ದಂಡೋತಿ ವಿವಿಧ ಸಾಧಕ ಮಹಿಳೆಯರಿಗೆ ಭೃಂಗಿಮಠದ ಸದ್ಭಾವನ ಪ್ರಶಸ್ತಿ ಪ್ರಧಾನ, ಮಹಿಳೆಯರಿಗೆ ಗೌರವಿಸುವ ಸಂಸ್ಕೃತಿ ಅಭಿವೃದ್ಧಿಗೆ ಪೂರಕ: ಆರತಿ ತುಪ್ಪದ್ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಮಹಿಳೆಯರಿಗೆ ಗೌರವಿಸುವ ಸಂಸ್ಕೃತಿ ಸಮಾಜದ ಅಭಿವೃದ್ದಿಗೆ ಪೂರಕ ಎಂದು ಆರತಿ ತುಪ್ಪದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆರತಿ ತುಪ್ಪದ್ ಹೇಳಿದರು.

ತಾಲೂಕಿನ ದಂಡೋತಿ ಗ್ರಾಮದದಲ್ಲಿ ಭೃಂಗಿಮಠ ಫೌಂಡೇಶನ್ ವತಿಯಿಂದ ಕಾಯಕಯೋಗಿ ಪೂಜ್ಯ ಶ್ರೀ ಗದಿಗಯ್ಯ ಮಹಾಸ್ವಾಮಿಗಳು ಭೃಂಗಿಮಠ ದಂಡೋತಿ ಇವರ 17ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸದ್ಭಾವನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಎಲ್ಲಾ ರಂಗಗಳಲ್ಲಿ ಮಹಿಳೆಯರು ತಮ್ಮ ಛಾಪನ್ನು ಮೂಡಿಸಿದ್ದಾರೆ ಯಾವುದರಲ್ಲೂ ಹಿಂದುಳಿದಿಲ್ಲ ಎಂದರು. ಸಾಧಕ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದ ಮಲ್ಲಿಕಾರ್ಜುನ ಭೃಂಗಿಮಠ ಅವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಗನವಾಡಿ ಕಾರ್ಯಕರ್ತೆ ವಿದ್ಯಾನಿಧಿ ಕವಡೆ ದಂಡೋತಿ ಅವರು ಮಾತನಾಡಿ, ಗದಿಗಯ್ಯ ಸ್ವಾಮಿ‌ಜೀ ಅವರು ಐದು ದಶಕಗಳ ಹಿಂದೆಯೇ ಸಮಾನತೆಗಾಗಿ, ಶಿಕ್ಷಣಕ್ಕಾಗಿ ಶ್ರಮಿಸಿದ ಮಹಾತ್ಮರಾಗಿದ್ದರು ಇಂತಹವರ ಆದರ್ಶ ಪಾಲಿಸಿದರೆ ಸಮಾಜವು ಉತ್ತುಂಗ ಮಟ್ಟಕ್ಕೆ ಏರುತ್ತದೆ ಎಂದರು.

ಉತ್ತಮ ಸೇವೆ ಮಾಡಿದ ಚಿತ್ತಾಪುರದ ಸಿಡಿಪಿಓ ಆರತಿ ತುಪ್ಪದ್, ಮೇಲ್ವಿಚಾರಕಿ ಕವಿತಾ ಪಾಟೀಲ, ಶೋಭಾ ಕಶೆಟ್ಟಿ, ಅಂಗನಾವಾಡಿ ಯುನಿಯನ್ ತಾಲೂಕು ಅಧ್ಯಕ್ಷೆ ದೇವಮ್ಮ ಅನ್ನದಾನಿ, ಅಂಗನವಾಡಿ‌ ಕಾರ್ಯಕರ್ತೆಯರಾದ ಪಾರ್ವತಿ ಡೊಣ್ಣೂರ, ವಿದ್ಯಾನಿಧಿ‌ ಆರ್ ಕವಡೆ, ಸುಮಾಲತಾ ಬೆಟಗೇರಿ, ಅಕ್ಕಮಹಾದೇವಿ ಅಣವೀರಯ್ಯ, ಗುರುನಬಾಯಿ ಓಂಪ್ರಕಾಶ ಕಾಳಗಿ, ಶಿವಕಾಂತಮ್ಮ ನರನಾಳ, ಲಲಿತಾ ಸೋಲಾಪುರ, ರೇಣುಕಾ ಶಹಾಬಾದ, ಉಪನ್ಯಾಸಕಿ ಅಂಬಿಕಾ ವಿಶ್ವಾರಾಧ್ಯ ಜಾಂಗಟೆಮಠ, ಉಪನ್ಯಾಸಕಿ ಪವಿತ್ರಾ  ಅವರನ್ನು ಭೃಂಗಿಮಠ ಸದ್ಭಾವನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪದ್ಮಾವತಿ ತೋಟದ, ಡಾ.ರಶ್ಮಿ ಭೃಂಗಿಮಠ ಆಗಮಿಸಿದ್ದರು. ಪೂಜ್ಯ ಬಸಲಿಂಗಮ್ಮ ಭೃಂಗಿಮಠ ಸಾನಿಧ್ಯ ವಹಿಸಿದ್ದರು. ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ, ಕವಿತಾ ಕಶೆಟ್ಟಿ, ಸಂಗೀತಾ ಮಠಪತಿ, ಪವಿತ್ರಾ  ಅಣವೀರಯ್ಯ, ಅಕ್ಕಮಹಾದೇವಿ ಅವರು ನೇತೃತ್ವ ವಹಿಸಿದ್ದರು.

ನೀಲಾವತಿ ಕೊಂಚೂರ, ವಿಜಯಲಕ್ಷ್ಮಿ ವಾರದ್, ಲಕ್ಷ್ಮೀ ಬಾಯಿ,  ಶ್ರೀದೇವಿ ದಂಡಗುಂಡ, ಲಲಿತಾ ಕಾಳಗಿ, ಬಸ್ಸಮ್ಮ ದಂಡಗುಂಡ, ರತ್ನಮ್ಮ ದಂಡಗುಂಡ, ಗಾಯಿತ್ರಿ ಕಾಳಗಿ, ಮೀನಾಕ್ಷಿ ಮಠಪತಿ ಮುಂತಾದವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ರಾಜು ಹಿರೇಮಠ ಮಾಡಿದರು, ರೇವಣಸಿದ್ಧಯ್ಯ ಅವರು ಸ್ವಾಗತಿಸಿದರು. ಅಂಬಿಕಾ ಜಾಂಗಟೆ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!