Oplus_131072

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆಗೆ ಕೊನೆಯ ಸ್ಥಾನ ಇದಕ್ಕೆ ಶಿಕ್ಷಣ ಇಲಾಖೆಯೇ ಹೊಣೆ: ವೀರಣ್ಣ ಗಂಗಾಣಿ

ನಾಗಾವಿ ಎಕ್ಸಪ್ರೆಸ್

ಕಾಳಗಿ: 2024 25 ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲಬುರ್ಗಿ ಜಿಲ್ಲೆ ರಾಜ್ಯದ ಕೊನೆಯ ಸ್ಥಾನವನ್ನು ಪಡೆದಿದೆ ಇದು ಶೈಕ್ಷಣಿಕ ಅಭಿವೃದ್ಧಿಗೆ ಹಿನ್ನಡೆಯಾಗಿದೆ, ಇದಕ್ಕೆ ಶಿಕ್ಷಣ ಇಲಾಖೆಯ ಹೊಣೆ ಎಂದು ರೈತ ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ರಟಕಲ್ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಿಂದುಳಿದ ಕಲಬುರಗಿ ಕೊನೆಯ ಸ್ಥಾನ ಬರುವಲ್ಲಿ ತೊಂದರೆ ತೊಡಕುಗಳು ಶಿಕ್ಷಣ ಮಟ್ಟದಲ್ಲಿ ಲೋಪ ದೋಷಗಳು ಪತ್ತೆ ಹಚ್ಚಬೇಕು. ವಿದ್ಯಾರ್ಥಿಯ ಜೀವನದ ಬದಲಾವಣೆಯ ಪ್ರಮುಖ ಹಂತ ಎಸ್ಸೆಸ್ಸೆಲ್ಸಿ. ಅದೇ ರೀತಿಯಾಗಿ ಮಕ್ಕಳ ಶಿಕ್ಷಣ ಕುಂಠಿತವಾಗಲು ಕಾರಣವೇನು, ಸರ್ಕಾರ ಜಾರಿಗೆ ತರುವಂತ ಯೋಜನೆಗಳನ್ನು ವಿಫಲವಾಗುತ್ತಿದೆಯಾ ಏನು ಶಿಕ್ಷಕರ ನಿರ್ಲಕ್ಷವೇ ಕಾರಣನಾ, ಏನು ರಾಜಕಾರಣಿಗಳು ಕಾರಣ, ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬರುವುದಿಲ್ಲ ಬಂದರೂ ರಾಜಕೀಯ ಮಾತನಾಡುತ್ತಾರೆ ಶಾಲಾ ಶಿಕ್ಷಕರು ಇದು ನಮ್ಮ ಭಾಗದ ರಾಜಕಾರಣಿ ಶಿಕ್ಷಕರು ಎಂದು ದೂರಿದರು.

ಕೆಲಸಕ್ಕೆ ಕರಿಯಬೇಡಿ ಪಗಾರ ಮರೆಯಬೇಡಿ ಎಂಬಂತೆ ಶಿಕ್ಷಕರಿಗೆ ಸರಿಯಾದ ಸಮಯಕ್ಕೆ ತಮ್ಮ ಪಗಾರ ಬರಬೇಕು. ತಾವುಗಳು ಸರ್ಕಾರಿ ಶಾಲೆಯ ಪಗಾರ್ ತೆಗೆದುಕೊಳ್ಳಬೇಕು ಮತ್ತು ಅವರ ಮಕ್ಕಳು ಕಾನ್ವೆಂಟ್ ಶಾಲೆಗೆ ಕಳಿಸುತ್ತಾರೆ.  ಇನ್ನು ಮುಂದೆ ಯಾವ ಶಿಕ್ಷಕನ ಮಗ ಸರ್ಕಾರಿ ಶಾಲೆಯಲ್ಲಿ ಓದುತ್ತಾನೋ ಆ ಶಿಕ್ಷಕನಿಗೆ ಮಾತ್ರ ಸರ್ಕಾರಿ ಹುದ್ದೆ ಎಂದು ಸರಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಶಿಕ್ಷಕರು ಸರಿಯಾಗಿ ಪಾಠ ಬೋಧನೆ ಮಾಡುತ್ತಿಲ್ಲವಾ, ಮಕ್ಕಳಿಗೆ ಶಿಕ್ಷಣ ಮೇಲೆ ಆಸಕ್ತಿ ಕಡಿಮೆಯಾಗಿದೆಯಾ, ಸರ್ಕಾರವು ಶಿಕ್ಷಕರ ಕೊರತೆ ನಿವಾರಿಸುತ್ತಿಲ್ಲ, ಸರಿಯಾದ ಸಮಯದಲ್ಲಿ ನೇಮಕವಾಗುತ್ತಿಲ್ಲ ಈ ನಿಟ್ಟಿನಲ್ಲಿ ಶಿಕ್ಷಣ ಕುಂಠಿತವಾಗಲು ಮೂಲ ಕಾರಣವನ್ನು ಪತ್ತೆ ಹಚ್ಚಬೇಕು. ಮತ್ತು ಪಿಯುಸಿ ಪರೀಕ್ಷೆಯು ಇದೆ ಪರಸ್ಥಿತಿ ಆಗಿದೆ ಹಿಂಗಾದ ಮೇಲೆ ಕಲಬುರಗಿ ಗತಿ ಅದೋ ಗತಿ. ಎಲ್ಲಾ ಸೌಕರ್ಯ ಇರುವದು ಬೆಂಗಳೂರಿನಲ್ಲಿ ಮಾತ್ರ. ನಮ್ಮ ಉತ್ತರ ಕರ್ನಾಟಕ ಯಾವ ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ. ನಮ್ಮ ಭಾಗದ ಜನರು ಗುಳೆ ಹೋಗುವುದು ತಪ್ಪತ್ತಿಲ್ಲ. ಶಿಕ್ಷಣ ಇಲಾಖೆಯ ತಜ್ಞರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!