ಅಪರೇಷನ್ ಸಿಂಧೂರ್ ಕಾರ್ಯಚರಣೆ ಯಶಸ್ವಿ ಚಿತ್ತಾಪುರದಲ್ಲಿ ವಿಜಯೋತ್ಸವ, ಭಾರತೀಯ ಸೇನೆಯ ಕಾರ್ಯ ಶ್ಲಾಘನೀಯ: ನಾಲವಾರ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಹಲ್ಲಾಮ್‌ನಲ್ಲಿ ಅಮಾಯಕರ ಮೇಲೆ ನಡೆದ ದಾಳಿಗೆ ಪ್ರತಿಕಾರವಾಗಿ ಆಪರೇಷನ್ ಸಿಂಧೂರ ಮೂಲಕ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆಯ ಕಾರ್ಯ ಶ್ಲಾಘನೀಯ ಎಂದು ನಾಲವಾರ ಶ್ರೀ ಡಾ.ಸಿದ್ದತೋಟೇಂದ್ರ ಶಿವಾಚಾರ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಶರಣ ನಗರದ ಶರಣಬಸವೇಶ್ವರ ದೇವಸ್ಥಾನಕ್ಕೆ ಬುಧವಾರ ರಾತ್ರಿ ಭೇಟಿ ನೀಡಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಉಗ್ರರ ದಾಳಿಗೆ ನಮ್ಮ ಸೇನೆ ತಕ್ಕ ಉತ್ತರ ನೀಡಿದೆ, ಭಯೋತ್ಪಾದನೆ ನಿಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಠಿಣ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಕಾರ್ಯಚರಣೆಯನ್ನು ಯಶಸ್ವಿಯಾಗಿ ಕೈಗೊಂಡಿರುವುದರಿಂದ ದೇಶಾದ್ಯಂತ ವಿಜಯೋತ್ಸವ ನಡೆಯುತ್ತಿದೆ ಇದು ಹೆಮ್ಮೆ ಪಡುವಂತಹ ವಿಷಯ ಎಂದು ಹೇಳಿದರು. ಭಯೋತ್ಪಾದನೆ ನಿಗ್ರಹಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಈ ನಿಟ್ಟಿನಲ್ಲಿ ಮಕ್ಕಳಲ್ಲಿ ದೇಶಾಭಿಮಾನ ಮತ್ತು ದೇಶಭಕ್ತಿಯನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಶರಣಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಜೊತೆಗೆ ಪುರಾಣ ಹಾಗೂ ಉಡಿ ತುಂಬುವ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಯಶಸ್ವಿಯಾಗಿ ನಡೆದಿವೆ ಇದಕ್ಕೆ ಇಲ್ಲಿನ ಯುವಕರ ಒಗ್ಗಟ್ಟಿನ ಪರಿಶ್ರಮ ಮೆಚ್ಚುವಂಥದ್ದು ಎಂದು ಹೇಳಿದರು.
ಶರಣಬಸವೇಶ್ವರರ ಪುಣ್ಯ ಕ್ಷೇತ್ರಕ್ಕೆ ಅರಳಗುಂಡಗಿ ಮತ್ತು ಕಲಬುರಗಿ ಹೆಸರಾಗಿದ್ದವು ಈಗ ಮೂರನೇ ಪುಣ್ಯ ಕ್ಷೇತ್ರ ಚಿತ್ತಾಪುರ ಸೇರ್ಪಡೆಯಾಗಿದೆ. ಇಲ್ಲಿ ಭಕ್ತಿಯ ಪರಿಶ್ರಮದಿಂದ ಹಾಗೂ ಧರ್ಮದ ಸಂಘಟನೆಯಿಂದ ನಿರ್ಮಾಣಗೊಂಡ ಇದೊಂದು ಪವಿತ್ರ ದೇವಾಸ್ಥಾನವಾಗಿದೆ ಎಂದು ಬಣ್ಣಿಸಿದರು. ನಿತ್ಯದ ಒತ್ತಡದ ಜೀವನದಲ್ಲಿ ಮನುಷ್ಯನಿಗೆ ಒಂದಿಷ್ಟು ಶಾಂತಿ ನೆಮ್ಮದಿ ಸಿಗಲು ಈ ದೇವಸ್ಥಾನದ ವಾತಾವರಣ ಪೂರಕವಾಗಿದೆ, ಇಲ್ಲಿ ಪೂಜೆ ಪುನಸ್ಕಾರ ಧ್ಯಾನ, ಧರ್ಮದ ಚಟುವಟಿಕೆಗಳು ನಿರಂತರ ನಡೆಯಲಿ ಎಂದು ಹಾರೈಸಿದರು.
ಅಪರೇಷನ್ ಸಿಂಧೂರ್ ಕಾರ್ಯಚರಣೆ ಯಶಸ್ವಿ ಹಿನ್ನೆಲೆ ವಿಜಯೋತ್ಸವ ಆಚರಿಸಲಾಯಿತು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಭಕ್ತರಿಗೆ, ಯುವಕರಿಗೆ ನಾಲವಾರ ಶ್ರೀಗಳು ಹಣೆಗೆ ತಿಲಕವಿಟ್ಟು ವಿಜಯದ ನಗೆ ಬೀರಿದರು. ಭಕ್ತರು ಕೂಡ ಸಂಭ್ರಮಿಸಿದರು.
ಮುಖಂಡರಾದ ನಾಗರೆಡ್ಡಿ ಗೋಪಸೇನ್, ಬಸವರಾಜ ಕಾಳಗಿ, ಬಸವರಾಜ ಗೌಡ ಆಲೂರ, ಮಲ್ಲಿಕಾರ್ಜುನ ರೆಡ್ಡಿ ಇಜಾರ್, ನಾಗರಾಜ ರೇಷ್ಮಿ, ವಿಶ್ವಾರಾಧ್ಯ ಪಾಟೀಲ, ಅನೀಲ್ ವಡ್ಡಡಗಿ, ಕೋಟೇಶ್ವರ ರೇಷ್ಮಿ, ಮಹಾದೇವ ಅಂಗಡಿ, ಸಾಯಿ ನಿಪ್ಪಾಣಿ, ವಿಶ್ವರಾಜ ಜಗನ್ನಾಥ, ಶಿವು ಸ್ವಾಮಿ ತೋಟದ್, ಹಣಮಂತ ದೇಸಾಯಿ, ಶ್ರೀಧರ್ ವಾಡೆದ್, ಶರಣಗೌಡ ಮರಗೋಳ, ರಾಜಶೇಖರ್ ಗೋಣಿ, ಜಗದೇವ ದಿಗ್ಗಾಂವಕರ್, ಬಸವರಾಜ ಸಂಕನೂರ, ಸಂತೋಷ ಹಾವೇರಿ, ರೇವಣಸಿದ್ದಪ್ಪ ರೋಣದ್, ಮಹೇಶ್ ರೇಷ್ಮಿ, ಸಂಗಮೇಶ ರೋಣದ್, ಶ್ರೀಕಾಂತ್ ಸುಲೇಗಾಂವ, ಸಿದ್ದು ರೇಷ್ಮಿ, ಮೈಪಾಲ್ ಮೂಲಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಅಂಬರೀಶ್ ಸುಲೇಗಾಂವ ನಿರೂಪಿಸಿದರು.
“ಮಮತಾಮಯಿ, ತ್ಯಾಗಮಯಿಗಳಾದ ಶರಣಬಸವೇಶ್ವರರು ತಮ್ಮ ಕಾಯಕದಲ್ಲಿಯೇ ಕೈಲಾಸವನ್ನು ಕಂಡವರು. ದಾಸೋಹ ಕಾರ್ಯದ ಮೂಲಕ ಶರಣಬಸವೇಶ್ವರರು ಕಲಬುರಗಿ ಜನತೆಯ ಮನದಲ್ಲಿ ಅಮರರಾಗಿ ಉಳಿದಿದ್ದಾರೆ”.- ಡಾ.ಸಿದ್ದತೋಟೇಂದ್ರ ಶಿವಾಚಾರ್ಯರು ನಾಲವಾರ.