ಶಹಾಬಾದ ಮೇ.18 ರಂದು ಬಾಬು ಜಗಜೀವನರಾಮ್ ರವರ 118ನೇ ಅದ್ದೂರಿ ಜಯಂತ್ಯೋತ್ಸವ: ಲಕ್ಷ್ಮೀಕಾಂತ ಬಳಿಚಕ್ರ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ನಗರದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ರವರ 118ನೇ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಇದೇ ಮೇ.18 ರಂದು ಆಚರಿಸಲಾಗುವುದು ಎಂದು ಬಾಬು ಜಗಜೀವನರಾಮ್ ಜಯಂತ್ಯೋತ್ಸವ ಸಮಿತಿಯ ತಾಲೂಕು ಅಧ್ಯಕ್ಷ ಲಕ್ಷ್ಮೀಕಾಂತ ಬಳಿಚಕ್ರ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಾದಿಗ ಸಮಾಜದ ವತಿಯಿಂದ ಭಾನುವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸರಕಾರಿ ಬಾಲಕರ ಪ್ರೌಢ ಶಾಲೆಯ ಆವರಣದಲ್ಲಿ ಅಂದು ಬೆಳಗ್ಗೆ 10-30 ಕ್ಕೆ ಬಾರಿ ಬಹಿರಂಗ ಸಭೆ ನಡೆಯಲಿದೆ ಎಂದರು.
ಅಂದು ಬೆಳಗ್ಗೆ 9 ಗಂಟೆಗೆ ಜಿಡಿಎ ಮಾಜಿ ನಿರ್ದೇಶಕ ಶ್ಯಾಮ್ ನಾಟೀಕಾರ ಧ್ವಜಾರೋಹಣ ನೇರವೇರಿಸುವರು, ಡಿಎಂಎಸ್ಎಸ್ ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ್ ರಕ್ತದಾನ ಶಿಬಿರದ ಉದ್ಘಾಟನೆ ಮಾಡುವರು. ಭಾರಿ ಬಹಿರಂಗ ಸಭೆ ಯನ್ನು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ರವರು ಉದ್ಘಾಟಿಸುವರು, ವಿಜಯಕುಮಾರ ಜಿ. ರಾಮಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವರು, ಮೈಸೂರಿನ ಸಾಮಾಜಿಕ ಚಿಂತಕ ಡಾ. ಆನಂದಕುಮಾರ ರವರು ವಿಶೇಷ ಉಪನ್ಯಾಸ ನೀಡುವರು.
ಮುಖ್ಯ ಅತಿಥಿಗಳಾಗಿ ಚಂದ್ರಿಕಾ ಪರಮೇಶ್ವರ, ಪ್ರೋ. ಬಾಲರಾಜ ಮಾಚನೂರ, ಎ.ಎಚ್ ನಾಗೇಶ, ರಾಜು ವಾಡೇಕರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಯಂತಿ ಅಂಗವಾಗಿ ಸಮಾಜದ ವತಿಯಿಂದ, ರಕ್ತದಾನ ಶಿಬಿರ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಾದಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸಾಯಂಕಾಲ 5 ಗಂಟೆಗೆ ಡಾ. ಬಾಬು ಜಗಜೀವನರಾಮ್ ವೃತ್ತ (ಬಸ್ ನಿಲ್ದಾಣ) ದಿಂದ ಡಾ. ಅಂಬೇಡ್ಕರ್ ಪ್ರತಿಮೆವರೆಗೆ ಭವ್ಯವಾದ ಸಾಂಸ್ಕೃತಿಕ ಮೆರವಣಿಗೆಯನ್ನು ನಗರ ಪೋಲಿಸ್ ಠಾಣೆಯ ಸಿಪಿಐ ನಟರಾಜ ಲಾಡೆ ಉದ್ಘಾಟಿಸುವರು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಯಂತ್ಯೋತ್ಸವ ಸಮಿತಿಯ ಗೌರವಾಧ್ಯಕ್ಷ ಶರಣು ಪಗಲಾಪುರ, ಮಾದಿಗ ಸಮಾಜದ ಅಧ್ಯಕ್ಷ ವಿಕ್ರಮ ಮೂಲಿಮನಿ, ಉಪಾಧ್ಯಕ್ಷರಾದ ಪ್ರಮೋದ ಮಲ್ಹಾರ, ಶಿವಕುಮಾರ ಮೇತ್ರಿ ಮತ್ತು ಮಲ್ಲೇಶಿ ಸೈದಾಪೂರ, ರವಿ ಬೆಳಮಗಿ, ಸಂತೋಷ ಕರಿಗುಡ್ಡ, ಮರಲಿಂಗ ಯಾದಗಿರಿ, ಅನಿಲ ಮೈನಾಳಕರ, ಶಿವನಾಗ ದುಪ್ಪಲ್ಲಿ, ನಾಗರಾಜ ಸಾಕ್ರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.