ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಡಾ. ಅವಿನಾಶ ಜಾಧವ್ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಸಮುದಾಯ ಭವನದಲ್ಲಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು, ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಡಾ. ಬಾಬು ಜಗಜೀವನರಾಮ ಭವನದ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಹಾಗೂ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಿಡಬ್ಲ್ಯೂಡಿ ಎಇಇ ಮಲ್ಲಿಕಾರ್ಜುನ ದಂಡಿನ್, ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಪ್ರಶಾಂತ ಕದಮ್, ಗ್ರಾ.ಪಂ ಅಧ್ಯಕ್ಷ ಪ್ರಕಾಶರೆಡ್ಡಿ ಪಿರೆಡ್ಡಿ, ಶೇಖರ ಪಾಟೀಲ್, ಕೇಸು ಚವ್ಹಾಣ, ಶಿವಕುಮಾರ ಕೊಡಸಾಲಿ, ಸುಂದರ ಡಿ. ಸಾಗರ, ಗಣೇಶ ಸಿಂಗಶೆಟ್ಟಿ, ಗ್ರಾ.ಪಂ ಸದಸ್ಯ ಶರಣು ರಾಜಾಪೂರ, ದಿಲೀಪ ಭರತನೂರ, ಮಹೇಶ ಭರತನೂರ ಸೇರಿದಂತೆ ಇತರರು ಇದ್ದರು.