ಭಾರತೀಯ ಸೈನಿಕರಿಗೆ ನೈತಿಕ ಸ್ಥೈರ್ಯ ತುಂಬಲು ಬಿಜೆಪಿಯಿಂದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಯುದ್ದದಲ್ಲಿ ಭಾರತೀಯ ಸೈನಿಕರಿಗೆ ಬೆಂಬಲ ವ್ಯಕ್ತಪಡಿಸಿ ಮತ್ತು ಸೈನಿಕರಿಗೆ ನೈತಿಕ ಸ್ಥೈರ್ಯ ಕೊಡುವ ಉದ್ದೇಶದಿಂದ ಯಾದಗಿರಿ ನಗರದ ವಾರ್ಡ್ ನಂಬರ್ 24 ರ ಕಾಳಿಕಾದೇವಿ ದೇವಸ್ಥಾನ ಮತ್ತು ಅಂಬಾ ಭವಾನಿ ದೇವಾಲಯದಲ್ಲಿ ಬಿಜೆಪಿ ನಗರ ಮಂಡಲ ವತಿಯಿಂದ ಶನಿವಾರ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.
ಗಡಿಯಲ್ಲಿ ಜೀವದ ಹಂಗು ತೊರೆದು ದೇಶ ಕಾಯುತ್ತಿರುವ ಭಾರತದ ಸೈನಿಕರಿಗೆ ದೇವರ ಆಶೀರ್ವಾದವೀರಬೇಕು ಯಾವುದೇ ರೀತಿಯ ಅನಾಹುತ ಆಗದಂತೆ ಕಾಪಾಡಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡಿದರು. ಉಗ್ರಗಾಮಿಗಳಿಗೆ ಹಾಗೂ ಪಾಕಿಸ್ತಾನಕ್ಕೆ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ, ಗೃಹಮಂತ್ರಿ ಅಮಿತ್ ಶಾ, ರಕ್ಷಣಾ ಮಂತ್ರಿ ರಾಜನಾಥ್ ಸಿಂಗ ಸೈನಿಕರಿಗೆ ಭೂ ದಳ ನೌಕಾದಳ ವಾಯುದಳ ಮುಖ್ಯಸ್ಥರು ವಿರೋಧಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಪೂಜೆ ನೇತೃತ್ವವನ್ನು ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ನೇತ್ರತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ವಿಲಾಸ ಪಾಟೀಲ, ರಾಜು ಸ್ವಾಮಿ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕಟ್ಟಿಮನಿ, ರೈತ ಮೋರ್ಚ ನಗರ ಅಧ್ಯಕ್ಷ ಶಿವಣ್ಣ ಬಡಿಗೇರ, ಸಿದ್ದಲಿಂಗಪ್ಪ ನಾಯಕ, ಕಾಶೀರಾವ್ ಕಾಶಿರಾಯ ಚಿರ ಸಾಗರ, ರಾಜಶೇಖರ ಪತ್ತಾರ, ಶಿವಾನಂದ ಪತ್ತಾರ ಅನೇಕ ಮುಖಂಡರು ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು