ಚಿತ್ತಾಪುರ ವಿದ್ಯಾನಿಕೇತನ ಪ್ರೌಢ ಶಾಲೆಗೆ ಶೇ.99 ಫಲಿತಾಂಶ, ಸಹನಾ ಬಳ್ಳಾ ಶೇ.97.76 ಅಂಕ ಪಡೆದು ಶಾಲೆಗೆ ಟಾಪರ್: ಆಡಳಿತ ಮಂಡಳಿ ಹರ್ಷ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಈಚೇಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ಸಂಚಾಲಿತ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಶೇ.99 ಫಲಿತಾಂಶ ಬಂದಿದೆ ಎಂದು ಶಾಲೆಯ ಮುಖ್ಯಗುರು ರಮೇಶ್ ಯಾದವಾಡ್ ತಿಳಿಸಿದ್ದಾರೆ.
2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾದ ಒಟ್ಟು 54 ವಿದ್ಯಾರ್ಥಿಗಳ ಪೈಕಿ 53 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.90 ಪ್ರತಿಶತಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳ ಸಂಖ್ಯೆ-20, ಶೇ.85 ಪ್ರತಿಶತಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳ ಸಂಖ್ಯೆ- 9, ಶೇ.60 ಪ್ರತಿಶತಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳ ಸಂಖ್ಯೆ- 19, ಶೇ.50 ಪ್ರತಿಶತಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳ ಸಂಖ್ಯೆ-5
ಸಹನಾ ಬಳ್ಳಾ 611 (ಶೇ.97.76) ಅಂಕ ಪಡೆಯುವ ಮೂಲಕ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಉಳಿದಂತೆ ಅಕ್ಷರ .ಎಸ್ 610 (ಶೇ.97.60), ದಿನೇಶ ಜಾದವ 610 (ಶೇ.97.60), ಅಂಬಿಕಾ .ಬಿ 608 (ಶೇ.97.28), ವಹಿಬಾ 608 (ಶೇ.97.28) ಅಭಿನಂದಿಶ 606 (ಶೇ.96.96), ಚೇತನ.ಟಿ 605 (ಶೇ.96.80), ದೀಲಿಪ 602 (ಶೇ.96.32) ಸಮ್ಮಾ 600 (ಶೇ.96), ಅಬ್ದುಲ್ ಕರಿಂ 596 (ಶೇ.95.36), ಅನನ್ಯ ಭಕ್ತಿ 595 (ಶೇ.95.20), ಸಹನಾ ಮತ್ತಕುಂಟಿ 593 (ಶೇ.94.88), ತನುಶ್ರೀ 591 (ಶೇ.94.56) ಭರತ.ಆರ್ 581 (ಶೇ.92.96), ದಿವ್ಯಾ.ಆರ್ 576 (ಶೇ.92.16), ಅಂಬಿಕಾ ತೆಲ್ಕರ್ 575 (ಶೇ.92), ಕಾಶಿನಾಥ 568 (ಶೇ.90.88), ರವಿ 566 (ಶೇ.90.56), ಪ್ರಕೃತಿ 564 (ಶೇ.90.24), ಸಿಂಚನಾ 564 (ಶೇ.90.24), ಅಕ್ಷರಾ.ಎಸ್ 556 (ಶೇ.88.96), ಅಫಿಯಾ 556 (ಶೇ.88.96), ಶ್ರೇಯಾ 552 (ಶೇ.88.32), ಸೃಜನ್ 550 (ಶೇ.88), ಚೇತನ್ 546 (ಶೇ.87.36), ಕಾರ್ತಿಕ್. ಎಸ್ 542 (ಶೇ.86.72), ಪವನ 540 (ಶೇ.86.40), ಲಕ್ಷ್ಮೀ 536 (ಶೇ.85.76) ವೈಷ್ಣವಿ 532 (ಶೇ.85.12) ಅಂಕಗಳು ಪಡೆಯುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಪೆಂದು, ಆಡಳಿತ ಮಂಡಳಿಯ ಸದಸ್ಯರಾದ ಶಾಂತಕುಮಾರ್ ಹತ್ತಿ, ರವಿ ಸಜ್ಜನ್, ರಮೇಶ್ ಭಕ್ತಿ, ಪ್ರಲ್ಹಾದ ವಿಶ್ವಕರ್ಮ, ರಾಜಶೇಖರ್ ಬಳ್ಳಾ, ಶಂಭುಲಿಂಗ ಶಿಲ್ಪಿ, ಶಿವುಕುಮಾರ ಶೀಲವಂತ, ಪದ್ಮಾವತಿ ಬಾಬು, ಗೌತಮ್ ನಾಯಕ, ರಮೇಶ್ ಮತ್ತಕುಂಟಿ ಅವರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳು ಸಲ್ಲಿಸಿದ್ದಾರೆ.