ತೆಂಗಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಲಿಂಗಬಸವ ಸೇಡಂ ಮತ್ತು ಉಪಾಧ್ಯಕ್ಷರಾಗಿ ಚನ್ನಬಸಪ್ಪ ಬಿರಾದಾರ ಅವಿರೋಧ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಕಾಳಗಿ: ತಾಲೂಕಿನ ತೆಂಗಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಲಿಂಗಬಸವ ಸೇಡಂ ಹಾಗೂ ಉಪಾಧ್ಯಕ್ಷರಾಗಿ ಚನ್ನಬಸಪ್ಪ ಬಿರಾದಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಣಮಂತರಾವ ದಶಪಾಳೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾದೇವ ಕಡ್ಲಿ ಅವರು ಘೋಷಣೆ ಮಾಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಲಿಂಗಬಸವ ಸೇಡಂ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚನ್ನಬಸಪ್ಪ ಬಿರಾದಾರ ಅವರು ನಾಮಪತ್ರ ಸಲ್ಲಿಸಿದರು. ಇವರ ಪ್ರತಿಸ್ಪರ್ಧೆಯಾಗಿ ಯಾವುದೇ ನಾಮಪತ್ರಗಳು ಬಾರದೆ ಇರುವುದರಿಂದ ಈ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಸಭೆಯಲ್ಲಿ ಘೋಷಿಸಿದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಬಸವರಾಜ ಮಾಡಬೂಳ, ರೇವಶೆಟ್ಟಿ ತುಪ್ಪದ, ಚಂದ್ರಶೇಖರ್ ಬಂಕಲಗಿ, ಲಕ್ಷ್ಮಣ ರಾಠೋಡ್, ಮಲ್ಲಿಕಾರ್ಜುನ ತೊನಸನಳ್ಳಿ, ಮಲ್ಲಿಕಾರ್ಜುನ ಮಾಡಬೂಳ, ಮಹಾದೇವ ಅಷ್ಟಗಿ, ರತಿದೇವಿ ಬೇರನ್, ಲಲಿತಾ ಆರ್ ಗೊಣಗಿ ಉಪಸ್ಥಿತಿರಿದ್ದರು. ಫಲಿತಾಂಶ ಹೊರಬೀಳುತ್ತಿದ್ದಂತೆ ಮುಖಂಡರು ಕಾರ್ಯಕರ್ತರು ಹಾಗೂ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಬಿಜೆಪಿ ಮುಖಂಡರಾದ ತೆಂಗಳಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರ ಬಸವರಾಜ ಬಸ್ತೆ, ಶರಣುಕುಮಾರ ಪೊಲೀಸ್ ಪಾಟೀಲ್, ವಿಜಯಕುಮಾರ ತುಪ್ಪದ್, ಬಸವರಾಜ ಬಂಕಲಗಿ, ಅರ್ಜುನ್ ನೈಕೋಡಿ, ಮಂಜುನಾಥ್ ಬೇರನ್, ಶರಣು ಬಂಕಲಗಿ, ಗುರುಬಸಪ್ಪ ಬೆರನ್, ಮಲ್ಲಿಕಾರ್ಜುನ ಕೇಶ್ವರ, ನಾಗರಾಜ ಕೇಶ್ವರ, ಜಯರಾಜ ಮುದಿರಾಜ, ವಿಶ್ವನಾಥ ಹಿಲ್ಲಾ, ಹಣಮಂತರಾವ ಬಾಳದೆ, ಮಲ್ಲಿಕಾರ್ಜುನ್ ಬುಳ್ಳಾ, ಸಾಬಣ್ಣ ತೋಸನಹಳ್ಳಿ, ಶಾಮರಾವ್ ಮಡಕಿ ಮತ್ತು ರೈತರು ಉಪಸ್ಥಿತರಿದ್ದು ಶುಭಾಶಯಗಳು ತಿಳಿಸಿದರು.